Get Updates
Get notified of breaking news, exclusive insights, and must-see stories!

ದೇಶದ ಮಿನಿ ಮಹಾ ಚುನಾವಣೆ : ಐದು ರಾಜ್ಯಗಳ ಫಲಿತಾಂಶ

ಬೆಂಗಳೂರು : ದೇಶದ ಮಿನಿ ಚುನಾವಣೆ ಎಂದೇ ಬಣ್ಣಿತವಾಗಿದ್ದ ಐದು ರಾಜ್ಯಗಳ ವಿಧಾನಸಭಾ ಫಲಿತಾಂಶಗಳು ಹೆಚ್ಚು ಕಡಿಮೆ ಪ್ರಕಟವಾಗುತ್ತಿದ್ದಂತೆಯೇ ನಾಳಿನ ಚಿತ್ರಣ ಹೆಚ್ಚು ಸ್ಪಷ್ಟವಾಗುತ್ತಿದೆ.

ಜಯಲಲಿತಾ ನೇತೃತ್ವದ ಎಐಎಡಿಎಂಕೆ ತಮಿಳುನಾಡಿನಲ್ಲಿ ನಿಚ್ಚಳ ಬಹುಮತ ಪಡೆಯುತ್ತಿದ್ದಂತೆ, ವಿಜಯೋತ್ಸವದಲ್ಲಿರುವ ಜಯಲಲಿತಾ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ. ಚೆಪಾಕ್‌ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರೂ, ಪಕ್ಷದ ಸೋಲನ್ನು ಒಪ್ಪಿಕೊಂಡಿರುವ ಕರುಣಾನಿಧಿ ತಮಿಳುನಾಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಅಲ್ಲುಳಿದಿರುವುದು ಕಾನೂನು ಸಮಸ್ಯೆಗಳನ್ನು ಮೀರಿ ಜಯಲಲಿತಾ ಮುಖ್ಯಮಂತ್ರಿ ಆಗುತ್ತಾರೆಯೇ ಅನ್ನುವ ಕುತೂಹಲ ಮಾತ್ರ.

ಪಶ್ಚಿಮಬಂಗಾಳದಲ್ಲಿ ಎಡಪಕ್ಷಗಳ ಮೇಲಿನ ನಂಬಿಕೆಯನ್ನು ಮುಂದುವರಿಸಿರುವ ಮತದಾರ, ಗದ್ದುಗೆ ಏರುವ ಮಮತಾ ಬ್ಯಾನರ್ಜಿ ಅವರ ಕನಸಿಗೆ ಕೊಡಲಿಯಿಕ್ಕಿದ್ದಾನೆ. ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಬುದ್ಧದೇವ ಭಟ್ಟಾಚಾರ್ಯ ಜಾಧವಪುರ ಕ್ಷೇತ್ರದಿಂದ 29 ಸಾವಿರದ 860 ಮತಗಳ ಭಾರೀ ಗೆಲುವು ಸಾಧಿಸುವುದರೊಂದಿಗೆ ಎರಡನೇ ಬಾರಿ ಮುಖ್ಯಮಂತ್ರಿಯಾಗುವ ದಿಕ್ಕಿನಲ್ಲಿದ್ದಾರೆ.

ಅಸ್ಸಾಂನದು ಹೆಚ್ಚು ಸ್ಪಷ್ಟವಾಗದ ಚಿತ್ರ. ಕಾಂಗ್ರೆಸ್‌ 55 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಮುಖ್ಯಮಂತ್ರಿ ಪ್ರಫುಲ್ಲಕುಮಾರ್‌ ಮಹಾಂತ ನೇತೃತ್ವದ ಅಸ್ಸಾಂ ಗಣ ಪರಿಷತ್‌ ಹಾಗೂ ಬಿಜೆಪಿ ಮೈತ್ರಿಕೂಟ 38 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಕೇರಳದಲ್ಲಿ 101 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಯುಡಿಎಫ್‌ ತಮ್ಮ ಎದುರಾಳಿ ಎಲ್‌ಡಿಎಫ್‌ಗಿಂತ (38 ಮುನ್ನಡೆ)ಭಾರೀ ಮುನ್ನಡೆ ಸಾಧಿಸಿದೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಯುಡಿಎಫ್‌ನ ಕರುಣಾಕರನ್‌ ಅಥವಾ ಆ್ಯಂಟನಿ ಅವರ ಪೈಕಿ ಮುಖ್ಯಮಂತ್ರಿ ಯಾರಾಗುತ್ತಾರೆ ಅನ್ನುವುದು ಇನ್ನೂ ಒಡೆಯಲಾಗದ ಗುಟ್ಟು . ಪಕ್ಷದ ಶಾಸಕರ ಅಭಿಪ್ರಾಯ ಯಾವುದಾದರೂ, ಅದನ್ನು ಬದಲಿಸುವ ಅಮ್ಮಾವ್ರ ಕೈ ದೆಹಲಿಯಲ್ಲಿದೆ ಅನ್ನುವುದು ಗಮನಾರ್ಹ.

ಪಾಂಡಿಚೆರಿಯಲ್ಲಿ ಜಿದ್ದಾಜಿದ್ದಿ ಸ್ಪರ್ಧೆ. ಡಿಎಂಕೆ ಮೈತ್ರಿಕೂಟ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಎದುರಾಳಿ ಕಾಂಗ್ರೆಸ್‌ ಮೈತ್ರಿಕೂಟ ಕೂಡ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+