ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಣ್ಣು ಶಿಶು ಮಾರಾಟ : ಪ್ರಮುಖ ಆರೋಪಿನ್ಯಾಯಾಲಯಕ್ಕೆ ಶರಣು

By Staff
|
Google Oneindia Kannada News

ಹೈದರಾಬಾದ್‌ : ಹೆಣ್ಣು ಶಿಶುಗಳ ದತ್ತು ಸ್ವೀಕಾರ ಹೆಸರಿನಲ್ಲಿ ದೊಡ್ಡ ಸುದ್ದಿ ಮಾಡಿರುವ ಹೆಣ್ಣು ಶಿಶುಗಳ ಮಾರಾಟ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಅನಿತಾ ಸೆನ್‌ ಶನಿವಾರ ಹೈದರಾಬಾದ್‌ನ ನ್ಯಾಯಾಲಯದ ಎದುರು ಶರಣಾಗತರಾಗಿದ್ದಾರೆ.

ಹೆಣ್ಣು ಶಿಶುಗಳ ಮಾರಾಟ ಪ್ರಕರಣ ಬಯಲಾಗಿ ತಿಂಗಳುಗಳೇ ಕಳೆದಿದ್ದರೂ, ಇಷ್ಟೂ ದಿನ ತಲೆ ಮರೆಸಿಕೊಂಡಿದ್ದ ಅನಿತಾ ನ್ಯಾಯಾಲಯದ ಮುಂದೆ ಶರಣಾಗತರಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಈಕೆ ಹಿರಿಯ ಐ.ಪಿ.ಎಸ್‌. ಅಧಿಕಾರಿಯಾಬ್ಬರ ಪತ್ನಿ.

ಏಪ್ರಿಲ್‌ ತಿಂಗಳಿನಲ್ಲಿ ಅನಿತಾ ಸೆನ್‌ ಅವರು ನಡೆಸುತ್ತಿದ್ದ ಹೈದರಾಬಾದ್‌ ಹೊರವಲಯದ ಪ್ರೆಷಿಯಸ್‌ ಮೊಮೆಂಟ್ಸ್‌ ಅನಾಥಾಲಯಕ್ಕೆ ದಾಳಿ ನಡೆಸಿದ ಪೊಲೀಸರು 61 ಮಕ್ಕಳನ್ನು ರಕ್ಷಿಸಿದ್ದರು. ಈ ಸಂಬಂಧ ಅನಿತಾ ಅವರ ಬಂಧನಕ್ಕೆ ನೆರವು ನೀಡುವವರಿಗೆ 5 ಲಕ್ಷ ರುಪಾಯಿ ನಗದು ಬಹುಮಾನ ನೀಡಲಾಗುವುದು ಎಂದೂ ಘೋಷಿಸಲಾಗಿತ್ತು.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X