ತಪ್ಪಿಸಿಕೊಂಡ ಮಕ್ಕಳ ಪತ್ತೆಗೆ ರೋಟರಿ ಕ್ಲಬ್ ವೆಬ್‌ಸೈಟ್ ನೆರವು
ಬೆಂಗಳೂರು : ಆಕಾಶವಾಣಿ ಹಾಗೂ ದೂರದರ್ಶನಗಳು ಸಂಜೆಯ ವೇಳೆ ಕಾಣೆಯಾದವರ ಬಗ್ಗೆ ಪ್ರಕಟಣೆ ನೀಡುವುದನ್ನು ನೀವು ಕೇಳಿದ್ದೀರಿ, ನೋಡಿದ್ದೀರಿ. ತಂದೆ ತಾಯಿಗಳು ಸ್ಪಲ್ಪ ಬೈದರೂ ಸಾಕು ಸೂಕ್ಷ್ಮ ಮನಸ್ಸಿನ ಕೆಲವು ಮಕ್ಕಳು ಮನೆ ಬಿಟ್ಟು ಹೋಗಿಬಿಡುತ್ತಾರೆ. ಹೆತ್ತವರು ಪರಿತಪಿಸುತ್ತಾರೆ.
ಇನ್ನು ಕೆಲವು ಬಾರಿ ಹಣದಾಸೆಗೆ ದುಷ್ಕರ್ಮಿಗಳು ಮಕ್ಕಳನ್ನು ಅಪಹರಿಸುತ್ತಾರೆ. ಹೀಗೆ ಕಾಣೆಯಾದ ನೂರಾರು ಮಕ್ಕಳನ್ನು ತಾಯಿಯ ಮಡಿಲಿಗೆ ಸೇರಿಸಿರುವ ಸಂಸ್ಥೆ ಇಂದೋರ್ ಮೂಲದ ನ್ಯಾಷನಲ್ ಸೆಂಟರ್ ಫಾರ್ ಮಿಸ್ಸಿಂಗ್ ಚಿಲ್ಡ್ರನ್ಸ್ (ಎನ್‌ಸಿಎಂಸಿ) . ಈ ಸಂಸ್ಥೆ http://www.missingindianchildren.com/ ಎಂಬ ವೆಬ್‌ಸೈಟನ್ನೂ ಹೊಂದಿದೆ.
ಕಾಣೆಯಾದ ಮಕ್ಕಳ ಭಾವಚಿತ್ರ, ಚಹರೆ, ವಿವರಗಳು ಈ ಸೈಟಿನಲ್ಲಿರುತ್ತದೆ. ಮಗು ಕಾಣೆಯಾದಾಗ ಪಾಲಕರು ಮಗುವಿನ ಭಾವಚಿತ್ರ ಹಾಗೂ ವಿವರಗಳನ್ನು ಈ ಸೈಟ್‌ನಲ್ಲಿ ಉಚಿತವಾಗಿ ನೋಂದಾಯಿಸಬಹುದಾಗಿದೆ. ಸೈಟಿಗೆ ಭೇಟಿ ನೀಡುವ ಸ್ವಯಂಸೇವಕರು ಹಾಗೂ ಸಾರ್ವಜನಿಕರು ಮಕ್ಕಳ ಪತ್ತೆಗೆ ನೆರವಾಗುತ್ತಾರೆ. ಇತ್ತೀಚೆಗೆ ಭಾರಿ ಸುದ್ದಿ ಮಾಡಿದ ಮಕ್ಕಳ ಮಾರಾಟ ಜಾಲದ ಪ್ರಸಂಗದಲ್ಲೂ ಈ ಸಂಸ್ಥೆ ನೆರವಿಗೆ ಬಂದಿತ್ತು.
ಈಗ ಬೆಂಗಳೂರು ರೋಟರಿ ಸಂಸ್ಥೆ ಕೂಡ ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿ ಮತ್ತು ಮಕ್ಕಳ ಸಹಾಯವಾಣಿಯ ನೆರವು ಪಡೆದು ಇಂತಹದೇ ಒಂದು ವೆಬ್‌ಸೈಟನ್ನು ಆರಂಭಿಸಿದೆ. http://www.missingkidsindia.org/ ಮೇ 7ರಂದು ಈ ವೆಬ್‌ಸೈಟನ್ನು ಉದ್ಘಾಟಿಸಲಾಯಿತು. ಮಕ್ಕಳ ಮನೆ ಬಿಟ್ಟು ಹೋಗಲು ಕಾರಣಗಳೇನು? ಎಂಬ ಬಗ್ಗೆ ಲೇಖನಗಳೂ ಈ ವೆಬ್‌ಸೈಟ್‌ನಲ್ಲಿದೆ. ತಪ್ಪಿಸಿಕೊಂಡಿರುವ ಮಕ್ಕಳು ಅಕಸ್ಮಾತ್ ನಿಮಗೆ ಸಿಕ್ಕರೆ, ಆ ಮಕ್ಕಳ ವಿವರಗಳನ್ನು ಈ ಸೈಟ್‌ನಲ್ಲಿ ದಾಖಲಿಸಿ, ಮಗುವಿನ ಪಾಲಕರ ಪತ್ತೆಗೂ ನೆರವು ಪಡೆಯಬಹುದಾಗಿದೆ. ತಪ್ಪಿಸಿಕೊಂಡ ಹತ್ತಾರು ಮಕ್ಕಳ ವಿವರ ಈ ಹೊತ್ತು ಈ ವೆಬ್‌ಸೈಟಲ್ಲಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications