ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ನಾಯಕರ ನಿದ್ದೆಗೆಮುಳ್ಳಾದ ಜಯಲಲಿತಾ ಗದ್ದುಗೆ

By Staff
|
Google Oneindia Kannada News

*ಇಮ್ರಾನ್‌ ಖುರೇಷಿ

ಬೆಂಗಳೂರು : ಭಾರೀ ಗೆಲುವಿನೊಂದಿಗೆ ಜಯಲಲಿತಾ ಮತ್ತೆ ತಮಿಳುನಾಡಿನ ಗದ್ದುಗೆ ಏರಿದ್ದಾರೆ. ಕಾಂಗ್ರೆಸ್‌ ಮೈತ್ರಿಕೂಟದ ಪಾಲಿಗೆ ಈ ಬೆಳವಣಿಗೆ ಸಂತೋಷದ ಸುದ್ದಿಯಾದರೂ, ಕಾಂಗ್ರೆಸ್‌ ಪಕ್ಷವೇ ಅಧಿಕಾರದಲ್ಲಿರುವ ಕರ್ನಾಟಕದ ಪಾಲಿಗೆ ಅಷ್ಟೇನೂ ಖುಷಿ ತರುವಂಥದ್ದಲ್ಲ .

ಕಾವೇರಿ ನದಿ ನೀರು ಹಂಚಿಕೆಯ ಬಗ್ಗೆ ಅಣ್ಣಾಡಿಎಂಕೆಯ ನಾಯಕಿ ತಳೆದಿರುವ ಕಠಿಣ ನಿಲುವು ಎಲ್ಲರಿಗೂ ಗೊತ್ತಿರುವಂಥದ್ದೇ. ಹೀಗಿದ್ದೂ ಅಣ್ಣಾಡಿಎಂಕೆ ಪರ ಚುನಾವಣೆಯಲ್ಲಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಪ್ರಚಾರ ನಡೆಸಿದ್ದರು. ಜಯಲಲಿತಾ ನಾಮಪತ್ರಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದಾಗ ಅವರ ಪರವಾಗಿ ಹೇಳಿಕೆಯನ್ನೂ ನೀಡಿದ್ದರು.

ಮತ್ತೆ ಕಾವೇರಿ ವಿಷಯಕ್ಕೇ ಬರುವುದಾದರೆ- ಜಯಲಲಿತಾ ನಿಲುವು ರಾಜ್ಯದ ನಾಯಕರನ್ನು ಕಂಗೆಡಿಸುವುದರಲ್ಲಿ ಆಶ್ಚರ್ಯವಿಲ್ಲ . ಗುರ್ತಿಸಿಕೊಳ್ಳಲು ಬಯಸದ ಹಿರಿಯ ರಾಜಕಾರಣಿಯಾಬ್ಬರು ಇದೇ ಆತಂಕವನ್ನು ವ್ಯಕ್ತಪಡಿಸುತ್ತಾ, ‘ಜಯಲಲಿತಾ ಕರ್ನಾಟಕದ ಪಾಲಿಗೆ ತಲೆನೋವಾಗಿ ಪರಿಣಮಿಸುವುದು ಖಚಿತ. ಆಕೆಗೆ ಕರುಣಾನಿಧಿ ಅವರಿಗಿದ್ದಷ್ಟು ರಾಜಕೀಯ ಪ್ರಬುದ್ಧತೆಯೂ ಇಲ್ಲ ’ ಎನ್ನುತ್ತಾರೆ.

ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶವಾದ ತಂಜಾವೂರು ಪ್ರಾಂತ್ಯದಲ್ಲಿ ಜಯಲಲಿತಾ ಸಾಧಿಸಿರುವ ಸಂಪೂರ್ಣ ಗೆಲುವು ಕೂಡ ಅವರ ಕಾವೇರಿ ನಿಲುವಿನ ಹಿನ್ನೆಲೆಯಲ್ಲೇ ಒದಗಿ ಬಂದಿರುವಂತದ್ದು . ಇಂಥಾ ಸಂದರ್ಭದಲ್ಲಿ ಜಯಲಲಿತಾ ನೀರು ಹಂಚಿಕೆ ಸಂಬಂಧಿಸಿದಂತೆ ಕಠಿಣ ನಿಲುವನ್ನು ತಾಳುವುದು ಅನಿವಾರ್ಯ ಎನ್ನುತ್ತಾರೆ ಹೆಸರು ಹೇಳ ಬಯಸದ ವಿರೋಧ ಪಕ್ಷದ ನಾಯಕರೊಬ್ಬರು.

ಎರಡು ದಶಕಗಳಿಂದಲೂ ಚಾಲ್ತಿಯಲ್ಲಿರುವ ನಾಲ್ಕು ರಾಜ್ಯಗಳ ವಿವಾದ

ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪಾಂಡಿಚೆರಿಗಳ ನಡುವೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧಿಸಿದ ವಿವಾದ ಎರಡು ದಶಕಗಳಿಂದಲೂ ಚಾಲ್ತಿಯಲ್ಲಿರುವುದನ್ನು , 1990 ರಲ್ಲಿ ಸಮಸ್ಯೆಯ ಇತ್ಯರ್ಥಕ್ಕೆ ನ್ಯಾಯಾಧಿಕರಣವೊಂದರ ಸ್ಥಾಪನೆಯಾಗಿರುವುದನ್ನು ನೆನೆಯಬಹುದು. ನ್ಯಾಯಾಧಿಕರಣವು 1991 ರ ತನ್ನ ಮಧ್ಯಂತರ ಆದೇಶದಲ್ಲಿ ಕರ್ನಾಟಕದಿಂದ ಮೆಟ್ಟೂರು ಜಲಾಶಯಕ್ಕೆ ವಾರ ವಾರಕ್ಕೆ ಬಿಡುಗಡೆ ಮಾಡಬೇಕಾದ ನೀರನ್ನು ಗೊತ್ತುಪಡಿಸಿತ್ತು . ಮಾನ್ಸೂನ್‌ ಮಳೆ ಅನುಸರಿಸಿ ಈ ಪ್ರಮಾಣದಲ್ಲಿ ವ್ಯತ್ಯಯವುಂಟಾಗಬಹುದಿತ್ತು .

ಕಳೆದ 5 ವರ್ಷಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಉತ್ತಮವಾಗಿ ಬಿದ್ದುದರಿಂದ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ . ಸಮಸ್ಯೆ ಶುರುವಾದದ್ದು 1998 ರಲ್ಲಿ . ಪ್ರಧಾನಿಯವರ ನೇತೃತ್ವದಲ್ಲಿ , ಜಲಾನಯನ ಪ್ರದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನೊಳಗೊಂಡ ಪ್ರಾಧಿಕಾರವು ನೀರು ಹಂಚಿಕೆ ಸಂಬಂಧ ರಚಿಸುವಂತೆ ಸುಪ್ರಿಂಕೋರ್ಟ್‌ ಒತ್ತಾಯಿಸಿತ್ತು. ಆನಂತರ ಕಾವೇರಿಯಲ್ಲಿ ಸಾಕಷ್ಟು ನೀರು ಹರಿದಿದೆ.

ತನ್ನ ಕರ್ನಾಟಕದ ಹುಟ್ಟಿನ ನೆನಪು ಜನರಿಗೆ ಗೊತ್ತಾಗುವುದು ಆಕೆಗೆ ಬೇಕಿಲ್ಲ

ಜಯಲಲಿತಾ ಅವರ ಹಿಂದಿನ ನಡೆಗಳನ್ನು ಗಮನಿಸಿದವರಿಗೆ, ಆಕೆ ರಾಜ್ಯದ ವಿರುದ್ಧ ತಳೆಯಬಹುದಾದ ನಿಲುವಿನ ಕುರಿತು ಯಾವ ಅಚ್ಚರಿಯೂ ಇಲ್ಲ . ಕರ್ನಾಟಕದಲ್ಲಿ ತಾನು ಹುಟ್ಟಿದ್ದೇನೆ ಅನ್ನುವುದನ್ನು ಅವಾಯ್ಡ್‌ ಮಾಡಲಿಕ್ಕೋಸ್ಕರ ಕೂಡ , ಆಕೆ ಸದಾ ಆಕ್ರಮಣಕಾರಿ ನಿಲುವು ತಾಳುತ್ತಾ ಬಂದಿರುವುದನ್ನು ಮತ್ತೊಬ್ಬ ವಿರೋಧ ಪಕ್ಷದ ನಾಯಕರು ನೆನಪಿಸುತ್ತಾರೆ.

ಉಭಯ ರಾಜ್ಯಗಳು ಎದುರಿಸುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆಯಾದ ನರಹಂತಕ ವೀರಪ್ಪನ್‌ ಶಿಕಾರಿಗೆ ಜಯಲಲಿತಾ ಸಹಕರಿಸುವ ಬಗ್ಗೆ ಮಾತ್ರ ಯಾರಿಗೂ ಅನುಮಾನ ಉಳಿದಿಲ್ಲ . ವೀರಪ್ಪನ್‌ ಶಿಕಾರಿಗಾಗಿ ನಾವು ತಮಿಳುನಾಡಿನ ಮೇಲೆ ಒತ್ತಡ ಹೇರುವಂತಿಲ್ಲ . ಪ್ರಸ್ತುತ ಜಯಲಲಿತಾ ಅವರಿಂದ ಸಂಪೂರ್ಣ ಸಹಕಾರ ದೊರೆಯುವ ನಿರೀಕ್ಷೆಯಿದೆ ಎಂದು ಕರ್ನಾಟಕದ ಸಚಿವರೊಬ್ಬರು ಹೇಳುತ್ತಾರೆ.

(ಐಎಎನ್‌ಎಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X