ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ಕ್ರಮ, ರಾಷ್ಟ್ರ ಪ್ರಗತಿಗೆ ಪೂರಕವೇ ವಿನಾ ಮಾರಕವಲ್ಲ :ಅಟಲ್‌

By Staff
|
Google Oneindia Kannada News

ನವದೆಹಲಿ : ಹಸಿದ ಹೊಟ್ಟೆಗೆ ದೊರಕದೆ ರಾಜ್ಯಗಳ ಗೋದಾಮಿನಲ್ಲಿ ದಾಸ್ತಾನಿಟ್ಟಿರುವ 50 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ ಆಹಾರ ಧಾನ್ಯಗಳನ್ನು ವಿಕೇಂದ್ರೀಕರಣ ವ್ಯವಸ್ಥೆಯ ಮೂಲಕ ವಿತರಿಸುವ ಪ್ರಸ್ತಾವವನ್ನು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಮುಂದಿಟ್ಟಿದ್ದಾರೆ. ಆದರೆ, ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರದ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.

ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಓ) ಸಾಧಕ - ಭಾದಕಗಳ ಬಗ್ಗೆ ಸಮಾಲೋಚನೆ ನಡೆಸಲು ದೆಹಲಿಯಲ್ಲಿ ಕರೆದಿದ್ದ ಮಹತ್ವದ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಈ ವಿತರಣೆಯನ್ನು ಕೇಂದ್ರೀಕೃತ ಗೊಳಿಸಿದರೆ, ಅನುತ್ಪಾದಕ ವೆಚ್ಚ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಗೋದಾಮುಗಳಲ್ಲಿ ದಾಸ್ತಾನಿರುವ ಧಾನ್ಯ ಸಂಗ್ರಹಣೆಯನ್ನು ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ವಿತರಿಸುವುದೇ ಸೂಕ್ತ ಎಂದರು.

ಈ ವ್ಯವಸ್ಥೆಗೆ ಕೇಂದ್ರ ಅನುದಾನದ ನೆರವು ನೀಡಲಿದೆ ಎಂದ ಅವರು, ಕೇಂದ್ರ ಸರಕಾರ ರೈತರ ಹಿತವನ್ನು ಕಾಪಾಡಲು ಬದ್ಧವಾಗಿದೆ. ಸರಕಾರ ಉದಾರೀಕರಣ ನೀತಿ ಅನುಸರಿಸುವ ಮಾತ್ರಕ್ಕೆ ರೈತರ ಹಿತ ಬಲಿಕೊಡುವುದಿಲ್ಲ. ಸರಕಾರ ಕೈಗೊಂಡಿರುವ ಕ್ರಮಗಳು ದೇಶದ ಪ್ರಗತಿಗೆ ಪೂರಕವಾಗಿವೆಯೇ ವಿನಾ ಮಾರಕವಾಗಿಲ್ಲ ಎಂದು ತಿಳಿಸಿದರು.

ಉದಾರೀಕರಣದಿಂದ ರಾಷ್ಟ್ರದ ಆಯಾತ - ನಿರ್ಯಾತದಲ್ಲಿ ಪ್ರಗತಿ ಸಾಧಿಸಬಹುದು ಎಂದೂ ಅವರು ಅಭಿಪ್ರಾಯಪಟ್ಟರು. ವಿಶ್ವ ವ್ಯಾಪಾರ ಸಂಘಟನೆಯಾಂದಿಗಿನ ಒಪ್ಪಂದದಿಂದ ರಾಷ್ಟ್ರದ ರೈತರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದೂ ಅವರು ತಿಳಿಸಿದರು.

ಈ ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಿದರು. ಕೈಗಾರಿಕೆ ಹಾಗೂ ಕೃಷಿ ಕ್ಷೇತ್ರಕ್ಕೆ ನೀಡುವ ಅನುದಾನದ ಅಸಮಾನತೆಯನ್ನು ಹೋಗಲಾಡಿಸುವಂತೆ ಸಹ ಅವರು ಆಗ್ರಹಿಸಿದರು. ಸಭೆಯಲ್ಲಿ ರಾಜ್ಯದ ಕೃಷಿ ಸಚಿವ ಟಿ.ಬಿ. ಜಯಚಂದ್ರ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X