ಸಿನಿಮಾದಲ್ಲಿ ಆ್ಯಕ್ಟ್ ಮಾಡೋದು ಬೇರೆ ವಿಚಾರ- ಕುಂಬ್ಳೆ
ಬೆಂಗಳೂರು : ನೀವು ಸಿನಿಮಾದಲ್ಲಿ ಆ್ಯಕ್ಟ್ ಮಾಡ್ತೀರಂತೆ- ಸುದ್ದಿಗಾರರ ಗುಂಪಿನಲ್ಲೊಬ್ಬರು ಕೇಳಿದ ಪ್ರಶ್ನೆಗೆ ಕುಂಬ್ಳೆ ಕೊಂಚ ತಬ್ಬಿಬ್ಬಾದಂತೆ ಕಂಡು ಬಂದರು. ‘ಇಟ್ಸ್ ಎ ಡಿಫರೆಂಟ್ ಮ್ಯಾಟರ್. ಐ ಹ್ಯಾವ್ ನಾಟ್ ಅಪ್ಲೈಡ್ ಮೈ ಮೈಂಡ್’ ಎಂಬುದು ಕುಂಬ್ಳೆ ಕೊಟ್ಟ ಉತ್ತರ.
ದಕ್ಷಿಣ ಆಫ್ರಿಕದಿಂದ ರಿಹೆಬಿಲಿಟೇಷನ್ ಪ್ರೋಗ್ರಾಂ ಮುಗಿಸಿ, ಬೆಂಗಳೂರಿಗೆ ಮರಳಿರುವ 30ರ ಹರೆಯದ ಕುಂಬ್ಳೆ ಅವರಲ್ಲೀಗ ಆಗಸ್ಟ್ ಹೊತ್ತಿಗೆ ಪೂರ್ತಿ ಫಿಟ್ ಆಗುವ ವಿಶ್ವಾಸ. ದಕ್ಷಿಣ ಆಫ್ರಿಕದ ಡಾ.ಫರ್ಗ್ಯೂಸನ್ ಕೊಟ್ಟ ಚಿಕಿತ್ಸೆ , ಮಾಡಿಸಿದ ತಾಲೀಮು ನಾನು ಸಾಕಷ್ಟು ಸುಧಾರಿಸಲು ಕಾರಣವಾಗಿದೆ. ಆಗಸ್ಟ್ ಹೊತ್ತಿಗೆ ಮಾಮೂಲಿನಂತೆ ಬೌಲ್ ಮಾಡಬಲ್ಲೆ ಎಂಬ ವಿಶ್ವಾಸ ನನ್ನದು ಎಂದು ಕುಂಬ್ಳೆ ಹೇಳಿದರು.
ಅಂದರೆ, ಶ್ರೀಲಂಕಾ ಪ್ರವಾಸಕ್ಕೆ ನೀವೂ ಹೋಗುವಿರಾ ಎಂಬ ಪ್ರಶ್ನೆಗೆ, ಅಷ್ಟು ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ನನ್ನ ಭುಜ ಸರಿಯಾದರೆ ಖಂಡಿತಾ. ಹಾಗಾದಲ್ಲಿ ಅದು ನನಗೆ ಬೋನಸ್. ಅಕ್ಟೋಬರ್‌ನ ದಕ್ಷಿಣ ಆಫ್ರಿಕ ಪ್ರವಾಸದ ಹೊತ್ತಿಗಂತೂ ನಾನು ಎಂದಿನಂತೆ ಆಡುವಂತಾಗಿರುತ್ತೇನೆ ಎಂದು ಖಡಾಖಂಡಿತವಾಗಿ ಹೇಳಬಲ್ಲೆ ಎಂದರು.
ಮೂಳೆ ತಜ್ಞ ಪ್ರೇಂಚಂದ್ ಖಿಂಚ ಕೂಡ ಕುಂಬ್ಳೆಯಾಟ್ಟಿಗೆ ದಕ್ಷಿಣ ಆಫ್ರಿಕದಲ್ಲಿ ರೀಹೆಬಿಲಿಟೇಷನ್ ಪ್ರೋಗ್ರಾಂಗೆ ತೆರಳಿದ್ದರು. ಡಾ.ಫರ್ಗ್ಯೂಸನ್ ಹಾಗೂ ಪ್ರೇಂಚಂದ್ ಕುಂಬ್ಳೆಗೆ ಅತಿಯಲ್ಲದ, ಗುಣಮುಖವಾಗಲು ತಕ್ಕ ತಾಲೀಮು ನಡೆಸಲು ಸಲಹೆ ಕೊಟ್ಟರು.
ಈಗ ಕುಂಬ್ಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆಟ್ ಪ್ರಾಕ್ಟೀಸ್ ಮಾಡುತ್ತಾರೆ. ಆದರೆ ಸದ್ಯಕ್ಕೆ ಸ್ಪಿನ್ ಮಾಡುತ್ತಿಲ್ಲ. ಭಾರತ ತಂಡದ ಫಿಸಿಯೋ ಆ್ಯಂಡ್ರೂ ಲೀಪಸ್ ಕೂಡ ಕುಂಬ್ಳೆ ಒಟ್ಟಿಗಿದ್ದಾರೆ. ದಕ್ಷಿಣ ಆಫ್ರಿಕದಲ್ಲಿ ನೆಲೆಸಿರುವ ಆಸ್ಟ್ರೇಲಿಯಾ ಮೂಲದ ಲೀಪಸ್, ಮೇ 13ರಿಂದ ಪ್ರಾರಂಭವಾಗಲಿರುವ ಭಾರತೀಯ ಸಂಭವನೀಯ ಆಟಗಾರರ ಶಿಬಿರದ ನಿಮಿತ್ತ ಬೆಂಗಳೂರಿನಲ್ಲಿದ್ದಾರೆ. ಅವರು ಹೇಳುವಂತೆ- ಕುಂಬ್ಳೆ ಸಾಕಷ್ಟು ಗುಣಮುಖರಾಗಿದ್ದಾರೆ. ಆದರೆ ಪ್ರಸ್ತುತ ಅಭ್ಯಾಸದಲ್ಲಿ ಸ್ಪಿನ್ ಮಾಡುವಂತಿಲ್ಲ. ಮಧ್ಯಮ ವೇಗದಲ್ಲಿ ಚೆಂಡನ್ನು ಎಸೆಯಬೇಕು. ವಾರಕ್ಕೆ 5 ದಿನ ಇಂತಿಷ್ಟೇ ಚೆಂಡುಗಳನ್ನು ಎಸೆಯಬೇಕು ಎಂದು ವೈದ್ಯರು ಸಲಹೆ ಇತ್ತಿದ್ದಾರೆ. ಕುಂಬ್ಳೆ ಅದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.
(ಯುಎನ್‌ಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications