ಎರಡೂವರೆ ವರ್ಷಗಳ ಕಾಲ ಬಾಲಕನ ಮೆದುಳಿನಲ್ಲಿ ಪೆನ್ನು !
ಕೈರೋ : ಮೆದುಳಿನಲ್ಲಿ ಬಾಲ್ ಪಾಯಿಂಟ್ ಪೆನ್ ತೂರಿ ಸುಮಾರು ಎರಡೂವರೆ ವರ್ಷಗಳಿಂದ ನರಳುತ್ತಿದ್ದ ಮಗುವೀಗ ನೆಮ್ಮದಿಯ ಉಸಿರು ಬಿಟ್ಟಿದೆ . ವೈದ್ಯರಿಗೆ ದೊಡ್ಡ ಸವಾಲೊಂದರಲ್ಲಿ ಗೆದ್ದ ನಿರುಮ್ಮಳತೆ.
ಘಟನೆಯ ಹಿನ್ನೆಲೆ : ಈಗ್ಗೆ ಎರಡು ವರ್ಷಗಳ ಹಿಂದೆ ಇಬ್ರಾಹಿಂ ಫರಾಹತ್ ಎನ್ನುವ 10 ವರ್ಷದ ಹುಡುಗ ಆಕಸ್ಮಿಕವಾಗಿ ನೆಲಕ್ಕೆ ಬಿದ್ದ. ಸರಕ್ಕನೆ ಅಲ್ಲಿದ್ದ ಬಾಲ್ ಪಾಯಿಂಟ್ ಪೆನ್ ಕಣ್ಣೊಳಗೆ ತೂರಿ ನೆಲೆ ನಿಂತದ್ದು ಮೆದುಳಿನಲ್ಲಿ . ಎದುರಿಗೇ ಇದ್ದ ಅಮ್ಮ ಚೀರಿದಳು. ಅಷ್ಟರಲ್ಲಿ ಹುಡುಗ ಮೂರ್ಚೆ ಹೋಗಿದ್ದ . ರಕ್ತ ಸ್ರಾವ ಪ್ರವಾಹದಂತಿತ್ತು . ಚೇತರಿಸಿಕೊಂಡ ಅಮ್ಮ ಪೆನ್ನನ್ನು ಹೊರಗೆಳೆದಳು.
ಬಾಲಕನ ತಾಯಿ ಮಗನ ಕಣ್ಣಿನೊಳಗೆ ತೂರಿದ ಪೆನ್ನನ್ನು ಪೂರ್ತಿಯಾಗಿ ಹೊರಗೆಳೆದಿರುವುದಾಗಿಯೇ ನಂಬಿದ್ದಳು. ಉತ್ತರ ಈಜಿಪ್ಟಿನ ಮಾನ್ಸುರಾ ಆಸ್ಪತ್ರೆಗೆ ಗಾಯಗೊಂಡ ಬಾಲಕನನ್ನು ಕರೆದೊಯ್ದಾಗ, ಎಕ್ಸರೇ ತೆಗೆದ ವೈದ್ಯರು ಕೂಡ ಶರೀರದೊಳಗೆ ಯಾವುದೇ ಪರಕೀಯ ವಸ್ತು ಉಳಿದಿಲ್ಲವೆಂದೇ ಹೇಳಿದ್ದರು. ಎಲ್ಲಾ ಸರಿಯಾಗಿಯೇ ಇತ್ತು , ಆರು ತಿಂಗಳವರೆಗೂ. ಆನಂತರ-
ಹುಡುಗ ಪದೇ ಪದೇ ಜ್ವರದಿಂದ ಬಳಲತೊಡಗಿದ. ವೈದ್ಯರ ಚಿಕಿತ್ಸೆ ಫಲಕಾರಿಯಾಗಲಿಲ್ಲ . ಇದೇ ಹೊತ್ತಿಗೆ ಹುಡುಗನ ದೃಷ್ಟಿ ವಕ್ರವಾಯಿತು. ಆತ ಓರೆಗಣ್ಣಿನಿಂದ ನೋಡತೊಡಗಿದ. ಬಾಯಿಯಿಂದ ಕರಕರ ಶಬ್ದ ಹೊರಡಿಸತೊಡಗಿದ. ಹುಡುಗನ ಅಪ್ಪ ರೈತ. ತನ್ನ ಸಮಸ್ತ ಆಸ್ತಿಯನ್ನೂ ಮಗನ ಚಿಕಿತ್ಸೆಗಾಗಿ ಸುರಿದ. ಫಲವಾಗಿ, ಇತ್ತೀಚೆಗಷ್ಟೇ ನಡೆದ ಶಸ್ತ್ರ ಚಿಕಿತ್ಸೆಯಲ್ಲಿ ಮೆದುಳಿನೊಳಗೆ ಭದ್ರವಾಗಿ ಕೂತಿದ್ದ ಪೆನ್ನಿನ ಚೂರನ್ನು ವೈದ್ಯರು ತೆಗೆದುಹಾಕಿದರು. ಹುಡುಗ ಆರಾಮಾಗಿದ್ದಾನೆ. ಇದಕ್ಕೆ ಮುನ್ನ ಹುಡುಗನನ್ನು ಮೂರು ಶಸ್ತ್ರ ಚಿಕಿತ್ಸೆಗಳಿಗೆ ಗುರಿ ಪಡಿಸಲಾಗಿತ್ತು . ಇದಿಷ್ಟೂ ವಿಷಯವನ್ನು ತಿಳಿಸಿದ್ದು ಹುಡುಗನ ತಾಯಿ. ಆಕೆಯ ಹೇಳಿಕೆಯನ್ನು ಈಜಿಪ್ಟಿನ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications