ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಫ್ರೋ ಇನ್ಫೋಟೆಕ್‌ ಸಂಸ್ಥೆದೂರವಾಣಿ ಬಿಲ್‌ ಕಟ್ಟಿಲ್ಲವಂತೆ !

By Staff
|
Google Oneindia Kannada News

ಬೆಂಗಳೂರು : ಮಾರುಕಟ್ಟೆಯಲ್ಲಿ 376 ಮಿಲಿಯನ್‌ ಡಾಲರ್‌ ರೂಪಾಯಿ ವ್ಯವಹಾರ ನಡೆಸುವ ವಿಪ್ರೋ ಇನ್ಫೋಟೆಕ್‌ ಸಂಸ್ಥೆ 2.02 ಲಕ್ಷ ರೂಪಾಯಿ ಟೆಲಿಫೋನ್‌ ಬಿಲ್‌ ಬಾಕಿ ಉಳಿಸಿಕೊಂಡಿದೆ.

ಈ ಹಣವನ್ನು ಬೆಂಗಳೂರು ದೂರವಾಣಿ ಕೇಂದ್ರಕ್ಕೆ 1996ರಲ್ಲಿ ವಿಪ್ರೋ ಸಂಸ್ಥೆ ಪಾವತಿಸಬೇಕಿತ್ತು. ಇಷ್ಟು ವರ್ಷಗಳಲ್ಲಿ ಫೋನ್‌ ಬಿಲ್‌ ಯಾಕೆ ಕಟ್ಟುವುದಕ್ಕಾಗಲಿಲ್ಲ ಎಂದು ಸಂಸ್ಥೆಯ ಮ್ಯಾನೇಜಿಂಗ್‌ ಅಂಡ್‌ ಮಿನಿಸ್ಟ್ರೇಷನ್‌ ರಘುನಂದನ್‌ ಅವರನ್ನು ಪ್ರಶ್ನಿಸಿದಾಗ ಅಷ್ಟೂ ದಿನಗಳಲ್ಲಿ ದೂರವಾಣಿ ವಿಭಾಗದವರೇನೂ ನಿದ್ದೆ ಮಾಡುತ್ತಿದ್ದರೇ ? ಅವರೇಕೆ ನಮಗೆ ನೆನಪಿಸಬಾರದಿತ್ತು ? ಎಂದು ಮರು ಪ್ರಶ್ನೆ ಹಾಕುತ್ತಾರೆ.

ಕೇವಲ ಕಳೆದ ಹತ್ತು ದಿನಗಳ ಹಿಂದೆಯಷ್ಟೇ ದೂರವಾಣಿ ಕೇಂದ್ರದಿಂದ ನಮಗೆ ಕರೆ ಬಂದಿತ್ತು. ನಾವೀಗ ನಮ್ಮ ಹಳೇ ರೆಕಾರ್ಡ್‌ಗಳನ್ನು ಪರಿಶೀಲಿಸಿ ಬಾಕಿ ಉಳಿಸಿಕೊಂಡಿರುವ ಬಗ್ಗೆ ಸ್ಪಷ್ಟ ಪಡಿಸಿಕೊಂಡು ಬಾಕಿ ಹಣವನ್ನು ಕಟ್ಟುತ್ತೇವೆ ಂದು ರಘುನಂದನ್‌ ಹೇಳುತ್ತಾರೆ.

ನಮ್ಮಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಫೋನ್‌ ಲೈನ್‌ಗಳಿವೆ. ಈವರೆಗೆ ಯಾವುದೇ ಬಿಲ್‌ ಬಾಕಿ ಉಳಿಸಿಕೊಂಡಿಲ್ಲ ಎಂದು ರಘುನಂದನ್‌ ಹೇಳಿದ್ದಾರೆ. ಬೆಂಗಳೂರಿನ ಇನ್ನಷ್ಟು ಸಣ್ಣ ಪುಟ್ಟ ಸಾಫ್ಟ್‌ವೇರ್‌ ಕಂಪೆನಿಗಳು ಫೋನ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಲಿಸ್ಟನ್ನು ದೂರವಾಣಿ ಕೇಂದ್ರ ಪ್ರಕಟಿಸಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X