ಎಸ್ಸೆಸ್ಸೆಲ್ಸಿ ಫಲಿತಾಂಶಾಕಾಂಕ್ಷಿಗಳ ನಿದ್ದೆಗೆಡಿಸಿದ ಒಂದು ರಾತ್ರಿ
ಬೆಂಗಳೂರು : ಮಂತ್ರಿಗಳು ನೀಡುವ ಹೇಳಿಕೆಗೂ ವಾಸ್ತವಕ್ಕೂ ಅಜಗಜಾಂತರ. ಮೇ 9ರಂದು ಇದು ಸಾಬೀತು ಆಯಿತು. ಲಕ್ಷಾಂತರ ಮಂದಿ ಆತಂಕದಲ್ಲಿ ಮುಳುಗುವಂತಾಯ್ತು. ರಾಜ್ಯದಲ್ಲಿ 7 ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಆ ವಿದ್ಯಾರ್ಥಿಗಳ ಪಾಲಕರೂ ಫುಲ್ ಟೆನ್‌ಷನ್‌ನಲ್ಲಿದ್ದರು.
ಮೊನ್ನೆ ನಮ್ಮ ಎಜುಕೇಷನ್ ಮಿನಿಷ್ಟ್ರು ಸುಮ್ಮನಿರಲಾರದೆ, 10ನೇ ತಾರೀಖು ಫಲಿತಾಂಶ. ಆದ್ರೂ 9 ನೇ ತಾರೀಖು ಸಂಜೆ 4 ಗಂಟೆಗೆ, ಶಾಲೆಗಳಲ್ಲಿ , ಏರ್ ಟೆಲ್ ಮೊಬೈಲ್ ಫೋನ್‌ನಲ್ಲಿ ಹಾಗೂ ಸರಕಾರಿ ವೆಬ್‌ಸೈಟ್‌ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗತ್ತೆ ಅಂದ್ರು. ಆಗಲಿಂದಲೇ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಟೆನ್‌ಷನ್ ಶುರು ಆಯ್ತು.
ಏರ್‌ಟೆಲ್ ಮೊಬೈಲ್ ಫೋನ್ ಹೊಂದಿರುವ ತಮ್ಮ ಬಂಧು - ಮಿತ್ರರ ಹಿಂದೆ ವಿದ್ಯಾರ್ಥಿಗಳು ಹಾಗೂ ಪಾಲಕರು ದುಂಬಾಲು ಬಿದ್ದರು. ಸೈಬರ್ ಕೆಫೆಗಳ ಮಂದೆ ಸಾಲುಗಟ್ಟಿ ನಿಂತರು. ವಾರ್ತಾ ಇಲಾಖೆಯ ವೆಬ್ ಸೈಟ್‌ನಲ್ಲಿ ಫಲಿತಾಂಶ ತಿಳಿಯಲು ಬುಧವಾರ ಬೆಳಗ್ಗಿನಿಂದಲೇ ಇಂಟರ್‌ನೆಟ್ ಸೌಲಭ್ಯ ಇರುವ ಕಂಪ್ಯೂಟರ್‌ಗೆ ಅಂಟಿಕೊಂಡವರ ಸಂಖ್ಯೆ ಲಕ್ಷಾಂತರ. ಎಲ್ಲರಿಗೂ ನಿರಾಶೆ ಕಾದಿತ್ತು. ಆ ವೆಬ್ ಸೈಟ್‌ನಲ್ಲಿ ಫಲಿತಾಂಶದ ಬಗ್ಗೆ ಯಾವುದೇ ಸೂಚನೆ ಇರಲಿಲ್ಲ.
ಸಂಜೆ 4.30ರ ಹೊತ್ತಿಗೆ ವೆಬ್ ಸೈಟ್‌ನಲ್ಲೊಂದು ಪ್ರಕಟಣೆ ಹೊರಬಿತ್ತು. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇನ್ನೂ ಫಲಿತಾಂಶ ನೀಡದಿರುವ ಕಾರಣ 9ರ ಮಧ್ಯರಾತ್ರಿ ಫಲಿತಾಂಶ ಪ್ರಕಟಿಸಲಾಗುವುದು ಎಂಬ ಅನೌನ್ಸ್‌ಮೆಂಟ್. ಸ್ವಲ್ಪ ಹೊತ್ತಿಗೆ ವಾರ್ತಾ ಇಲಾಖೆಯ ಉನ್ನತಾಧಿಕಾರಿಗಳ ಹೇಳಿಕೆ ರಾತ್ರಿ 11 ಗಂಟೆ ನಂತರ ಫಲಿತಾಂಶ ಪ್ರಕಟಿಸುತ್ತೇವೆ ಎಂದು ತಿಳಿಸಿತು.
ಗೊಂದಲ: ಇಂಗ್ಲಿಷ್ ದೈನಿಕವೊಂದರಲ್ಲಿ ರಾತ್ರಿ 9.30ಕ್ಕೆ ಫಲಿತಾಂಶ ಎಂದು ಬಂದಿದ್ದೂ ಗೊಂದಲಕ್ಕೆ ಕಾರಣವಾಯಿತು. ಪರೀಕ್ಷೆ ಫಲಿತಾಂಶ ತಿಳಿಯುವ ತವಕ, ಎಎಂ., ಪಿ.ಎಂ ನಡುವಿನ ವ್ಯತ್ಯಾಸವನ್ನೂ ಮರೆ ಮಾಚಿಸಿತ್ತು. ರಾತ್ರಿ 9ರ ನಂತರವಂತೂ ಮೊಬೈಲ್ ಫೋನ್‌ನಲ್ಲಿ ಹಾಗೂ ಸರಕಾರಿ ವೆಬ್‌ಸೈಟ್‌ನಲ್ಲಿ ಫಲಿತಾಂಶ ತಿಳಿಯಲು ಪಾಲಕರು ಪಟ್ಟ ಪಾಡು ಅಷ್ಟಿಷ್ಟಲ್ಲ.
ಮೊಬೈಲ್‌ಗೆ ಫೋನ್ ಮಾಡಿದವರು, ಗಂಟೆ ಗಟ್ಟಲೆ ಕಾದರೆ, ಇಂಟರ್‌ನೆಟ್‌ನಲ್ಲಿ ಫಲಿತಾಂಶ ಹೊರಬಂದಿದ್ದು ರಾತ್ರಿ 1 ಗಂಟೆ ಸುಮಾರಿಗೆ. ಸ್ಪಲ್ಪ ಹೊತ್ತಿಗೇ ಆ ಫಲಿತಾಂಶವೂ ದೊರಕದ ಸ್ಥಿತಿ. ಎಚ್‌ಟಿಟಿಪಿ 500 ಇಂಟರ್‌ನಲ್ ಸರ್ವರ್ ಎರರ್, 403 ಎರರ್ ಎಂಬ ಶೀರ್ಷಿಕೆಗಳ ಜೊತೆಗೆ, The page cannot be displayed ಎಂಬ ಸೂಚನೆ.
ಫಲಿತಾಂಶ ಬಂದಿದ್ದು 10ರಂದೇ : ಸಚಿವ ವಿಶ್ವನಾಥ್ ಅವರ ಹೇಳಿಕೆಯ ಪ್ರಕಾರ ಆಯಾ ಶಾಲೆಗಳಿಗೆ ಮುಂಚಿತವಾಗಿಯೇ ಫಲಿತಾಂಶ ದೊರೆತಿರುವ ಕಾರಣ 9ರ ಸಂಜೆ 4 ಗಂಟೆಗೇ ಫಲಿತಾಂಶ ಸೂಚನಾ ಫಲಕದಲ್ಲಿ ಪ್ರದರ್ಶಿತವಾಗಬೇಕಿತ್ತು. ಆದರೆ, ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಿದ್ದು, 10ನೇ ತಾರೀಖು ಬೆಳಗ್ಗೆ 9 ಗಂಟೆ ನಂತರವೇ.
ಈ ಮಧ್ಯೆ ಬುಧವಾರ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎದುರು ಫಲಿತಾಂಶಕ್ಕಾಗಿ ಗಂಟೆ ಗಟ್ಟೆಲೆ ಕಾದು, ಬಿಸಿಲಿನಲ್ಲಿ ಒಣಗಿ, ಕಾವಲುಗಾರರ ಹಾಗೂ ಪೊಲೀಸರ ಬೈಗುಳ ತಿಂದು, ಬಂದ ದಾರಿಗೆ ಸುಂಕ ಇಲ್ಲ ಎಂದು ಮನೆಗೆ ನಡೆದರು. ಮತ್ತೂ ಕೆಲವು ಹುಡುಗರು ಶಿಕ್ಷಣ ಮಂಡಳಿ ಬಳಿಯ ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಕಾರ್ಬನ್ ಶೀಟ್‌ನಲ್ಲಿ ತಮ್ಮ ಫಲಿತಾಂಶ ಹುಡುಕುವ ಸಾಹಸವನ್ನೂ ಮಾಡಿದರು. ಸಚಿವರು ಸುಮ್ಮನಿದ್ದಿದ್ದರೆ, ಫಲಿತಾಂಶಾಕಾಂಕ್ಷಿಗಳು ಮೇ 10ರಂದು ಶಾಲೆಗಳಲ್ಲಿ ನೆಮ್ಮದಿಯಿಂದ ಫಲಿತಾಂಶ ನೋಡುತ್ತಿದ್ದರು.
ಸಚಿವರ ಹೇಳಿಕೆ ಸೃಷ್ಟಿಸಿದ ಗೊಂದಲದಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ಒಂದು ದಿನ ಪೂರ್ತಿ ನಿದ್ದೆಗೆಟ್ಟಿದ್ದಂತೂ ಸತ್ಯ.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications