ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಲಿದೆ ! ನಾಟಕ ಚಟುವಟಿಕೆಗಳ ಬೆಂಬಲಕ್ಕೊಂದು ರಂಗ ಪರಿಷತ್‌

By Staff
|
Google Oneindia Kannada News

ಹೂವಿನ ಹಡಗಲಿ : ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ರಂಗ ಪರಿಷತ್‌ ಎನ್ನುವ ಸರ್ಕಾರೇತರ ವೇದಿಕೆಯಾಂದನ್ನು ಸ್ಥಾಪಸಿಲು ಇತ್ತೀಚೆಗೆ ಇಲ್ಲಿ ಜರುಗಿದ ರಾಜ್ಯ ಮಟ್ಟದ ರಂಗಕರ್ಮಿಗಳ ಸಮಾವೇಶ ತೀರ್ಮಾನಿಸಿದೆ.

ಪ್ರತಿಯಾಂದಕ್ಕೂ ಸರ್ಕಾರವನ್ನೇ ಆಶ್ರಯಿಸುವುದು ಸಲ್ಲದು. ರಂಗ ಚಟುವಟಿಕೆಗಳ ಬೆಂಬಲಕ್ಕೆ ಸರ್ಕಾರೇತರ ವೇದಿಕೆಯಾಂದರ ಅಗತ್ಯವಿದೆ. ಈ ವೇದಿಕೆ ಸಾಂಸ್ಕೃತಿಕ ವಿಕೇಂದ್ರಿಕರಣಕ್ಕೂ ಸಹಾಯಕವಾಗುತ್ತದೆ ಎಂದು ಸಮ್ಮೇಳನದಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ನಾಟಕ ಅಕಾಡೆಮಿ ಫೆಲೋಷಿಪ್‌ ಪುರಸ್ಕೃತ ಎಂ.ಪಿ. ಪ್ರಕಾಶ್‌ ಹೇಳಿದರು. ನಾಟಕ ಅಕಾಡೆಮಿ ಅಧ್ಯಕ್ಷ ಸಿ.ಜಿ. ಕೃಷ್ಣಸ್ವಾಮಿ (ಸಿಜಿಕೆ) ಪ್ರಕಾಶ್‌ ಅವರ ನಿಲುವನ್ನು ಬೆಂಬಲಿಸಿದರು. ಸಮಾವೇಶವನ್ನು ರಂಗಭಾರತಿ ಏರ್ಪಡಿಸಿತ್ತು .

ಸಮಾವೇಶದಲ್ಲಿ ಮಾತನಾಡಿದ ರಂಗಾಯಣದ ನಿರ್ದೇಶಕ ಪ್ರಸನ್ನ ಅವರಿಗೆ ಹಿಂದಿಯನ್ನು ಮಾತ್ರ ರಾಷ್ಟ್ರಭಾಷೆ ಎಂದು ಕರೆಯುವವರ ಬಗ್ಗೆ ಸಿಟ್ಟು . ಕನ್ನಡ ಸೇರಿದಂತೆ ಭಾರತದ ಎಲ್ಲಾ ಭಾಷೆಗಳೂ ರಾಷ್ಟ್ರಭಾಷೆಗಳು. ಆದರೆ ಹಿಂದಿಯನ್ನು ಮಾತ್ರ ರಾಷ್ಟ್ರಭಾಷೆಯೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಈ ಏಕಸ್ವಾಮ್ಯದ ವಿರುದ್ಧ ಹೋರಾಡಬೇಕೆಂದು ಅವರು ಹೇಳಿದರು.

ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಸಿದ್ಧಲಿಂಗ ಪಟ್ಟಣಶೆಟ್ಟಿ , ಚಂಪಾ, ರಂಗಕರ್ಮಿಗಳಾದ ಬಿ.ವಿ. ಕಾರಂತ, ಟಿ.ಎನ್‌.ಸೀತಾರಾಂ, ಹಾಸಾಕೃ ಮುಂತಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X