ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಆನಂದದಿಂದ ಕಾಲ ಕಳೆಯಲು ಇಂದು ಸುದಿನ. ಆತ್ಮೀಯರೊಂದಿಗೊಂದು ಸುಂದರ ಸಂಜೆ. ಎಲ್ಲ ಕಾರ್ಯದಲ್ಲೂ ಅನುಕೂಲ. ಸಿಕ್ಕ ಅವಕಾಶ ಕೈತಪ್ಪುವ ಸಾಧ್ಯತೆಯೂ ಇದೆ.ವೃಷಭ : ನಿಮ್ಮ ವ್ಯಕ್ತಿತ್ವದ ಆಳಕ್ಕೆ ಹೊಂದುವಂತಿದೆ ಗ್ರಹಗತಿ. ನಿರಾಶೆಯನ್ನು ಬದಿಗೊತ್ತಿ, ಆಶಾದಾಯಕವಾಗಿ ಮುನ್ನುಗ್ಗಿ. ಕೈಕೆಸರಾದರೆ ಬಾಯಿ ಮೊಸರು ಎನ್ನುವುದನ್ನು ಮರೆಯದಿರಿ.
ಮಿಥುನ : ಭಾವನೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಉತ್ತಮ. ಅತಿ ಆಸೆ ಗತಿಕೇಡು. ಹಾಸಿಗೆ ಇದ್ದಷ್ಟು ಕಾಲುಚಾಚುವ ನೀತಿ ರೂಢಿಸಿಕೊಂಡರೆ ಯಾವುದೇ ಸಂಕಷ್ಟವಿಲ್ಲ.
ಕಟಕ : ನಂಬಿದವರೆಲ್ಲಾ ನಿಮಗೆ ಕೈಕೊಡುತ್ತಿದ್ದಾರೆ. ಹಿತಶತ್ರುಗಳು, ನಿಮ್ಮನ್ನು ತುಳಿಯಲು ಹಾತೊರೆಯುತ್ತಿದ್ದಾರೆ. ಅವಕಾಶವಾದಿಗಳ ಬಗ್ಗೆ ಎಚ್ಚರದಿಂದಿದ್ದರೆ ಕ್ಷೇಮ. ಧೈರ್ಯವೇ ನಿಮ್ಮನ್ನು ಕಾಪಾಡುತ್ತದೆ.
ಸಿಂಹ : ಅನಿರೀಕ್ಷಿತ ಘಟನೆಗಳು ಗೊಂದಲಕ್ಕೆ ಎಡೆಮಾಡಿಕೊಡುತ್ತವೆ. ಅನಾರೋಗ್ಯವೂ ನಿಮ್ಮನ್ನು ಬಾಧಿಸಲಿದೆ. ಹೆಣ್ಣು, ಹೊನ್ನು, ಮಣ್ಣಿನ ಬೆನ್ನು ಹತ್ತುವ ಸಾಹಸ ಬೇಡ.
ಕನ್ಯಾ : ಧನಯೋಗವಿದೆ. ಶುದ್ಧ ಚಾರಿತ್ರ್ಯ, ಪಾವಿತ್ರ್ಯ ಕಾಪಾಡಿಕೊಳ್ಳಿ. ಪ್ರಯಾಣ ಯೋಗವಿದೆ. ಕುಲದೇವರ ದೇವಾಲಯ ದರ್ಶನದಿಂದ ಎಲ್ಲವೂ ಶುಭ. ಮನೆಯಲ್ಲಿ ಶುಭಕಾರ್ಯದ ಮಾತುಕತೆ.
ತುಲಾ : ಪ್ರೇಮ ಪಂಚಮ ವೇದ. ಪ್ರೇಮಕ್ಕೆ ವಂಚನೆ ಸರಿಯಲ್ಲ. ನಂಬಿದವರಿಗೆ ಕೈಕೊಡಬೇಡಿ. ವಿರಹ ನಿಮ್ಮನ್ನು ಇಂದು ತೀವ್ರವಾಗಿ ಕಾಡಲಿದೆ. ಅನ್ಯರನ್ನು ಟೀಕಿಸುವುದ ಬಿಟ್ಟುಬಿಡಿ.
ವೃಶ್ಚಿಕ : ಭೂಮಿಯನ್ನೇ ಅಗೆದು ತೆಗೆಯುವ ಶಕ್ತಿ ನಿಮಗಿದೆ. ನಿಮ್ಮ ವಸ್ತು ಎಲ್ಲಿದ್ದರೂ ಹುಡುಕೇ ಹುಡುಕುತ್ತೀರಿ. ನಿಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ. ನಿಮಗೆ ತೊಂದರೆ ಕೊಡಲೆಂದೇ ಕೆಲವರು ಹುಟ್ಟಿಕೊಂಡಿದ್ದಾರೆ.
ಧನಸ್ಸು : ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ, ವಿದ್ಯಾರ್ಥಿಗಳಿಗೆ ಶುಭದಿನ. ಎಲ್ಲ ಮುಕ್ತಾಯಗಳೂ, ಹೊಸ ಆರಂಭಕ್ಕೆ ಸೋಪಾನವಾಗಲಿವೆ. ಕೌಟುಂಬಿಕ ಸಮಸ್ಯೆಗಳು ಇದು ಹೇರಳವಾಗಿವೆ.
ಮಕರ : ಹತ್ತಾರು ಸಮಸ್ಯೆಗಳು ಕಾಡುತ್ತಿವೆ. ನಿಭಾಯಿಸುವ ಶಕ್ತಿ ನಿಮ್ಮಲ್ಲಿದೆ. ಮುಖ್ಯ ಯೋಜನೆಗಳು ಇಂದು ಮುಕ್ತಾಯ ಕಾಣಲೇಬೇಕು. ಅದು ಆಗದಿದ್ದರೆ ಒಂದು ತೃಪ್ತಿಕರ ಘಟ್ಟಕ್ಕೆ ಬಂದು ನಿಲ್ಲುವಂತೆ ನೋಡಿಕೊಳ್ಳಿ.
ಕುಂಭ : ಬೇವು ಭಿತ್ತಿ ಮಾವು ಬೆಳೆಯಲು ಸಾಧ್ಯವಿಲ್ಲ. ಗಗನಕುಸುಮಕ್ಕೆ ಕೈಚಾಚುವ ಸಾಹಸ ಬೇಡ. ನೀವಂತೂ ಆಶಾವಾದದ ತುತ್ತ ತುದಿಯಲ್ಲಿ ವಿಹರಿಸುತ್ತಿದ್ದೀರಿ. ಆಸೆಗಳಿಗೆ ಕಡಿವಾಣ ಹಾಕಿ.
ಮೀನ : ಇಂದು ನಿಮಗೆ ಸಿಕ್ಕಿರುವ ಆನಂದ ಇನ್ನೆಂದೂ ಸಿಗಲಾರದು. ಉಪಟಳ ನೀಡುವ ಮಂದಿ ದೂರವಾಗಿದ್ದಾರೆ. ಒಂದರ ಹಿಂದೊಂದರಂತೆ ಅಚ್ಚರಿಗಳೇ ಕಾದಿವೆ. ಒಟ್ಟಾರೆ ಶುಭವೋ ಶುಭ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications