ರಕ್ತನಿಧಿಗಳಲ್ಲಿ ಎಚ್ಐವಿ ಜೊತೆಗೆ ‘ಹೆಪಟೈಟಸ್ ಸಿ’ಪರೀಕ್ಷೆ ಕಡ್ಡಾಯ
ಬೆಂಗಳೂರು : ಜೂನ್ 1ರಿಂದ ಎಲ್ಲ ರಕ್ತ ನಿಧಿಗಳಲ್ಲಿ ಎಚ್ಐವಿ ಪರೀಕ್ಷೆಯ ಜೊತೆಗೆ ಹೆಪಟೈಟಸ್ ಸಿ ಪರೀಕ್ಷೆಯನ್ನೂ ಕಡ್ಡಾಯವಾಗಿ ಮಾಡುವಂತೆ ಕೇಂದ್ರಸರ್ಕಾರ ಆದೇಶ ಹೊರಡಿಸಿದೆ. ರಕ್ತ ಪಡೆದುಕೊಳ್ಳುವವರು ಹೆಪಟೈಟಸ್ ಸಿ ಪರೀಕ್ಷೆನಡೆಸಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು ಅಗತ್ಯ.
ಈಗಾಗಲೇ ಹೆಪಟೈಟಸ್ ಬಿ ಪರೀಕ್ಷೆಯನ್ನು ನಡೆಸುತ್ತಿರುವ ರಕ್ತ ನಿಧಿಗಳಲ್ಲಿಯೂ ಹೆಪಟೈಟಸ್ ಸಿ ಪರೀಕ್ಷೆ ನಡೆಸುವುದು ಕಡ್ಡಾಯಗೊಳಿಸಲಾಗುವುದು. ಇದಕ್ಕೆ ಸಂಬಂಧಿಸಿ ಈಗ ಕಾರ್ಯನಿರ್ವಹಿಸುತ್ತಿರುವ ಎಲ್ಲ ರಕ್ತನಿಧಿಗಳಿಗೆ ಅನ್ವಯವಾಗುವಂತೆ, ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ಆ್ಯಕ್ಟ್ಗೆ ತಿದ್ದುಪಡಿ ತರಲಾಗುವುದು ಎಂದು ಕೇಂದ್ರದ ಆದೇಶ ತಿಳಿಸಿದೆ.
ರಕ್ತನಿಧಿಗಳಿಗೆ ಹೆಪಟೈಟಸ್ ಸಿ ವೈರಸ್ ಟೆಸ್ಟ್ನ ಕಿಟ್ಗಳನ್ನು ಒದಗಿಸಲಾಗುವುದು. ರಕ್ತ ನೀಡುವಾತ ಅಥವಾ, ರಕ್ತ ಪಡೆಯುವಾತ ರಕ್ತವು ಎಚ್ಐವಿಯಾಂದಿಗೆ ಈ ಪರೀಕ್ಷೆಗೂ ಒಳಪಟ್ಟಿದೆಯೇ ಎಂದು ಖಾತರಿಪಡಿಸಿಕೊಂಡು ಮುಂದುವರೆಯಬೇಕು.
ಪಿತ್ತಕೋಶಕ್ಕೆ ದಾಳಿ ಇಡುವ ಹೆಪಟೈಟಸ್ ಬಿ ಮತ್ತು ಸಿ ರೋಗವನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರಕಾರವು ಹೆಪಟೈಟಸ್ ಸಿ ರೋಗನಿರೋಧಕ ಔಷಧಿಯನ್ನು ಪ್ರತಿ ರಕ್ತ ನಿಧಿಗೂ ಒದಗಿಸಲಿದ್ದು, ಕರ್ನಾಟಕದಲ್ಲಿರುವ 112 ರಕ್ತ ನಿಧಿಗಳಲ್ಲಿ ಈ ರೋಗ ಪರೀಕ್ಷೆ ವ್ಯವಸ್ಥೆಯನ್ನು ಮಾಡಲಾಗುವುದು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications