Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಎಲ್ಲ ಸಿಟ್ಟು ದುಗಡಗಳನ್ನೂ ಮನಸ್ಸಿನಲ್ಲಿ ಮುಚ್ಚಿಕೊಳ್ಳಬಹುದು ಎಂಬ ಭ್ರಮೆಯಲ್ಲಿ ನೀವಿರುತ್ತೀರಿ. ಆದರೆ ನಿಮ್ಮ ಆಪ್ತರಿಗೆ ಎಲ್ಲವೂ ತಿಳಿದಿದೆ.

ವೃಷಭ : ವಾಸ್ತವವನ್ನು ವಾಚ್ಯವಾಗಿ ಒದರುವುದು ನಿಮಗೆ ಬೇಕಿಲ್ಲ ಎಂಬುದು ನಿಮ್ಮ ಸ್ನೇಹಿತರಿಗೂ ಗೊತ್ತಿದೆ. ಅವರೂ ಅದೇ ಜಾತಿಯವರು ಅನ್ನಿ.

ಮಿಥುನ : ಆರ್ಥಿಕ ಹಾನಿ ಎಂಬುದೊಂದು ಬಿಟ್ಟರೆ ಉಳಿದೆಲ್ಲ ಕೆಲಸಗಳೂ ಸುಲಲಿತವಾಗಿಯೇ ನಡೆಯುತ್ತದೆ. ಪ್ರವಾಸ ಯೋಗವಿದೆ.

ಕಟಕ : ಹೊಸದೊಂದು ನೆಲೆಗಾಗಿ ಹುಡುಕಾಡುತ್ತೀರಿ. ಮನೆಯೆಂಬುದು ಪವಿತ್ರ ಸ್ಥಾನ ಎಂಬ ಭಾವನೆ ಇರುವ ನಿಮ್ಮ ಕೆಲಸ ಪೂರೈಸಲು ತುಸು ಸಮಯ ಹಿಡಿಯುತ್ತದೆ.

ಸಿಂಹ : ಆತುರ ಬೇಡ. ಕೆಲಸವೆಲ್ಲವೂ ಚೆನ್ನಾಗಿಯೇ ನಡೆಯುತ್ತದೆ. ಸುಮ್ಮನೇ ಎಗರಾಡಿದರೆ ಕೆಟ್ಟವರೆನಿಸಿಕೊಳ್ಳುತ್ತೀರಿ.

ಕನ್ಯಾ : ಯಾವುದೇ ವಿಷಯವನ್ನು ಆಸ್ಥೆಯಿಂದ ಹಚ್ಚಿಕೊಂಡು ಅನುಭವಿಸುವ ನಿಮಗೆ ಇತ್ತೀಚೆಗೆ ಬರೀ ಸೋಲೇ ಕಾಣುತ್ತಿದೆ ಎಂಬ ಬೇಸರವಿದೆ. ಆದರೆ ಈ ದಿನ ಹಾಗಿಲ್ಲ.

ತುಲಾ : ತಾಯಿಯ ಆರೋಗ್ಯ ಏರುಪೇರಾಗಿದ್ದರೆ ಇಂದು ಸುಧಾರಿಸಲಿದೆ. ಅದಕ್ಕಿಂತ ಬೇರೆ ಸಂತೋಷ ಬೇಕೇ?

ವೃಶ್ಚಿಕ : ಆಫೀಸಿನಲ್ಲಿ ಹೆಚ್ಚು ಕೆಲಸವಿರುವುದರಿಂದ ತುಂಬಾ ಸುಸ್ತು ಮಾಡಿಕೊಳ್ಳುತ್ತೀರಿ. ಆರೋಗ್ಯದ ಕಡೆಗೆ ಗಮನವಿರಲಿ.

ಧನಸ್ಸು : ನಿಮ್ಮ ಹುದ್ದೆಯ ಘನತೆ ಗತ್ತುಗಳ ಬಗ್ಗೆ ಅಪಾರ ಕಾಳಜಿ ಬೇಕಾಗಿಲ್ಲ. ಅದು ತಾನಾಗಿಯೇ ಬರುತ್ತದೆ. ಮನೆಯಲ್ಲಿ ಇಂದು ನೆಮ್ಮದಿಯ ವಾತಾವರಣ.

ಮಕರ : ಶಕುನಗಳನ್ನು ನಂಬುವವರಿಗೆ ಇಂದು ದಿನ ಚೆನ್ನಾಗಿರುವುದು ಸಾಧ್ಯವಿಲ್ಲ. ಆಫೀಸಿನಲ್ಲಿ ಎಡವಟ್ಟುಗಳಾಗದಂತೆ ಜಾಗರೂಕರಾಗಿರಿ.

ಕುಂಭ : ಪ್ರಸಿದ್ಧಿಯಿಂದ ಯಾರು ಪುಳಕಗೊಳ್ಳುವುದಿಲ್ಲ ಹೇಳಿ. ನಿಮ್ಮ ಬದಲಾದ ಧೋರಣೆ ಎಲ್ಲ ರೀತಿಯಲ್ಲಿಯೂ ಉತ್ತಮವಾದುದು.

ಮೀನ : ಜವಾಬ್ದಾರಿಗಳನ್ನು ಲೆಕ್ಕಾಚಾರಗಳಿಲ್ಲದೆಯೇ ಆಹ್ವಾನಿಸಿಕೊಳ್ಳುವುದರಿಂದ ಹೆಚ್ಚು ಕಡಿಮೆಯಾಗದಂತೆ ನೋಡಿಕೊಳ್ಳಿ. ಮಕ್ಕಳಿಂದ ಶುಭ ಸುದ್ದಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+