Get Updates
Get notified of breaking news, exclusive insights, and must-see stories!

ಶಾಸಕರಿಗೆ ತಿಂಗಳಲ್ಲಿ ಕಂಪ್ಯೂಟರ್‌, ಇದು ಇ-ಆಡಳಿತದ ಪ್ರಥಮ ಹೆಜ್ಜೆ ..

ಹಾಸನ : ರಾಜ್ಯದ 120 ಶಾಸಕರಿಗೆ ಕಂಪ್ಯೂಟರ್‌ ಬಳಕೆ ಬಗ್ಗೆ ತರಬೇತಿ ನೀಡಲಾಗಿದ್ದು, ಇನ್ನೊಂದು ತಿಂಗಳೊಳಗೆ ಎಲ್ಲ ಶಾಸಕರಿಗೂ ಕಂಪ್ಯೂಟರ್‌ ನೀಡಲಾಗುವುದು ಎಂದು ರಾಜ್ಯ ವಿಧಾನಸಭಾಧ್ಯಕ್ಷ ಎಂ. ವೆಂಕಟಪ್ಪ ಅವರು ಇಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಎಲ್ಲ ಶಾಸಕರಿಗೂ ಕಂಪ್ಯೂಟರ್‌ ನೀಡುತ್ತಿರುವ ಪ್ರಥಮ ರಾಜ್ಯ ಕರ್ನಾಟಕವಾಗಿದೆ. ಈ ಕಂಪ್ಯೂಟರ್‌ಗಳಲ್ಲಿ ಆಯಾ ಕ್ಷೇತ್ರದ ರಸ್ತೆಯ ಉದ್ದ ಎಷ್ಟು? ಎಷ್ಟು ರಸ್ತೆಗಳಿಗೆ ಟಾರು ಹಾಕಲಾಗಿದೆ, ಕಚ್ಚಾ ರಸ್ತೆ ಎಷ್ಟಿವೆ, ಎಷ್ಟು ಶಾಲೆಗಳಿವೆ, ಅವುಗಳ ಸ್ಥಿತಿಗತಿ ಏನು? ಆ ಕ್ಷೇತ್ರದಲ್ಲಿರುವ ನಾಗರಿಕ ಸೌಲಭ್ಯಗಳೆಷ್ಟು ಎಂಬಿತ್ಯಾದಿ ವಿವರಗಳನ್ನೂ ಅಳವಡಿಸಲಾಗುವುದು ಎಂದರು.

ಶಾಸಕರಿಗೆ ನೀಡುವ ಎಲ್ಲ ಕಂಪ್ಯೂಟರ್‌ಗಳಿಗೂ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸಲಾಗುವುದು. ಎಲ್ಲ ಕ್ಷೇತ್ರಗಳ ಶಾಸಕರಿಗೆ ಒದಗಿಸಿರುವ ಮಾಹಿತಿಗಳನ್ನು ವೆಬ್‌ಸೈಟ್‌ಗೆ ಹಾಕಲಾಗುವುದು. ಆಯಾ ಕ್ಷೇತ್ರದಲ್ಲೇ ಶಾಸಕರಿಗೆ ಕಚೇರಿ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿ ಈ ಕಂಪ್ಯೂಟರ್‌ ಅಳವಡಿಸಲಾಗುವುದು ಎಂದೂ ವೆಂಕಟಪ್ಪ ತಿಳಿಸಿದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ನಾಗಾಲೋಟದಿಂದ ಸಾಗುತ್ತಿದ್ದರೂ, ರಾಜ್ಯದ ಸಚಿವರು ಹಾಗೂ ಶಾಸಕರು ಮಾತ್ರ ಕಂಪ್ಯೂಟರ್‌ಗಳ ಬಗ್ಗೆ ನಿರಾಸಕ್ತಿ ಹೊಂದಿದ್ದರು. ಈಗ ಅವರಿಗೆ ಬೇಕೋ ಬೇಡವೋ ಇನ್ನೊಂದು ತಿಂಗಳೊಳಗೆ ಎಲ್ಲ ಶಾಸಕರಿಗೂ ಕಂಪ್ಯೂಟರ್‌ ದೊರೆಯುತ್ತದೆ. ಇ - ಆಡಳಿತದ ಮೊದಲ ಹಜ್ಜೆ ಇದಾಗಲಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತದೆ ಎಂಬುದನ್ನು ಕಾದೇ ನೋಡಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+