ಆ ಹುಡುಗನ ಆತ್ಮಹತ್ಯೆಗೆ ಪರಿಸರ ಮಾಲಿನ್ಯ ಕಾರಣವೇ ?
ಬೆಂಗಳೂರು : ದಿನೇದಿನೇ ನಗರದಲ್ಲಿ ಹೆಚ್ಚಾಗುತ್ತಿರುವ ಹದಿ ಹರೆಯದವರ ಆತ್ಮಹತ್ಯೆ ಪ್ರಕರಣಗಳಿಗೂ ಪರಿಸರ ಮಾಲಿನ್ಯಕ್ಕೂ ಕಾರಣವಿದೆಯೇ ? ಹೌದೆನ್ನುತ್ತಾರೆ ಜನಪ್ರಿಯ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ .
ವಾಯು ಮಾಲಿನ್ಯದಿಂದಾಗಿ ಅಸಾಧ್ಯ ಮಾನಸಿಕ ಒತ್ತಡ ಉಂಟಾಗುತ್ತದೆ. ಇದರಿಂದಾಗಿ ಯುವಕ- ಯುವತಿಯರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಅನ್ನುವುದು ಯಲ್ಲಪ್ಪ ರೆಡ್ಡಿಯವರ ವಾದ. ವಾಹನಗಳಿಗೆ ಬಳಸುವ ಪೆಟ್ರೋಲ್ ವಾಯುಮಂಡಲಕ್ಕೆ ಸೇರಿಸುವ ರಾಸಾಯನಿಕಗಳು ನಿಶ್ಯಕ್ತಿ , ನರ ದೌರ್ಬಲ್ಯ ಹಾಗೂ ಜ್ಞಾಪಕ ಶಕ್ತಿಯನ್ನು ಕುಂದಿಸುವುದು ಮಾತ್ರವಲ್ಲದೇ ಮಾನಸಿಕ ಉದ್ವಿಗ್ನತೆಗೂ ಕಾರಣವಾಗುತ್ತವೆ ಅನ್ನುತ್ತಾರೆ. ಅಖಿಲ ಭಾರತ ಸರ್ವಧರ್ಮಗಳ ಜೀವನ್ಮುಕ್ತಿ ಧಾಮ ಟ್ರಸ್ಟ್ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ತಮ್ಮೀ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಯಲ್ಲಪ್ಪ ರೆಡ್ಡಿಯವರ ಪ್ರಕಾರ, ಸಾವಿರಾರು ರುಪಾಯಿ ಖರ್ಚು ಮಾಡಿ ಸತ್ತವರಿಗೆ ಗೋರಿ ನಿರ್ಮಿಸುವ ಬದಲು ಒಂದು ಅಶ್ವತ್ಥ ಅಥವಾ ಅರಳಿ ಮರವನ್ನು ನೆಡುವುದು ಒಳ್ಳೆಯ ಕಾರ್ಯ. ಇದರಿಂದಾಗಿ ಹಣದ ಸದುಪಯೋಗವಾಗಿ ಒಂದಷ್ಟು ಜೀವಗಳಿಗೆ ತಂಪಾದರೂ ಸಿಕ್ಕೀತು. ಒಂದು ಅಶ್ವತ್ಥ ವೃಕ್ಷ ಇನ್ನೂರು ಜನರಿಗೆ ಸಾಕಾಗುವಷ್ಟು ಜೀವವಾಯು ನೀಡಬಲ್ಲುದು ಹಾಗೂ ನೂರಾರು ವರ್ಷ ಬಾಳಬಲ್ಲ ಸಾಮರ್ಥ್ಯವೂ ಅದಕ್ಕಿದೆ ಎಂದು ಅವರು ಹೇಳಿದರು.
ಲೈಂಗಿಕ ಪ್ರಚೋದನೆಗೆ ಕಾರಣವಾಗುವ ಜಾಹೀರಾತುಗಳು
ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಜಾಹೀರಾತುಗಳು ಯುವ ಜನತೆಗೆ ಲೈಂಗಿಕ ಪ್ರಚೋದನೆ ಮಾಡುತ್ತಿವೆ ಎನ್ನುವುದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೈಂಗಿಕ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಅವರ ಆತಂಕ. ಯುವ ಜನತೆಗೆ ಸರಿಯಾದ ಲೈಂಗಿಕ ಮಾರ್ಗದರ್ಶನವಿಲ್ಲ . ಆ ಕಾರಣದಿಂದಲೇ ಅತ್ಯಾಚಾರ, ಏಡ್ಸ್, ಎಳೆಯ ವಯಸ್ಸಿನಲ್ಲಿ ಗರ್ಭಧಾರಣೆ ಮುಂತಾದ ಸಮಸ್ಯೆಗಳು ಉಂಟಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮೌಲ್ಯಾಧಾರಿತ ಲೈಂಗಿಕ ಶಿಕ್ಷಣ ಈ ಹೊತ್ತಿನ ಜರೂರು ಅವಶ್ಯಕತೆಯಾಗಿದೆ ಎಂದು ಪದ್ಮಿನಿ ಪ್ರಸಾದ್ ಅಭಿಪ್ರಾಯಪಟ್ಟರು.
ಪ್ರಸಿದ್ಧ ಮನೋ ವಿಜ್ಞಾನಿ ಡಾ. ಸಿ.ಆರ್. ಚಂದ್ರಶೇಖರ್, ಪ್ರಕಾಶ್ ಗುರೂಜಿ ಹಾಗೂ ಉಪ ಮೇಯರ್ ಪುಟ್ಟರಾಜು ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications