Get Updates
Get notified of breaking news, exclusive insights, and must-see stories!

ಜಿಟಿಸಿಐ ಸಹಯೋಗದಲ್ಲಿ ರಾಜ್ಯ ಐಟಿ ಕಾರಿಡಾರ್‌ ಅಭಿವೃದ್ಧಿ

ಬೆಂಗಳೂರು : ಜುರಾಂಗ್‌ ಟೌನ್‌ ಕಾರ್ಪೊರೇಷನ್‌ ಇಂಟರ್‌ನ್ಯಾಶನಲ್‌ (ಸಿಂಗಪೂರ್‌) ಪ್ರೆೃವೇಟ್‌ ಲಿಮಿಟೆಡ್‌ನೊಂದಿಗೆ (GTCI) ಕೈ ಜೋಡಿಸುವ ಮೂಲಕ ರಾಜ್ಯದ ಮಾಹಿತಿ ತಂತ್ರಜ್ಞಾನ ಕಾರಿಡಾರ್‌ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಸಿಂಗಪೂರ್‌ ಸೇರಿದಂತೆ ಏಷ್ಯಾದ ವಿವಿಧ ದೇಶಗಳಲ್ಲಿ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸಿದ ಅನುಭವ ಜಿಟಿಸಿಐಗಿದೆ. ಪ್ರಸ್ತುತ ರಾಜ್ಯದ ಐಟಿ ಕಾರಿಡಾರ್‌ ಅಭಿವೃದ್ಧಿಗಾಗಿ 3 ಲಕ್ಷದ 60 ಸಾವಿರ ಡಾಲರ್‌ಗಳ ಯೋಜನೆಯನ್ನು ಜಿಟಿಸಿಐ ಸಿದ್ಧಪಡಿಸಿದೆ.

ಯೋಜನೆಯನ್ನು ಕಾರ್ಯಗತಗೊಳಿಸಲು ಅನುವಾಗುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರ ಈಗಾಗಲೇ ನಿರ್ದೇಶನಗಳನ್ನು ನೀಡಿದ್ದು , ಯೋಜನೆಯ ವೆಚ್ಚವನ್ನು ಪ್ರಾಧಿಕಾರ ಹಾಗೂ ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆ ಹಂಚಿಕೊಳ್ಳಲಿವೆ. ರಾಜ್ಯ ಐಟಿ ಇಲಾಖೆ ನಿರ್ದೇಶಕ ಇ.ವಿ. ರಮಣರೆಡ್ಡಿ ಯೋಜನೆಗೆ ಸಂಬಂಧಿಸಿದಂತೆ ಬಿಡಿಎ ಆಯುಕ್ತರೊಂದಿಗೆ ಸಹಕರಿಸುವರು.

ರಾಜ್ಯ ಐಟಿ ಸೆಕ್ರಟರಿ ವಿವೇಕ್‌ ಕುಲಕರ್ಣಿ ಅವರ ಪ್ರಕಾರ, ಯೋಜನೆಗೆ ಸಂಬಂಧಿಸಿದ ಪ್ರಾಥಮಿಕ ಕೆಲಸಗಳು ಈಗಾಗಲೇ ಪ್ರಾರಂಭವಾಗಿವೆ. ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್‌ ನೆಲೆಗೊಂಡಿರುವ ವೈಟ್‌ಫೀಲ್ಡ್‌ ಹಾಗೂ ಎಲೆಕ್ಟ್ರಾನಿಕ್‌ ಸಿಟಿ ನಡುವಣ ವ್ಯಾಪ್ತಿಯನ್ನು ಈ ಯೋಜನೆ ಒಳಗೊಂಡಿದೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+