ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಹೊಸ ಉತ್ಸಾಹದಿಂದ ವೃತ್ತಿಯಲ್ಲಿ ತೊಡಗಿಕೊಳ್ಳುತ್ತಿದ್ದೀರಿ. ನಿಮ್ಮನ್ನು ಕಾಡುತ್ತಿರುವ ಒಂಟಿತನದಲ್ಲಿ ಈ ಉತ್ಸಾಹವೇ ಕಾಪಾಡಬೇಕು. ಸೃಜನಶೀಲ ಕೆಲಸಗಳಲ್ಲಿ ತೊಡಗಿಕೊಳ್ಳಿ.ವೃಷಭ : ಈ ದಿನ ನಿಮ್ಮದೇ. ಗೆಳೆಯರ ಬಳಗದಲ್ಲಿ ನೀವೇ ಕೇಂದ್ರ ಬಿಂದುವಾಗಿರುವುದರಿಂದ ಸ್ವಲ್ಪಮಟ್ಟಿಗೆ ಜೇಬಿಗೆ ಕತ್ತರಿ ಬೀಳುತ್ತದೆ. ಆದರೆ, ಹೊಸ ಉತ್ಸಾಹ, ಚೈತನ್ಯ ತುಂಬಿಕೊಳ್ಳುತ್ತೀರಿ.
ಮಿಥುನ : ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸು ನಿಮ್ಮ ಪಾಲಿಗಿದೆ. ಈ ಹೊತ್ತಿನ ಯಶಸ್ಸು , ಪ್ರಯತ್ನ ಮುಂದುವರಿಕೆಗೆ ಸಹಕಾರಿಯಾದೀತು. ಗುರಿಯತ್ತಲೇ ಗಮನ ಕೇಂದ್ರೀಕರಿಸಬೇಕಾದುದು ಅಗತ್ಯ.
ಕಟಕ : ವ್ಯಾಪಾರದಲ್ಲಿ ಯಶಸ್ಸು ಕಾಣ್ತುತೀರಿ. ಅನಿರೀಕ್ಷಿತ ಅತಿಥಿಗಳ ಆಗಮನ ಮನಸ್ಸಿಗೆ ಕಿರಿಕಿರಿ ತಂದರೂ, ದಿನಾಂತ್ಯದಲ್ಲಿ ಮನಸ್ಸು ನೆಮ್ಮದಿಯಿಂದಿರುತ್ತದೆ. ಆ ಕಾರಣದಿಂದಾಗಿ ಸುಖ ನಿದ್ರೆಯೂ ನಿಮ್ಮ ಪಾಲಿಗಿದೆ.
ಸಿಂಹ : ಸಂಗಾತಿಯಾಂದಿಗಿನ ಮುನಿಸಿನಿಂದಾಗಿ ಮನಸ್ಸಿಗೆ ಗಾಯ ಮಾಡಿಕೊಂಡಿದ್ದೀರಿ. ನಿಮ್ಮ ಸಮಸ್ಯೆಯಲ್ಲಿ ಸಂಗಾತಿಯ ಅಸ್ವಸ್ಥತೆಯನ್ನು ಮರೆತಿದ್ದೀರಿ. ಅವರಿಗೆ ನಿಮ್ಮ ಅವಶ್ಯಕತೆ ಹೆಚ್ಚಿರುವುದರಿಂದ ಸಾಂತ್ವನಕ್ಕೆ ಮುಂದಾಗಿ.
ಕನ್ಯಾ : ಆರೋಗ್ಯದತ್ತ ಗಮನ ಹರಿಸದೆ ದುಡಿಯುತ್ತಿದ್ದೀರಿ. ಪ್ರತಿಫಲ ಇರುವುದಾದರೂ, ಅದು ಬೆವರಿಗೆ ತಕ್ಕ ಬೆಲೆಯಲ್ಲ . ಹೊಸ ಅವಕಾಶಗಳತ್ತ ಮೈಯ್ಯೆಲ್ಲಾ ಕಣ್ಣಾಗಿರುವುದು ಒಳ್ಳೆಯದು.
ತುಲಾ : ಮಕ್ಕಳ ಮಾತನ್ನು ಈ ಹೊತ್ತು ಕೇಳಲೇಬೇಕು. ಕುಟುಂಬದವರೊಂದಿಗೆ ನಿಮ್ಮ ತೊಂದರೆಗಳನ್ನು ಮುಚ್ಚಿಡುವುದರಿಂದ ಸಮಸ್ಯೆಗಳೇ ಹೆಚ್ಚು . ಪಾರದರ್ಶಕವಾಗಿರುವುದು ಅಗತ್ಯ.
ವೃಶ್ಚಿಕ : ಸದ್ಯಕ್ಕೆ ಪ್ರಯಾಣ ಯೋಗವಿಲ್ಲ. ಸೃಜನಶೀಲ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ಮನಸ್ಸನ್ನು ಹದ್ದುಬಸ್ತಿನಲ್ಲಿಡಿ. ಇಷ್ಟದೈವವನ್ನು ಸ್ಮರಿಸಿ.
ಧನಸ್ಸು : ನೀವು ಸಮರ್ಥ ಗುರಿಕಾರರೆನ್ನುವುದಲ್ಲಿ ಸಂದೇಹವೇ ಇಲ್ಲ . ಆದರೆ ಈ ಹೊತ್ತು ಅದೃಷ್ಟ ವಿರುದ್ಧ ದಿಕ್ಕಿನಲ್ಲಿರುವುದರಿಂದ ಗೆಲುವು ಸಾಧ್ಯವಿಲ್ಲ . ಹೊಸ ಸಾಹಸಗಳಿಗೆ ಕೈ ಹಾಕಬೇಡಿ.
ಮಕರ : ಸಂಜೆಯ ಹೊತ್ತಿಗೆ ತಲೆ ಮೇಲಿನ ದೊಡ್ಡದೊಂದು ಹೊರೆ ಇಳಿದ ನಿರಾಳ ಅನುಭವಿಸ್ತುತೀರಿ. ಆದರೆ, ಇನ್ನೂ ಉಳಿದಿರುವ ಜವಾಬ್ದಾರಿಗಳು ನಿಮ್ಮನ್ನು ಸುಮ್ಮನಿರಗೊಡದಿರುವ ಸಂಭವವೂ ಇದೆ.
ಕುಂಭ : ಬಣ್ಣದ ವ್ಯವಹಾರದಲ್ಲಿ ಯಶಸ್ಸಿದೆ. ಆರೋಗ್ಯ ಸುಧಾರಿಸುತ್ತಿರುವುದರಿಂದ ಹೊಸ ಉದ್ದಿಮೆಯತ್ತಲೂ ಮನಸ್ಸು ಮಾಡಬಹುದು. ಇಷ್ಟಪಾತ್ರರೊಡನೆ ಸುಂದರ ಸಂಜೆ ಕಳೆಯುತ್ತೀರಿ.
ಮೀನ : ನಿಮ್ಮ ಸಾಮರ್ಥ್ಯವೇನೆಂಬುದು ಎಲ್ಲರಿಗೂ ಗೊತ್ತಿರುವುದರಿಂದ ಹೆಚ್ಚು ಮಾತಾಡಲು ಹೋಗಬೇಡಿ. ಮಾತು ಬೆಳ್ಳಿ, ಮೌನ ಬಂಗಾರ. ಈ ಹೊತ್ತು ಲಾಟರಿಯಲ್ಲಿ ಯೋಗವಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications