ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲ್ಚೆಂಡಿನಾಟದ ಅಭಿಮಾನ ಹಾಗೂ ನೂರಾ ಇಪ್ಪತ್ನಾಲ್ಕು ಸಾವು

By Staff
|
Google Oneindia Kannada News

ಅಕ್ರ : ಇನ್ನೂ ತಿಂಗಳೂ ಕಳೆದಿಲ್ಲ, ದಕ್ಷಿಣ ಆಫ್ರಿಕದ ಡರ್ಬಾನ್‌ನ ಫುಟ್‌ಬಾಲ್‌ ಪಂದ್ಯವೊಂದರ ನೂಕುನುಗ್ಗಲಲ್ಲಿ 43 ಮಂದಿ ಮೃತಪಟ್ಟು ; ಬುಧವಾರ (ಮೇ.9) ಇದೇ ಕಾಲ್ಚೆಂಡಿನಾಟ ಘಾನಾದ 100ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ತಪ್ಪು ಆಟದ್ದಲ್ಲ ; ಆಟದ ಅಭಿಮಾನದ ಪರಮಾವಧಿಯದ್ದು.

ಹಾರ್ಟ್ಸ್‌ ಆಫ್‌ ಓಕ್‌ ವರ್ಸಸ್‌ ಅಸಾಂಟೆ ಕೊಟೋಕೋ ಪಂದ್ಯ. ಇವೆರಡೂ ಸ್ಥಳೀಯ ಕ್ಲಬ್‌ಗಳು. ಪಂದ್ಯ ಪೂರೈಸಲು ಇನ್ನು 5 ನಿಮಿಷಗಳಿದೆ ಎನ್ನುವಾಗ ಕೊಟೋಕೋ ಕ್ಲಬ್‌ ಅಭಿಮಾನ ಹುಚ್ಚು ಹೊಳೆಯಾಯಿತು. ಹಾರ್ಟ್ಸ್‌ 2-1 ಗೋಲುಗಳಿಂದ ಮುಂದಿದ್ದುದೇ ಇದಕ್ಕೆ ಕಾರಣ. ಒಂದು ಸ್ಟ್ಯಾಂಡಿನಲ್ಲಿ , ಕುಳಿತ ಚೇರುಗಳ ಸೀಟನ್ನು ಹರಿದು ಅಭಿಮಾನಿಗಳು ಕಣದತ್ತ ಎಸೆಯಲಾರಂಭಿಸಿದರು.

ಪೊಲೀಸರು ಅಭಿಮಾನಿಗಳ ಅತಿರೇಕ ನಿಯಂತ್ರಿಸಲು ಅಶ್ರು ವಾಯು ಸಿಡಿಸಿದರು. ಪರಿಸ್ಥಿತಿ ತಹಬಂದಿಗೆ ಬರುವ ಬದಲು ಇನ್ನಷ್ಟು ಪ್ರಕೋಪಕ್ಕೆ ತಿರುಗಿತು. ಅಭಿಮಾನ ಗಲಭೆ- ದಾಂಧಲೆಯಾಯಿತು. ಘಾನಾದ ಕ್ರೀಡಾ ಖಾತೆಯ ಉಪ ಮಂತ್ರಿ ಜೋ ಆ್ಯಗ್ರಿ, ಬಿಬಿಸಿಗೆ ತಿಳಿಸಿರುವಂತೆ 124 ಫುಟ್‌ಬಾಲ್‌ ಪ್ರೇಮಿಗಳು ಗಲಭೆಯಲ್ಲಿ ಸತ್ತಿದ್ದಾರೆ.

ಈಗ ಈ ವಿಷಯ ಚರ್ಚಿಸಲು ಘಾನಾ ಅಧ್ಯಕ್ಷ ಜಾನ್‌ ಕ್ಯುಪ್ಯುರ್‌ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಆ್ಯಗ್ರಿ ಕಣ್ಣಲ್ಲಿ ನೀರು ಬರುವುದೊಂದು ಬಾಕಿ, ಅವರು ಅಷ್ಟು ನೊಂದಿದ್ದಾರೆ. ಬದುಕಿ ಬಾಳಬೇಕಾದ ಯುವಕ- ಯುವತಿಯರು ಅನಾಥ ಶವಗಳಾಗಿ ಕಾಲಿಗೆ ಎಡರು ಬಿದ್ದಿರುವುದು ಜೀರ್ಣವಾಗಲೇ ಇಲ್ಲ. ಕೆಲವರು ಉಸಿರುಗಟ್ಟಿ ಸತ್ತಿದ್ದರೆ, ಇನ್ನು ಕೆಲವರನ್ನು ಕೊಲೆ ಮಾಡಲಾಗಿದೆ. ಯೂರೋಪ್‌ನ ಇತಿಹಾಸದಲ್ಲೇ ಯಾವುದೇ ರಾಷ್ಟ್ರ ಇಂಥಾ ಕ್ರೀಡಾಭಿಮಾನ ಸಾವಾದ ಘಟನೆ ಕಂಡಿರಲಿಲ್ಲ ಎಂದು ಅವರು ಹೇಳುವಾಗ ಗದ್ಗದಿತರಾಗುತ್ತಾರೆ.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X