ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವೈದ್ಯ ನೋರಿಗೆ ಅಮೆರಿಕದ ‘ಜೀವನ ನಮನ’ ಪ್ರಶಸ್ತಿ

By Staff
|
Google Oneindia Kannada News

*ಸುಮನ್‌ ಗುಹಾ ಮಜುಂದಾರ್‌

ನ್ಯೂಯಾರ್ಕ್‌ : ಕ್ಯಾನ್ಸರ್‌ ನಿವಾರಣೆ ಕುರಿತ ಸಂಶೋಧನೆಯಲ್ಲಿ ತೊಡಗಿರುವ ಅಮೆರಿಕದಲ್ಲಿರುವ ಭಾರತೀಯ ದೈಹಿಕ ತಜ್ಞ ದತ್ತಾತ್ರೇಯುಡು ನೋರಿ ಅವರಿಗೆ ‘ಟ್ರಿಬ್ಯೂಟ್‌ ಟು ಲೈಫ್‌’ ಪ್ರಶಸ್ತಿ ಸಂದಿದೆ. ಅಮೆರಿಕನ್‌ ಕ್ಯಾನ್ಸರ್‌ ಸೊಸೈಟಿ (ಎಸಿಎಸ್‌) ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದೆ.

ನ್ಯೂಯಾರ್ಕ್‌ನ ಪ್ರೆಸ್‌ಬಿಟೇರಿಯನ್‌ ಹಾಸ್ಪಿಟಲ್‌ನ ರೇಡಿಯೇಶನ್‌ ಅಂಕಾಲಜಿ ವಿಭಾಗದಲ್ಲಿ ವೀಲ್‌- ಕಾರ್ನಲ್‌ ಮೆಡಿಕಲ್‌ ಸೆಂಟರ್‌ನ ಅಧ್ಯಕ್ಷ ಹಾಗೂ ಪ್ರೊಫೆಸರ್‌ ಆಗಿರುವ ನೋರಿ ಅವರಿಗೆ ಎಸಿಎಸ್‌ನ ಪ್ರಾದೇಶಿಕ ನಿರ್ದೇಶಕ ಡಾನ್‌ ಡಿಸ್ಟಾಸಿಯೋ ಮೇ 11ರಂದು ಈ ಪ್ರಶಸ್ತಿ ನೀಡಿದರು.

ನೋರಿ ಅವರಿಗೇಕೆ ಪ್ರಶಸ್ತಿ ? ಕಲೆದ ಒಂದೂವರೆ ದಶಕದಿಂದ ಕ್ಯಾನ್ಸರ್‌ ನಿರ್ಮೂಲನೆ ಕುರಿತಂತೆ ಇವರು ಸಂಶೋಧನೆ ನಡೆಸಿದ್ದಾರೆ. ರೋಗಿಗಳ ಶುಶ್ರೂಷೆ ಹೇಗೆ ಮಾಡುವುದು, ಕ್ಯಾನ್ಸರ್‌ ಬಗ್ಗೆ ಶಿಕ್ಷಣ ಮೊದಲಾದ ಒಳ್ಳೆಯ ಕೆಲಸಗಳನ್ನು ನೋರಿ ಮಾಡಿದ್ದಾರೆ.

ಆಂಧ್ರಪ್ರದೇಶ ಮೂಲದವರಾದ ನೋರಿ 1975ರಲ್ಲಿ ಅಮೆರಿಕೆಗೆ ಬಂದರು. ಅದಕ್ಕೂ ಮೊದಲು ಕರ್ನೋಲ್‌ ಮೆಡಿಕಲ್‌ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದ್ದರು. ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದು, ಭೇಷ್‌ ಎನಿಸಿಕೊಂಡಿದ್ದರು. ಸ್ಲೋನ್‌- ಕೆಟ್ಟೆರಿಂಗ್‌ ಸ್ಮಾರಕ ಕ್ಯಾನ್ಸರ್‌ ಕೇಂದ್ರಕ್ಕೆ ಸೇರಿದ ನೋರಿ, ಬ್ರಾಂಕೈಥೆರಪಿಯ (ಗಂಟಲು ಚಿಕಿತ್ಸೆಗೆ ಸಂಬಂಧಿಸಿದ್ದು) ಮುಖ್ಯಸ್ಥರಾದರು. ಎರಡು ಮಕ್ಕಳ ಈ ತಂದೆ ತಮ್ಮ ಪತ್ನಿ ಸುಭದ್ರೆಯವರ ನೆಚ್ಚೂ ಹೌದು.

ಗ್ರಂಥಿ (ಅಂಕಾಲಜಿ) ಬಗ್ಗೆ ಜನಜಾಗೃತಿ ಮೂಡಿಸುವುದು ನನ್ನ ಉದ್ದಿಶ್ಯ. ಕ್ಯಾನ್ಸರ್‌ ನಿವಾರಣೆ ಹೇಗೆ, ಆ ಕಾಯಿಲೆಯನ್ನು ದೂರ ಇಡುವುದು ಹೇಗೆ ಅನ್ನೋದರ ಬಗ್ಗೆ ತಿಳಿವಳಿಕೆ ಕೊಡುವುದು ನನ್ನ ಕೆಲಸ. 2010ರ ಹೊತ್ತಿಗೆ 25 ಪ್ರತಿಶತ ಕ್ಯಾನ್ಸರ್‌ ನಿರ್ಮೂಲನೆ ಮಾಡುವುದು, ಕ್ಯಾನ್ಸರ್‌ ರೋಗಕ್ಕೆ ತುತ್ತಾಗುವವರ ಸಂಖ್ಯೆಯನ್ನು ಶೇ.50ಕ್ಕೆ ತಗ್ಗಿಸುವುದು ನನ್ನ ಗುರಿ ಎಂದು ಪ್ರಶಸ್ತಿ ಸ್ವೀಕರಿಸಿದ ನಂತರ ನೋರಿ ಹೇಳಿದರು.

ಎಸಿಎಸ್‌ನ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವ ನೋರಿ, ಯುಎನ್‌ ಇಂಟರ್‌ನ್ಯಾಷನಲ್‌ ಅಟಾಮಿಕ್‌ ಎನರ್ಜಿ ಏಜೆನ್ಸಿಯ ಕನ್ಸಲ್ಟೆಂಟ್‌ ಕೂಡ ಹೌದು. ಕ್ಯಾನ್ಸರ್‌ ಗೆಡ್ಡೆಗಳನ್ನು ಕರಗಿಸುವ ಬಗೆಯನ್ನು ಏಜೆನ್ಸಿಯಲ್ಲಿ ಇವರು ವಿವರಿಸುತ್ತಾರೆ. ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳಿಗೂ ಸೇವೆ ಸಲ್ಲಿಸಿರುವ ದತ್ತಾತ್ರೇಯುಡು ಗುರಿ ದೊಡ್ಡದಿದೆ. ಈವರೆಗಿನ ಸೇವೆಗೆ ಪ್ರಶಸ್ತಿಯ ಗರಿ ದೊರೆತಿದೆ. ಇದು ಅವರ ಯಶಸ್ಸಿನ ಮಹಡಿಗೆ ಮತ್ತೊಂದು ಮೆಟ್ಟಿಲಾಗಲಿ.

(ಐಎಎನ್‌ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X