ಮೂಗರು, ಕಿವುಡರಿಗೆ ಉಚಿತ ಸ್ವಯಂವರ ವೇದಿಕೆಯಾಗಿ ‘ಮ್ಯಾಚುವರ್ಸ್’
ಬೆಂಗಳೂರು : ಮೂಗರು ಮತ್ತು ಕಿವುಡರ ಬದುಕು ಎಲ್ಲರಂತೆ ಚೆಂದಾಗಿರಬೇಕು ಎನ್ನುವ ಉದ್ದೇಶದಿಂದ ನಗರದ ಮ್ಯಾಚುವರ್ಸ್ ಸಂಸ್ಥೆ ಉಚಿತ ಸ್ವಯಂವರವೊಂದನ್ನು ಏರ್ಪಡಿಸಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೂಗರ ಮತ್ತು ಕಿವುಡರ ಸ್ವಯಂವರವನ್ನು ಮೇ 27ರ ಭಾನುವಾರದಂದು ಹಮ್ಮಿಕೊಳ್ಳಲಾಗಿದೆ. ಮ್ಯಾಚುವರ್ಸ್ ಸಂಸ್ಥೆಯು ಸ್ವಯಂ ಆಸಕ್ತಿಯಿಂದ, ಮಾತಿನ ಮತ್ತು ಕಿವುಡುತನದ ಸಮಸ್ಯೆಯನ್ನು ಎದುರಿಸುತ್ತಿರುವ ವಧೂ ವರರನ್ನು ಒಂದೆಡೆ ಸೇರಿಸುವ ಕೆಲಸವನ್ನು ಕೈಗೆತ್ತಿಕೊಂಡಿದೆ.
ಉಚಿತ ಸ್ವಯಂವರದಲ್ಲಿ ಭಾಗವಹಿಸುವಂತೆ ಮೂಗರ ಮತ್ತು ಕಿವುಡರ ವಿವಿಧ ಸಂಘಟನೆಗಳನ್ನು ಮ್ಯಾಚುವರ್ಸ್ ಸಂಸ್ಥೆ ಸಂಪರ್ಕಿಸಿದ್ದು, ಹೆತ್ತವರೊಂದಿಗೆ ಅಥವಾ ಪಾಲಕರೊಂದಿಗೆ ವಿವಾಹಾಕಾಂಕ್ಷಿಗಳು ಸ್ವಯಂವರಕ್ಕೆ ಬರಬೇಕು. ಬಾಳಸಂಗಾತಿಯ ಆಯ್ಕೆಗೆ ಮಾತ್ರ ಸಂಸ್ಥೆ ವೇದಿಕೆಯನ್ನು ಒದಗಿಸುತ್ತದೆ. ನಂತರ ಮದುವೆ ಸಮಾರಂಭವು ಯಾವ ಸಂಪ್ರದಾಯ ಮತ್ತು ರೀತಿಯಲ್ಲಿ ಆಗಬೇಕು ಎಂಬುದನ್ನು ಪಾಲಕರು ನಿರ್ಧರಿಸಬೇಕು ಎಂದು ಸಂಸ್ಥೆಯ ವಿಜಯ್ ಹೇಳಿದ್ದಾರೆ.
ಈ ಬಗೆಗಿನ ಹೆಚ್ಚಿನ ವಿವರಗಳಿಗೆ ಆಸಕ್ತರು ಮ್ಯಾಚುವರ್ಸ್ ಸಂಸ್ಥೆಯನ್ನು ಸಂಪರ್ಕಿಸಬಹುದು. ವಿಳಾಸ- ನಂ. 29, ಹಳೇ ಮದರಾಸು ರಸ್ತೆ, ಅಲಸೂರು, ಬೆಂಗಳೂರು - 560 008. ದೂರವಾಣಿ- 5364680, 5367339.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications