ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಿಣ್‌ ಟ್ರಿಣ್‌... ಜೋರು ಟ್ರಾಫಿಕ್ಕು, ಭಾರೀ ಆದಾಯ

By Staff
|
Google Oneindia Kannada News

*ಇಮ್ರಾನ್‌ ಖುರೇಷಿ

ಬೆಂಗಳೂರು : ದೂರಸಂಪರ್ಕ ಸಚಿವಾಲಯದ ವಾಲ್ಯುಮ್‌ ಗೇಮ್‌ ಫಲ ಕೊಟ್ಟಿದೆ. 200 ಕಿ.ಮೀ. ವ್ಯಾಪ್ತಿಯ ಜಾಗೆಗಳಲ್ಲಿ ಎಸ್‌ಟಿಡಿ ಬದಲಿಗೆ ಸ್ಥಳೀಯ ಕರೆಗಳನ್ನೇ ದೂರವಾಣಿಯಲ್ಲಿ ಉಪಯೋಗಿಸುವ ಸವಲತ್ತಿನಿಂದ ಜನರೊಟ್ಟಿಗೆ ದೂರಸಂಪರ್ಕ ಇಲಾಖೆಯೂ ನಗುತ್ತಿದೆ. ಈ ಹೆಜ್ಜೆಯಿಂದ ಇಲಾಖೆಗೆ ಪ್ರತಿಶತ 5-6ರಷ್ಟು ಆದಾಯ ಹೆಚ್ಚಾಗಿದೆ.

ಈ ಸವಲತ್ತು ದೊರೆಯುವ ಮುಂಚೆ ಬೆಂಗಳೂರು ದೂರಸಂಪರ್ಕ ವ್ಯಾಪ್ತಿಯಲ್ಲಿ (200 ಕಿಲೋಮೀಟರ್‌ ತ್ರಿಜ್ಯದ ವ್ಯಾಪ್ತಿ) ಗಂಟೆಗೆ 200 ಕರೆಗಳನ್ನು ಮಾಡಲಾಗುತ್ತಿತ್ತು. ಮೈಸೂರು, ಮಂಡ್ಯ, ಕೋಲಾರ, ಹಾಸನ, ತುಮಕೂರು ಮೊದಲಾದ ಸ್ಥಳಗಳಿಗೆ ಈ ಕರೆ ಹೋಗುತ್ತಿದ್ದವು. ಆದರೆ ಆಗ ಕರೆಗಳು ಎಸ್‌ಟಿಡಿ ಆಗಿದ್ದವು. ಜನವರಿ 26ಕ್ಕೆ ಸ್ಥಳೀಯ ಕರೆಗಳಾಗಿ ಇವು ಮಾರ್ಪಟ್ಟ ನಂತರ, ಗಂಟೆಗೆ 28 ಸಾವಿರ ಕರೆಗಳು ದಾಖಲಾಗುತ್ತಿವೆ.

ಸ್ಥಳೀಯ ಕರೆಯ ಸವಲತ್ತು ಕೊಡುವ ಮುಂಚೆ ಇಲಾಖೆಯ ಆದಾಯ ದಿನಕ್ಕೆ 48 ಸಾವಿರ ರುಪಾಯಿ ಇತ್ತು. ಇವತ್ತು ಈ ಆದಾಯ 71 ಸಾವಿರ ರುಪಾಯಿ !

ದೂರಸಂಪರ್ಕ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ತಮ್ಮದೇ ಆದ ಬಗೆಬಗೆಯ ವಿವರಣೆಗಳನ್ನು ಕೊಡುತ್ತಾರೆ-

  • ಪ್ರಿನ್ಸಿಪಲ್‌ ಜನರಲ್‌ ಮ್ಯಾನೇಜರ್‌ ಕೆ.ಪದ್ಮನಾಭನ್‌- ಆದಾಯ ಹೆಚ್ಚಾಗಿದೆ. ಆದರಿದು ಪಲ್ಸ್‌ ದರದಲ್ಲಿನ ಏರಿಕೆಯಿಂದ ಆಗಿರುವಂಥದ್ದಲ್ಲ
  • ಚೀಫ್‌ ಜನರಲ್‌ ಮ್ಯಾನೇಜರ್‌ (ಕರ್ನಾಟಕ ಸರ್ಕಲ್‌) ಟಿ.ರಾಮಮೂರ್ತಿ- ಆದಾಯದಲ್ಲಿ ಗಣನೀಯ ಹೆಚ್ಚಳ ಕಾಣುತ್ತಿದೆ. ಟ್ರಾಫಿಕ್‌ ಕೂಡ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಿದೆ. ಇದು ರಾಜ್ಯದ ಎಲ್ಲಾ 19 ಎಸ್‌ಎಸ್‌ಎ (ಸೆಕೆಂಡರಿ ಸ್ವಿಚಿಂಗ್‌ ಏರಿಯಾಸ್‌) ಗಳಲ್ಲೂ ಆಗಿರುವ ಬದಲಾವಣೆ. 26 ಜಿಲ್ಲೆಗಳಾದ್ಯಂತ ಎಕ್ಸ್‌ಚೇಂಜ್‌ಗಳು ನೆಲೆಯೂರಿವೆ. ಆದರೆ ಕಳೆದ ವರ್ಷದ ಹಾಗೂ ಈ ವರ್ಷದ ಆದಾಯದ ಸ್ವರೂಪವನ್ನು ನಾನು ವಿವರಿಸಲಾರೆ.
    ಈ ಮುಂಚೆ ಬೆಂಗಳೂರಿಂದ ಮೈಸೂರಿಗೆ ಒಬ್ಬ ಕರೆ ಮಾಡಿದ ಎಂದಿಟ್ಟುಕೊಳ್ಳಿ. 15 ಸೆಕೆಂಡಿಗೆ 80 ಪೈಸೆ ಕಟ್ಟುತ್ತಿದ್ದ. ಈಗ ಅದೇ ಹಣವನ್ನ 30 ಸೆಕೆಂಡಿಗೆ ಕಟ್ಟುತ್ತಾನೆ. ಕೋಲಾರ, ತುಮಕೂರು, ಮಂಡ್ಯ, ತುಮಕೂರಿನಂಥಾ ಸ್ಥಳಗಳಿಗೆ 30 ಸೆಕೆಂಡಿಗೆ ಒಂದು ಪಲ್ಸ್‌ ಇದ್ದದ್ದು ಈಗ 120 ಸೆಕೆಂಡುಗಳಾಗಿದೆ. ಈ ಕಾರಣಕ್ಕೇ ಆದಾಯದಲ್ಲಿ ಕೇವಲ ಐದಾರು ಪ್ರತಿಶತ ಹೆಚ್ಚಳ ಆಗಿದೆ.
  • ಪದ್ಮನಾಭನ್‌- ಈ ಯೋಜನೆಯಲ್ಲಿ ಎಲ್ಲಕ್ಕೂ ಮಿಗಿಲಾಗಿ ಕೆಲಸ ಮಾಡಿದ ಅಂಶವೆಂದರೆ, ಎಸ್‌ಟಿಡಿ ಟ್ಯಾಗ್‌ ತೆಗೆದು ಹಾಕಿದ್ದು. ಗ್ರಾಹಕರು ತಾವು ಸ್ಥಳೀಯ ಕರೆಯನ್ನಲ್ಲವೇ ಮಾಡುತ್ತಿರುವುದು ಎಂಬ ಭಾವನೆಯಲ್ಲಿ ಹೆಚ್ಚು ಹೊತ್ತು ಮಾತಾಡುತ್ತಾರೆ. ಇಲಾಖೆಗೆ ಆದಾಯ ಸಹಜವಾಗೇ ಹೆಚ್ಚುತ್ತದೆ.
    ರಾಜ್ಯದ ಗಡಿ ಭಾಗಗಳಿಗೂ ಈ ಸವಲತ್ತು ವಿಸ್ತರಿಸಿದಲ್ಲಿ ಆದಾಯ ಇನ್ನಷ್ಟು ಹೆಚ್ಚಲಿದೆ. ತಮಿಳುನಾಡಿನ ಸೇಲಂ, ಈರೋಡ್‌ ಮತ್ತು ಹೊಸೂರು, ಆಂಧ್ರಪ್ರದೇಶದ ಅನಂತಪುರ ಹಾಗೂ ಹಿಂದೂಪುರ ಕೂಡ ಬೆಂಗಳೂರಿಂದ 200 ಕಿಲೋಮೀಟರ್‌ ವ್ಯಾಪ್ತಿಯಾಳಗಿರುವ ಪ್ರದೇಶಗಳು. ಕರ್ನಾಟಕ ದೂರಸಂಪರ್ಕ ವ್ಯಾಪ್ತಿಗೆ ಇವು ಬಾರದ ಕಾರಣ ಈ ಜಾಗೆಗಳಿಗೆ ಸ್ಥಳೀಯ ಕರೆಗಳ ಸೌಕರ್ಯ ದಕ್ಕಿಲ್ಲ. ಈ ಪ್ರದೇಶಗಳಿಗೂ ಯೋಜನೆ ಅನ್ವಯಿಸಿದಲ್ಲಿ ಆದಾಯ ಸಾಕಷ್ಟು ಹೆಚ್ಚಲಿದೆ. ಈ ಜಾಗೆಗಳು ಉದ್ದಿಮೆಗಳನ್ನು ಹೊಂದಿರುವುದಷ್ಟೇ ಅಲ್ಲದೆ, ಬೆಂಗಳೂರಿನ ಹಲವಾರು ಸಂಬಂಧಿಕರ ಮನೆಗಳೂ ಇಲ್ಲಿವೆ ಎಂಬುದು ಮುಖ್ಯ.
(ಐಎಎನ್‌ಎಸ್‌)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X