ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಮಾನವನಾಟ : ವೈದ್ಯ ಸೇರಿದಂತೆ ನಾಲ್ವರ ಬಂಧನ

By Staff
|
Google Oneindia Kannada News

ನವದೆಹಲಿ : ನಾಗೇಶ್‌ಕುಮಾರ್‌ ಸಾಗರ ಎಂಬ ವೈದ್ಯನೂ ಸೇರಿದಂತೆ ಮಂಗಮಾನವನ ನೆಪದಲ್ಲಿ ರಾಜಧಾನಿಯ ಜನರನ್ನು ಹೆದರಿಸುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಕಂಡ ನಾಯಿ, ಕೋತಿಗಳಿಗೆಲ್ಲಾ ಜನ ಬೆಚ್ಚಿ ಬೀಳುತ್ತಿದ್ದು, ಹೆದರಿ ಓಡಿ, ತರಚು ಗಾಯ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ನಿಗೂಢ ಮಂಗಮಾನವ ಎಂಬ ಸಮೂಹ ಸನ್ನಿ ಪೊಲೀಸರಿಗೇ ಗೋಜಲು ಗೋಜಲಾಗಿ ಪರಿಣಮಿಸಿತ್ತು. ಐವರ ಬಂಧನದಿಂದ ಜನತೆ ಈಗ ನೆಮ್ಮದಿಯ ನಿಟ್ಟುಸಿರಿಡುವಂತಾಗಿದೆ. ಈ ನಡುವೆ ನೂರಾರು ಕೋತಿ, ನಾಯಿಗಳನ್ನು ಜನತೆ ಸಿಕ್ಕಲ್ಲಿ ಕೊಂದಿರುವುದು ವರದಿಯಾಗಿದೆ.

ಕೈಕವಚ (ಗ್ಲೌಸ್‌) ವನ್ನು ರಸ್ತೆಗೆ ಎಸೆದು ಡಾ.ನಾಗೇಶ್‌ಕುಮಾರ್‌ ಸಾಗರ್‌ ಹೆದರಿಸುತ್ತಿದ್ದ. ಉಳಿದ ನಾಲ್ವರು ದೂರವಾಣಿ ಮೂಲಕ ಕರೆಗಳನ್ನು ಮಾಡಿ ಜನರ ನಿದ್ದೆಗೆಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರದಿಂದ ಶುಕ್ರವಾರದವರೆಗೆ ಮಂಗಮಾನವನ ಉಪಟಳದ ಬಗ್ಗೆ ನೂರಕ್ಕೂ ಹೆಚ್ಚು ಕರೆಗಳು ಪೊಲೀಸರಿಗೆ ಬಂದಿವೆ. ಆದರೆ ಈ ಪೈಕಿ ಬಹುತೇಕ ಸುಳ್ಳು ಕರೆಗಳು. ಭಯದ ವಾತಾವರಣ ಜನರನ್ನು ಭ್ರಮೆಗೀಡು ಮಾಡಿ, ಈ ಎಲ್ಲಾ ಧಾವಂತಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.

ದೆಹಲಿಯ ಡಿಐಜಿ ಮಂಗಮಾನವನೂ ಇಲ್ಲ, ಏನೂ ಇಲ್ಲ ಎಂದು ಶುಕ್ರವಾರ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X