Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಸಣ್ಣ ಎಳೆಯನ್ನೇ ಹಿಡಿದುಕೊಂಡು ದೊಡ್ಡದೊಂದು ಜಗಳ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೀರಿ. ಇದರಿಂದ ಏನು ಲಾಭ ಹೇಳಿ ?

ವೃಷಭ : ಬರೇ ನೆಗೆಟಿವ್‌ ಆಗಿ ಯೋಚಿಸುವುದನ್ನು ಇಷ್ಟ ಪಡುತ್ತೀರಾ. ಇವತ್ತು ಅದಕ್ಕೆ ಸಾಕಷ್ಟು ಸಮಯವೂ ನಿಮ್ಮ ಬಳಿ ಇರುತ್ತದೆ. ಮನಸ್ಸಿದ್ದರೆ ಸದುಪಯೋಗಪಡಿಸಿಕೊಳ್ಳಬಹುದು.

ಮಿಥುನ : ಸ್ನೇಹಿತರ ಸಿಟ್ಟಿಗೆ ಗುರಿಯಾಗುತ್ತೀರಿ, ಎಂದಮೇಲೆ ದಿನದ ಭವಿಷ್ಯವೆಲ್ಲವೂ ನಿರ್ಧಾರವಾದಂತೆಯೇ ಅಲ್ವೇ ?

ಕಟಕ : ಕ್ರಾಂತಿಯನ್ನು ಹುಟ್ಟುಹಾಕುವವರು ಹಸಿವಿನ ಕನಸನ್ನು ಮಾತ್ರ ಕಾಣುತ್ತಾರೆ ಎಂಬ ಮಾತನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೀರಿ. ಸಾಮರ್ಥ್ಯ ನಿಮ್ಮ ಬುಟ್ಟಿಯಲ್ಲಿರುವಾಗ ಚಿಂತೆ ಸಲ್ಲ.

ಸಿಂಹ : ಸಂಪರ್ಕ ಉಳಿಸಿಕೊಳ್ಳದ ಸ್ನೇಹಿತರ ಬಗ್ಗೆ ನಿಮಗಿರುವ ಬೇಜಾರನ್ನು ಮರೆಯಲೆತ್ನಿಸುತ್ತೀರಿ. ಅದಕ್ಕೆ ಪೂರಕವಾಗಿ ಮನೆಯಲ್ಲಿ ಸುಂದರ ವಾತಾವರಣ ನಿಮಗೆ ನೆಮ್ಮದಿ ತರುತ್ತದೆ.

ಕನ್ಯಾ : ನಿಮ್ಮ ಮುಂದಿರುವ ದೊಡ್ಡದೊಂಡು ಕನಸು ಚಿಗುರಲಿದೆ. ಮತ್ತೆ ಆ ಖುಷಿ ಇವತ್ತು ಮನೆಯವರನ್ನೆಲ್ಲರನ್ನೂ ಸಂತಸವಾಗಿಡಲಿದೆ.

ತುಲಾ : ಪ್ರವಾಸ ಹೊರಡುವ ಯೋಚನೆ ಇದೆ ತಾನೇ ? ಆದರೆ ನೀವು ಆರ್ಥಿಕ ಮೂಲವನ್ನು ಭಧ್ರಪಡಿಸಿಕೊಂಡಿಲ್ಲ ಎಂಬುದನ್ನು ಮರೆಯಬಾರದು.

ವೃಶ್ಚಿಕ : ಪಕ್ಕದಲ್ಲೇ ಇರುವ ನಿಮ್ಮ ವೈರಿಗಳ ಬಗ್ಗೆ ಸಾಕಷ್ಟು ಎಚ್ಚರಿಕೆಯಿಂದಿರಬೇಕಾದ ಕಾಲ ಹತ್ತಿರ ಬಂದಿದೆ. ನಿರ್ಲಕ್ಷ್ಯ ಸಲ್ಲ.

ಧನಸ್ಸು : ಮೊಂಡುತನ ಬಿಟ್ಟು ಬಿಡಲು ನಿಮಗೆ ತಿಳಿದಿದೆ ಎಂಬ ಸ್ನೇಹಿತರ ನಿರೀಕ್ಷೆ ಹುಸಿಗೊಳಿಸಬಾರದಲ್ವಾ ? ಧನಲಾಭವಿದೆ.

ಮಕರ : ದಂತದರಮನೆಯ ಕನಸಿನಿಂದ ದೂರವಿದ್ದರೆ ಚೆನ್ನ. ಇವತ್ತಿನ ಮಟ್ಟಿಗೆ ನಿಮ್ಮದು ಯಾಂತ್ರಿಕ ದಿನ . ಪೂರ್ವ ನಿಶ್ಚಿತ ವಿಷಯಗಳ ಬಗ್ಗೆ ಹೆಚ್ಚಿನ ಚಿಂತೆ ಬೇಡ.

ಕುಂಭ : ನನಸಾಗದ ಕನಸುಗಳನ್ನು ಬೆಳೆಯಗೊಡುವುದಿಲ್ಲ ತಾನೇ ? ಹಾಸಿಗೆಯಿದ್ದಷ್ಟು ಕಾಲು ಚಾಚಿದರೆ ದಿನವೂ ಖುಷಿ ನಿಮ್ಮ ಬಳಿಯೇ ಇರುತ್ತದೆ ಅಲ್ವೇ ?

ಮೀನ : ಕೈಗೆ ಬಂದ ಅವಕಾಶವನ್ನು ಧಾರಾಳವಾಗಿ ದುರುಪಯೋಗಪಡಿಸಿಕೊಂಡು ಆನಂದಿಸಿರುವುದರ ಬಗ್ಗೆ ಪಶ್ಚಾತ್ತಾಪ ಪಡುತ್ತೀರಿ. ರಜೆಯ ಮಜಾ ಮನೆಯಲ್ಲಿ ನಲಿದಾಡುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+