Get Updates
Get notified of breaking news, exclusive insights, and must-see stories!

ಸಮುದಾಯದಲ್ಲಿ ರೈಲ್ವೇ : ಮೂರು ದಿನಗಳ ರಾಷ್ಟ್ರೀಯ ಪ್ರದರ್ಶನಾರಂಭ

‘ಸಮುದಾಯದಲ್ಲಿ ರೈಲ್ವೇ’ ಎಂಬ ಘೋಷಣೆಯಡಿಯಲ್ಲಿ ಮೂರು ದಿನಗಳ ರೈಲ್ವೇ ಪ್ರದರ್ಶನವು ದೆಹಲಿಯ ರಾಷ್ಟ್ರೀಯ ರೈಲು ಮ್ಯೂಸಿಯಂ ನಲ್ಲಿ ಶುಕ್ರವಾರ ರಾತ್ರಿ ಆರಂಭಗೊಂಡಿದೆ.

ಐವತ್ತು ಮ್ಯೂಸಿಯಂಗಳ ಜೊತೆಗೆ, ರಾಷ್ಟ್ರೀಯ ಮ್ಯೂಸಿಯಂ, ರಾಷ್ಟ್ರೀಯ ವಿಜ್ಞಾನ ಕೇಂದ್ರ, ನ್ಯಾಷನಲ್‌ ಮ್ಯೂಸಿಯಂ ಆಫ್‌ ನ್ಯಾಚುರಲ್‌ ಹಿಸ್ಟರಿ ಮತ್ತು ನ್ಯಾಷನಲ್‌ ಗಾಂಧಿ ಮ್ಯೂಸಿಯಂಗಳೂ ಸೇರಿ ಈ ಪ್ರದರ್ಶನವನ್ನು ಆಯೋಜಿಸಿದೆ ಎಂದು ರಾಷ್ಟ್ರೀಯ ರೈಲ್ವೇ ಮ್ಯೂಸಿಯಂನ ನಿರ್ದೇಶಕ ರಾಜೇಶ ಅಗರವಾಲ್‌ ತಿಳಿಸಿದ್ದಾರೆ.

ದೇಶ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ. ಭಾರತದ ಭೂತ ಮತ್ತು ವರ್ತಮಾನಗಳನ್ನು ಅರ್ಥೈಸಿಕೊಳ್ಳಲು ರೈಲುಗಳು ಒಂದು ಉತ್ತಮ ಉದಾಹರಣೆ ಎಂದು ಅಗರವಾಲ್‌ ಹೇಳಿದರು.

ಅಂತರ ರಾಷ್ಟ್ರೀಯ ಮ್ಯೂಸಿಯಂ ದಿನವಾದ ಮೇ 18ರಂದು ಈ ಪ್ರದರ್ಶನ ಆರಂಭಗೊಂಡಿದ್ದು, ರೈಲ್ವೇ ಮಂಡಳಿಯ ಕಾರ್ಯದರ್ಶಿ ಹಾಗೂ ಭಾರತೀಯ ರೈಲ್ವೇಯ ಅಪೆಕ್ಸ್‌ ಕಮಿಟಿ ಬೋರ್ಡ್‌ನ ಅಧ್ಯಕ್ಷ ಆರ್‌. ಕೆ. ಸಿಂಘ್‌ ರೈಲ್ವೇ ಪೋಸ್ಟರನ್ನು ಅನಾವರಣ ಗೊಳಿಸಿದರು.

ಯುನೆಸ್ಕೋ ಇತ್ತೀಚೆಗೆ ವಿಶ್ವ ಸ್ಮಾರಕವೆಂದು ಘೋಷಿಸಿರುವ ಡಾರ್ಜಿಲಿಂಗ್‌ ಹಿಮಾಲಯನ್‌ ರೈಲ್ವೇ ಪ್ರದರ್ಶಿತಗೊಳ್ಳುತ್ತಿದೆ. ಸ್ಟೀಮ್‌ ಮೋನೋ ರೈಲ್‌, ಜೋಯ್‌ ಟ್ರೆೃನ್‌ಗಳು ಈ ಎಕ್ಸ್‌ಬಿಷನ್‌ನಲ್ಲಿವೆ. ಬೆಳಗ್ಗೆ 09.30ರಿಂದ ರಾತ್ರಿ 7.30ರವರೆಗೆ ಪ್ರದರ್ಶನ ತೆರೆದಿರುತ್ತವೆ.

(ಯುಎನ್‌ಐ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+