ನೀಲಾಕಾಶದಿ ರಾರಾಜಿಸುತಿಹ ಸೂರ್ಯ
ಬೆಂಗಳೂರು : ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ. ಉತ್ತರ ಒಳನಾಡು ಹಾಗೂ ಕರಾವಳಿಯ ಗರಿಷ್ಠ ತಾಪಮಾನದಲ್ಲಿ ಸ್ಪಲ್ಪ ಬದಲಾವಣೆ ಆಗಿದೆ. ಮುನ್ಸೂಚನೆಯ ಪ್ರಕಾರ ಕೂಡ ಮುಂದಿನ 36 ಗಂಟೆಗಳ ಅವಧಿಯಲ್ಲಿ ರಾಜ್ಯದ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಗಳೇನೂ ಇಲ್ಲ.
ಗುಲ್ಬರ್ಗಾ ಹಾಗೂ ರಾಯಚೂರಿನಲ್ಲಿ 43 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದ್ದರೆ, ಬಿಜಾಪುರದಲ್ಲಿ 41 ಡಿಗ್ರಿ ಸೆಲ್ಸಿಯಸ್ ಇತ್ತು. ಬಿಸಿಲು ಧಾರಾಕಾರವಾಗಿ ಸುರಿಯುತ್ತಿತ್ತು. ಮುಂಜಾನೆಯೇ ಎದ್ದ ಮಾನಿನಿಯರು ಸೂರ್ಯ ಪ್ರಖರವಾಗುವ ಮೊದಲೇ ಎಳೆ ಬಿಸಿಲಿನಲ್ಲಿ ಹಪ್ಪಳ, ಸಂಡಿಗೆ ಇಡುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.
ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೂಡ ನೀಲಾಕಾಶದಲ್ಲಿ ರಾರಾಜಿಸುತ್ತಿದ್ದ ಸೂರ್ಯದೇವ ಮೈ ಚುರುಗುಟ್ಟಿಸುತ್ತಿದ್ದ. ಮನೆ ಬಿಟ್ಟು ಹೊರ ಬಂದರಂತೂ ಮುಗಿದೇ ಹೋಯಿತು, ಸಾಕಪ್ಪ ಸಾಕು, ಈ ಸೆಕೆ ತಡೆಯಕ್ಕಾಗಲ್ಲ ಎನ್ನುವ ಮಾತುಗಳು ಅರಿವಿಲ್ಲದೆಯೇ ಹೊರಬರುತ್ತಿದ್ದವು.
ಬೇಸಿಗೆಯಲ್ಲಿ ದೊರೆತಿರುವ ರಜೆಯಲ್ಲಿ ಮನೆಯಲ್ಲಿ ಕೂರದ ಮಕ್ಕಳು ರಸ್ತೆಗಳಲ್ಲಿ, ಮೈದಾನಗಳಲ್ಲಿ ಕ್ರಿಕೆಟ್ ಆಡಿ ಕಪ್ಪಾಗಿ ಹೋಗಿದ್ದಾರೆ. ಎಷ್ಟು ನೀರು ಕುಡಿದರೂ ತೀರದ ದಾಹ. ತಂಪು ಪಾನೀಯದ ಅಂಗಡಿಗಳ ಮುಂದೆ ಜನಜಂಗುಳಿ, ಎಳನೀರಿಗೆ ಎಲ್ಲಿಲ್ಲದ ಬೇಡಿಕೆ. ಅಂದಹಾಗೆ ಕಳೆದ ತಿಂಗಳು ಕೇವಲ 4 - 5 ರುಪಾಯಿ ಇದ್ದ ಎಳನೀರು ಈಗ 7 ರುಪಾಯಿ ಆಗಿದೆ. ಎಳನೀರು ಬೆಲೆ ಏರಿದ್ದರೂ, ಬಿಸಿಲು ಮಾತ್ರ ಬಹಳ ಅಗ್ಗವಾಗಿ ಹೋಗಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications