ಬೆಂಗಳೂರು - ವಾಷಿಂಗ್ಟನ್-- ವರ್ಜೀನಿಯಾ ; ಬಾ ಹತ್ತಿರ, ಇನ್ನೂ ಹತ್ತಿರ
* ಇಮ್ರಾನ್ ಖುರೇಶಿ
ಬೆಂಗಳೂರು : ಅಮೆರಿಕೆಯ ಪ್ರತಿಕೂಲ ಆರ್ಥಿಕ ಪರಿಸ್ಥಿತಿಗಳು ಈ ಎರಡು ರಾಷ್ಟ್ರಗಳ ನಡುವಿನ ವಾಣಿಜ್ಯ ಹಾಗೂ ಉದ್ಯಮಕ್ಕೆ ಹೆಬ್ಬಂಡೆಯಂತೆ ನಿಂತಿದ್ದಾಗ್ಯೂ ಕರ್ನಾಟಕದ ಮಹಿಳಾ ಸಂಘಟಕಿಯರ ಸಂಘ (ಎಡಬ್ಯುಎಕೆಇ) ವಾಷಿಂಗ್ಟನ್ ಮೂಲದ ಸಂಸ್ಥೆಯ ಜತೆಗೂಡಿ ವರ್ಚ್ಯುಯಲ್ ವಾಣಿಜ್ಯದ ಸುವರ್ಣ ಮಹಲ್ ಕಟ್ಟಲು ಮುಂದಾಗಿದೆ. ಇದರಿಂದಾಗಿ ಬೆಂಗಳೂರು - ವಾಷಿಂಗ್ಟನ್ - ವರ್ಜೀನಿಯಾ ನಡುವೆ ವ್ಯಾಪಾರ - ವಹಿವಾಟು ಸುಗಮವಾಗಲಿದೆ.
ಮಾಹಿತಿ ತಂತ್ರಜ್ಞಾನದ ಉತ್ಪನ್ನಗಳ ಹಾಗೂ ಸೇವೆಗಳ ವಿಕ್ರಯಕ್ಕಾಗಿ ಅಮೆರಿಕೆಗೆ ಸೇರಿದ 24 ಹಾಗೂ ಭಾರತದ 30 ಸಣ್ಣ ಮತ್ತು ಮಧ್ಯಮ ಕಂಪನಿಗಳು ಸೇರಿ ಈ ಮಾಸಾಂತ್ಯಕ್ಕೆ ಒಡಂಬಡಿಕೆಗೆ ಸಹಿ ಹಾಕಲು ಸಜ್ಜಾಗಿವೆ. ಇಂಥ ವ್ಯಾಪಾರ -ವಹಿವಾಟು ಮಾಹಿತಿ ತಂತ್ರಜ್ಞಾನದ ಲಾಭ ಪಡೆದುಕೊಂಡೇ ಮುನ್ನಡೆಯುತ್ತದೆ. ಈ ಪ್ರಕ್ರಿಯೆಗೆ ಏಪ್ರಿಲ್ 16ರಿಂದಲೇ ಚಾಲನೆ ದೊರೆತಿದೆ.
ಈ ಪ್ರಕ್ರಿಯೆ ಎರಡೂ ದೇಶದ ಕಂಪನಿಗಳ ಅಧಿಕಾರಿಗಳೊಂದಿಗೆ ಮೇ 19ರ ಶನಿವಾರ ನಡೆದ ಪ್ರಥಮ ವಿಡಿಯೋ ಕಾನ್‌ಫರೆನ್ಸ್‌ನಲ್ಲಿ ಮೂರ್ತರೂಪ ಪಡಯಿತು . ಈ ವಾಣಿಜ್ಯ ವಹಿವಾಟಿನಲ್ಲಿ ತೊಡಗುತ್ತಿರುವ ಕಂಪನಿಗಳ ಅಧಿಕಾರಿಗಳ ಮೊದಲ ಮುಖತಃ ಭೇಟಿ ಇದು. ಈ ನಿಟ್ಟಿನಲ್ಲಿ ಎಡಬ್ಯುಎಕೆಇ ಕರ್ನಾಟಕ - ವಾಷಿಂಗ್ಟನ್ ನಡುವಿನ ಕೊಂಡಿಯಾಗಿದೆ.
ಇದೊಂದು ಹೊಸ ಅನುಭವ .. ವಿಮಾ ವಲಯಕ್ಕೆ ಸಂಬಂಧಿಸಿದ ಕಂಪನಿಗಳಿಗೆ ಸುಮಾರು 50 ದಶಲಕ್ಷ ರುಪಾಯಿ ಮೊತ್ತದ ಸಾಫ್ಟ್‌ವೇರ್ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸಿರುವ ಕಾಲ್ಸ್ ಇನ್‌ಫರ್‌ಮೇಷನ್ ಸಿಸ್ಟಮ್ಸ್‌ನ ವ್ಯವಸ್ಥಾಪಕ ಕುಮಾರ್ ರಾಜಾ ಹೇಳುತ್ತಾರೆ. ಇದೊಂದು ಅತ್ಯುತ್ತಮ ವೇದಿಕೆಯಾಗಿದ್ದು, ನಾವು ಎರಡು ಕಂಪನಿಗಳನ್ನು ಷಾರ್ಟ್‌ಲಿಸ್ಟ್ ಮಾಡಿದ್ದೇವೆ, ಮುಂದೆ ಇವುಗಳೊಂದಿಗೆ ಕಾರ್ಯಾರಂಭಿಸುತ್ತೇವೆ ಎಂದೂ ತಿಳಿಸಿದ್ದಾರೆ.
ಎಡಬ್ಯುಎಕೆಇ ವರ್ಚ್ಯುಯಲ್ ಟ್ರೇಡ್ ಮಿಷನ್‌ನಲ್ಲಿ ಪಾಲ್ಗೊಂಡು, ಪಾಸ್‌ವರ್ಡ್ ರಕ್ಷಿತ ಸೈಟ್‌ಗಳ ವೀಕ್ಷಿಸಿ ಹಾಗೂ ಅವುಗಳಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಆನಂತರ ಇ ಮೇಲ್ ಮೂಲಕ ಮಾತುಕತೆ ಮುಂದುವರಿಸಲು ರಾಜಾ ಹಾಗೂ ಇತರರು ನೂರು ಅಮೆರಿಕನ್ ಡಾಲರ್ ಪಾವತಿಸಿದ್ದಾರೆ.
ಸ್ವಚ್ಛ ವಾಣಿಜ್ಯಕ್ಕೆ ವೇದಿಕೆಯಾಂದನ್ನು ಕಲ್ಪಿಸುವುದು ತಮ್ಮ ಸಂಸ್ಥೆ ಉದ್ದೇಶವಾಗಿದ್ದು, ಇದು ನ್ಯಾಯಸಮ್ಮತ ವಾಣಿಜ್ಯ ವಹಿವಾಟಿಗೆ ಚಾಲನೆ ನೀಡಿದೆ ಎಂದು ಎಡಬ್ಯುಎಕೆಇ ಉಪಾಧ್ಯಕ್ಷೆ ಉಮಾರೆಡ್ಡಿ ಹೇಳಿದರು. ಈ ಹೊಸ ಸಂಪರ್ಕ ವಾಹನದ ನೆರವಿನಿಂದ ಇಂತಹ ಒಂದು ವ್ಯಾಪಾರಕ್ಕೆ ಚಾಲನೆ ನೀಡುವುದು ತಮ್ಮ ಉದ್ದೇಶ ಎಂದು ಅವರು ಹೇಳಿದ್ದಾರೆ.
ಇದರಿಂದ ಸಮಯ, ಶಕ್ತಿ ಹಾಗೂ ಹಣ ಉಳಿಯುತ್ತದೆ ಎಂಬುದು ರೆಡ್ಡಿ ಅವರ ಅಭಿಪ್ರಾಯ. ಎಲ್ಲ ಕಂಪನಿಗಳಿಗೂ ಅಮೆರಿಕೆಗೆ ಭೇಟಿ ನೀಡಿ ವಿದೇಶೀ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಶಕ್ತಿ ಹಾಗೂ ಸಮಯ ಇರುವುದಿಲ್ಲ. ಅಂತಹ ಕಂಪನಿಗಳಿಗೆ ಈ ವಿಡಿಯೋ ಕಾನ್‌ಫರೆನ್ಸ್ ಪ್ರಯೋಜನಕಾರಿಯಾಗುತ್ತದೆ.
ಈ ಸಂಬಂಧದ ಮಾತುಕತೆ, ಚರ್ಚೆಗಳು ಮೇ 31ರವರೆಗೂ ಮುಂದುವರೆಯುವ ಸಾಧ್ಯತೆ ಇದ್ದು, ಒಡಂಬಡಿಕೆಗೆ ಸಹಿ ಹಾಕುವ ಮೊದಲು ಸಂಘಟಕರು ಮತ್ತೊಂದು ಸುತ್ತಿನ ವಿಡಿಯೋ ಕಾನ್‌ಫರೆನ್ಸ್ ಆಯೋಜಿಸಲಿದ್ದಾರೆ. ಮಾಹಿತಿ ತಂತ್ರಜ್ಞಾನದ ಸಂಪೂರ್ಣ ಲಾಭ ಪಡೆದರೆ, ಸಮಯ, ಹಣವನ್ನು ಹೇಗೆ ಉಳಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications