ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡ ಮೂತ್ರಪಿಂಡ ರೋಗಿಗಳಿಗೆ ಶಾರದಾಆಸ್ಪತ್ರೆಯೆಂಬ ಧನ್ವಂತರಿ!

By Staff
|
Google Oneindia Kannada News

ಬೆಂಗಳೂರು : ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಕಡು ಬಡವರಿಗೆ ಉಚಿತ ಚಿಕಿತ್ಸೆ ನೀಡಲು ಶಂಕರಪುರದ ಶಾರದಾ ಧನ್ವಂತರಿ ಚಾರಿಟೇಬಲ್‌ ಆಸ್ಪತ್ರೆ ‘ಹಿಮೊಡಯಲಾಸಿಸ್‌’ ಕೇಂದ್ರವನ್ನು ಪ್ರಾರಂಭಿಸಿದೆ.

ಮೂತ್ರಪಿಂಡ ಕಾಯಿಲೆಯಿಂದ ಬಳಲುವ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಡಯಾಲಿಸಿಸ್‌ ಚಿಕಿತ್ಸೆಯನ್ನು ಒದಗಿಸುವ ಈ ಕೇಂದ್ರದಲ್ಲಿ ಕಡು ಬಡವರಿಗೆ ಚಿಕಿತ್ಸೆ ಸಂಪೂರ್ಣ ಉಚಿತ. ಶೃಂಗೇರಿ ಪೀಠದ ಭಾರತಿ ತೀರ್ಥ ಸ್ವಾಮೀಜಿ ಅವರ 51 ನೇ ವರ್ಧಂತಿ ಅಂಗವಾಗಿ ಅಭಿನವ ವಿದ್ಯಾಪೀಠ ಮಹಾಸ್ವಾಮಿಗಳ ಪೀಠಾರೋಹಣ ರಜತ ಮಹೋತ್ಸವ ಆಚರಣೆ ವೈದ್ಯಕೀಯ ಪ್ರತಿಷ್ಠಾನವು ಈ ಡಯಾಲಿಸಿಸ್‌ ಕೇಂದ್ರವನ್ನು ತೆರೆದಿದೆ.

ಬೆಂಗಳೂರು ದಕ್ಷಿಣ ರೋಟರಿ ಕ್ಲಬ್‌ ಸಂಸ್ಥೆ, ನೂತನ ಕೇಂದ್ರಕ್ಕೆ ಎರಡು ಡಯಾಲಿಸಿಸ್‌ ಯಂತ್ರಗಳನ್ನು ಹಾಗೂ ಐಡಿಬಿಐ ಮತ್ತು ಐಸಿಐಸಿಐ ಸಂಸ್ಥೆಗಳು ತಲಾ ಒಂದೊಂದು ಯಂತ್ರಗಳನ್ನು ಕೊಡುಗೆಯಾಗಿ ನೀಡಿವೆ. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮೇಯರ್‌ ಪ್ರೇಮಾ ಕಾರ್ಯಪ್ಪ ಕೇಂದ್ರವನ್ನು ಉದ್ಘಾಟಿಸಿದರು. ಆಸ್ಪತ್ರೆ ಇರುವ ಶಂಕರಪುರದ 1 ನೇ ಅಡ್ಡರಸ್ತೆಗೆ ಶಾರದಾ ಧನ್ವಂತರಿ ರಸ್ತೆ ಎಂದು ನಾಮಕರಣ ಮಾಡುವುದಾಗಿ ಅವರು ಆಶ್ವಾಸನೆ ನೀಡಿದರು.

ಉನ್ನತ ಶಿಕ್ಷಣ ಸಚಿವ ಡಾ.ಜಿ. ಪರಮೇಶ್ವರ್‌, ಇನ್ಫೋಸಿಸ್‌ ಪ್ರತಿಷ್ಠಾನದ ಟ್ರಸ್ಟಿ ಸುಧಾಮೂರ್ತಿ, ರೋಟರಿ ಜಿಲ್ಲಾ ಗವರ್ನರ್‌ ಡಾ.ಪೃಥ್ವಿ ರಾವಲ್‌, ಹಿರಿಯ ವೈದ್ಯ ಡಾ. ಎನ್‌.ಸಿ. ತಲ್ವಾಲ್ಕರ್‌, ಆಡಳಿತಾಧಿಕಾರಿ ವಿ.ಆರ್‌.ಗೌರಿಶಂಕರ್‌ ಹಾಗೂ ಟ್ರಸ್ಟ್‌ನ ಕಾರ್ಯದರ್ಶಿ ಕೆ.ವೆಂಕಟರಮಣನ್‌ ಡಯಾಲಿಸಿಸ್‌ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X