Get Updates
Get notified of breaking news, exclusive insights, and must-see stories!

‘ಕುಂಬ್ಳೆ ಅಗ್ನಿಪರೀಕ್ಷೆಗಳಲ್ಲಿ ಪಾಸಾಗಬೇಕಿದೆ’ - ಜಾನ್‌ರೈಟ್‌

ಬೆಂಗಳೂರು : ಬಲಭುಜ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅನಿಲ್‌ ಕುಂಬ್ಳೆ ತಂಡಕ್ಕೆ ಮರಳಲು ಸಾಕಷ್ಟು ಹೋರಾಟ ನಡೆಸಬೇಕಾಗಿದೆ ಎಂದು ಭಾರತ ಕ್ರಿಕೆಟ್‌ ತಂಡದ ತರಬೇತುದಾರ ಜಾನ್‌ ರೈಟ್‌ ಹೇಳುವುದರೊಂದಿಗೆ ಕುಂಬ್ಳೆಯವರ ಮುಂದಿನ ದಾರಿ ಹೂವಿನ ಹಾದಿಯಲ್ಲ ಅನ್ನುವುದು ಸ್ಪಷ್ಟವಾಗಿದೆ.

51 ದಿನಗಳ ಜಿಂಬಾಬ್ವೆ ಪ್ರವಾಸದ ಹಿನ್ನೆಲೆಯಲ್ಲಿ, ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಾರಂಭವಾದ ಆರು ದಿನಗಳ ತರಬೇತಿ ಶಿಬಿರದ ಸಂದರ್ಭದಲ್ಲಿ ರೈಟ್‌ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಇತ್ತೀಚೆಗಷ್ಟೇ ಡಾ. ಫರ್ಗ್ಯೂಸನ್‌ ಅವರಿಂದ ಚಿಕಿತ್ಸೆ ಪಡೆದು ದಕ್ಷಿಣ ಆಫ್ರಿಕಾದಿಂದ ವಾಪಸ್ಸಾಗಿದ್ದ ಕುಂಬ್ಳೆ ಅಕ್ಟೋಬರ್‌ನಲ್ಲಿನ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಾವು ಲಭ್ಯರೆಂದು ತಿಳಿಸಿದ್ದರು. ಆದರೆ, ಆ ಹಾದಿಯಲ್ಲಿ ಕುಂಬ್ಳೆ ಕಠಿಣ ಸವಾಲನ್ನು ಎದುರಿಸಬೇಕಾಗುವ ಇಂಗಿತವನ್ನು ರೈಟ್‌ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ತರಬೇತಿ ಶಿಬಿರಕ್ಕೆ ಹೋಲಿಸಿದರೆ, ಈ ಬಾರಿ ಎಲ್ಲಾ 26 ಮಂದಿ ಸಂಭವನೀಯ ಆಟಗಾರರು ದೈಹಿಕವಾಗಿ ಹೆಚ್ಚು ಸಶಕ್ತರಾಗಿದ್ದಾರೆ. ಪ್ರತಿಯಾಬ್ಬ ಆಟಗಾರನೂ ಮತ್ತೊಬ್ಬ ಆಟಗಾರನನ್ನು ಅರ್ಥೈಸಿಕೊಳ್ಳಲು ಈ ಶಿಬಿರ ಸಹಾಯಕವಾಗುತ್ತದೆ ಎಂದು ಎಂದು ರೈಟ್‌ ಅಭಿಪ್ರಾಯಪಟ್ಟರು . ಆಟಗಾರರಿಗೆ ನೆರವು ನೀಡುವ ದೃಷ್ಟಿಯಿಂದ ಸಿದ್ಧತಾ ಶಿಬಿರದಲ್ಲಿ ಕುಂಬ್ಳೆ ಕೂಡ ಭಾಗವಹಿಸಿದ್ದಾರೆ. ಆದರೆ, ಅವರು ಸಂಭವನೀಯರ ಪಟ್ಟಿಯಲ್ಲಿಲ್ಲ .

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+