ತಾರಸಿಯೆಂಬುದು ಕಾವಲಿ, ನೆಲ ಧಗೆಯ ಹಾಸಿಗೆ-ಇದು ಗುಲ್ಬರ್ಗಾ
ಗುಲ್ಬರ್ಗಾದಲ್ಲಿ ಬೇಸಿಗೆಯೆನ್ನುವುದು ನರಕ ಸಮಾನ ಅನ್ನುವಂತಿದೆ. ಸೂರ್ಯನಿರಲಿ- ಫ್ಯಾನು, ಕೂಲರ್‌ಗಳು ಕೂಡ ಈ ಹೊತ್ತು ಚೆಲ್ಲುತ್ತಿರುವುದು ಬೆಂಕಿಯನ್ನೇ. ಕಾವಲಿಯಾಗಿರುವ ತಾರಸಿ, ಕೆಂಡದ ಹಾಸಿಗೆಯಂತಿರುವ ನೆಲ, ಅಂಟು ಅಂಟಾಗಿರುವ ಡಾಂಬರು, ಇದು ಬೇಸಗೆಯ ದಿನಗಳ ಗುಲ್ಬರ್ಗಾ.
44 ಡಿಗ್ರಿ ಆಸುಪಾಸಿನಲ್ಲಿರುವ ತಾಪಮಾನದಿಂದಾಗಿ ಜನರಿಗೆ ದಿನಪೂರ್ತಿ ಬೆವರಿನ ಸ್ನಾನ . ತಣ್ಣೀರನ್ನಾದರೂ ಸುರುವಿಕೊಳ್ಳೋಣವೆಂದರೆ, ನೀರು ತರುವುದು ಎಲ್ಲಿಂದ ? ಜಿಲ್ಲೆಯ 130 ಗ್ರಾಮಗಳಲ್ಲಿ ಗಂಭೀರ ಜಲಕ್ಷಾಮ. ಕುಡಿಯುವ ನೀರಿಗಾಗಿ ಜನತೆ ಪರಿತಪಿಸಬೇಕಾಗಿದೆ. ಮಳೆರಾಯ ಬೇಗ ಕಣ್ಣು ತೆರೆಯದಿದ್ದಲ್ಲಿ , ಪರಿಸ್ಥಿತಿ ಮತ್ತಷ್ಟು ದಾರುಣವಾಗುವುದು ಖಚಿತ.
ಭೀಮಾ ನದಿಯ ತುಂಬಾ ಉಸುಕು. ಬತ್ತಿಹೋದ ನದಿ ಮರುಭೂಮಿಯಂತೆ ಕಾಣುತ್ತಿದ್ದರೆ, ಸರ್ಕಾರ ಮಹಾರಾಷ್ಟ್ರದತ್ತ ಬೆಟ್ಟು ತೋರಿಸುತ್ತಿದೆ. ತಳಾತಳಕ್ಕಿಳಿದಿರುವ ಅಂತರ್ಜಲದಿಂದಾಗಿ ಕೊಳವೆಬಾವಿಗಳು ಕೂಡ ಮೌನವಾಗಿವೆ. ಚಿಂಚೋಳಿ, ಅಫ್ಜಲ್‌ಪುರ, ಚಿತಾಪುರ, ಯಾದಗಿರಿ ತಾಲ್ಲೂಕುಗಳಲ್ಲಂತೂ - ಬೆಳಗಾದರೆ ಮುಖ ತೊಳೆಯಲಿಕ್ಕೂ ನೀರಿಗಾಗಿ ಪರದಾಡುವ ಪರಿಸ್ಥಿತಿ.
ಜನರದು ಈ ಪಾಡಾದರೆ, ಜಾನುವಾರುಗಳದು ನಾಯಿಪಾಡು. ಬೇಸಗೆ ಬಂದು ಕುಡಿಯುವ ನೀರಿನೊಂದಿಗೆ ಮೇವಿಗೂ ಬರ . ಎದ್ದು ಕಾಣುವ ಮೂಳೆಚಕ್ಕಳಗಳ ಜಾನುವಾರುಗಳನ್ನು ಕಟುಕನ ಅಡ್ಡೆಗೆ ತಳ್ಳುತ್ತಿರುವವರೂ ಉಂಟು. ಈ ನಡುವೆ ಬಿಸಿಲ ಬೇಗೆಯಿಂದ ಓರ್ವ ಸಾವಿಗೀಡಾದ ಘಟನೆಯೂ ಜಿಲ್ಲೆಯಿಂದ ವರದಿಯಾಗಿದೆ. ಎಲ್ಲರೂ .. ಓ ಬಾ ಅತಿಥಿ ಮಳೆರಾಯನ ಕರೆಯುವವರೇ. ನಾವೂ ದನಿಗೂಡಿಸೋಣ.
ಗುಲ್ಬರ್ಗಾದಿಂದ ಬೆಂಗಳೂರಿಗೆ ಬರೋಣ ..
ಈ ಹೊತ್ತು ದಿನೇ ದಿನೇ ಏರುತ್ತಿರುವ ಬಿಸಿಲು ಕುವೆಂಪು ಅವರ ಏರುವನು ರವಿ ಏರುವನು ಕವಿತೆಯನ್ನು ನೆನಪಿಸುತ್ತಿದೆ. ಬಿಸಿಲ ಝಳಕ್ಕೆ ಜನ ಶಾಪ ಹಾಕುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಮಳೆ ಬರುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಏರಿದವನು ಸಣ್ಣವನಾಗಲೇಬೇಕು ಎಂದು ಕುವೆಂಪು ಹೇಳಿದ್ದು ಕೂಡ ಇದ್ದನ್ನೇ ತಾನೆ ! ಅಜ್ಜಿ ಕೂಡ ಧಗೆ ಹೆಚ್ಚಾದಾಗಲೆಲ್ಲ ಹೇಳುವುದು, ಮಳೆ ಬರುತ್ತದೆಂದೇ. ಇಬ್ಬರ ನಂಬಿಕೆಯೂ ನಿಜವಾಗಲಿ.
ಬೆಂಗಳೂರಿನಲ್ಲಿ ರಾತ್ರಿಯ ವೇಳೆ ಮಳೆಯಾಗುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಹೇಳುತ್ತಿದ್ದಂತೆಯೇ ದಿನದ ಉಷ್ಣಾಂಶ ಯಥಾ ಪ್ರಕಾರ 34 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿ ಮುಂದುವರಿದಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications