ಹಿಂದೂ ಅಲ್ಪಸಂಖ್ಯಾತರಿಗೆ ಚಾದರ ತೊಡಿಸಿದ ತಾಲಿಬಾನ್ !
ನವದೆಹಲಿ : ಆಫ್‌ಘಾನಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ತಾಲಿಬಾನ್‌ನ ಮೂಲಭೂತವಾದಿ ಆಡಳಿತ ಹಲವಾರು ನಿರ್ಬಂಧಗಳನ್ನು ಹೇರಿದೆ. ಇತ್ತೀಚೆಗಷ್ಟೇ 2 ಸಾವಿರ ವರ್ಷ ಇತಿಹಾಸವುಳ್ಳ ಬುದ್ಧ ಪ್ರತಿಮೆಗಳನ್ನು ನಾಶ ಮಾಡಿದ ತಾಲಿಬಾನ್ ಸರ್ಕಾರದ ಹೊಸ ವಿವಾದಾಸ್ಪದ ಕ್ರಮ ಇದಾಗಿದೆ.
ತಾಲಿಬಾನ್ ಆಡಳಿತಗಾರರು ಹೊರಡಿಸಿರುವ ಆದೇಶದಲ್ಲಿ ಹಿಂದೂಗಳ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು ಪಾಲಿಸದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ. ನಿರ್ಬಂಧಗಳಲ್ಲಿ ಪ್ರಮುಖವಾದವು-
- ಅಲ್ಪ ಸಂಖ್ಯಾತ ಹಿಂದೂಗಳು ಹಳದಿ ವಸ್ತ್ರ ಧರಿಸಬೇಕು ಹಾಗೂ ಶರಿಯತ್ ಅನುಸರಿಸಬೇಕು. ತಾವು ವಾಸಿಸುವ ಮನೆಯ ಮುಂಭಾಗದಲ್ಲಿ ಕನಿಷ್ಠ ಎರಡು ಮೀಟರ್ ಉದ್ದದ ಹಳದಿ ಬಟ್ಟೆ ತೂಗುಹಾಕಬೇಕು.
- ಹಿಂದೂ- ಮುಸ್ಲಿಂ ಒಂದೇ ಮನೆಯ ಆವರಣದಲ್ಲಿ ವಾಸಿಸುವಂತಿಲ್ಲ . ಆ ರೀತಿ ವಾಸಿಸುತ್ತಿರುವವರು ಮೂರು ದಿನಗಳಲ್ಲಿ ಮನೆ ಖಾಲಿ ಮಾಡಬೇಕು.
- ಹಿಂದೂ ಪುರುಷರು ಪೇಟ ಧರಿಸುವಂತಿಲ್ಲ . ಮಹಿಳೆಯರು ಕಣ್ಣಿಗೆ ಎರಡು ಕಿಂಡಿಗಳನ್ನು ಹೊರತುಪಡಿಸಿ, ಉಳಿದಂತೆ ದೇಹದ ಸುತ್ತಾ ಹಳದಿ ಚಾದರ ಹೊದ್ದಿರಬೇಕು. ಮಾರುಕಟ್ಟೆಗೆ ಹೋಗಬೇಕಾದರೂ ಮಹಿಳೆಯರಿಗೆ ಕಬ್ಬಿಣದ ನೆಕ್‌ಲೆಸ್ ಹಾಗೂ ಚಾದರ ಧಾರಣೆ ಕಡ್ಡಾಯ.
- ಹಿಂದೂಗಳು ಹೊಸ ಪ್ರಾರ್ಥನಾ ಮಂದಿರಗಳನ್ನು ನಿರ್ಮಿಸುವಂತಿಲ್ಲ . ಈಗಿರುವ ಪ್ರಾರ್ಥನಾ ಮಂದಿರಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು. ಅವು ನಾಶವಾದಲ್ಲಿ ಮಂದಿರಗಳ ಪುನರ್ ನಿರ್ಮಾಣಕ್ಕೂ ಅವಕಾಶವಿಲ್ಲ . ಪ್ರಸ್ತುತ ಇರುವ ಮಂದಿರಗಳ ಪಟ್ಟಿ ಕೊಡುವಂತೆ ಹಿಂದೂ ನಾಯಕರಿಗೆ ತಾಲಿಬಾನ್ ಆಡಳಿತ ತಿಳಿಸಿದೆ.
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications