ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SSLC RESULT

By Staff
|
Google Oneindia Kannada News

ಜನ ಸಾಮಾನ್ಯರನ್ನು ಗೊಂದಲಕ್ಕೆ ಸಿಲುಕಿಸುವುದರಲ್ಲಿ ನಮ್ಮ ಮಾಧ್ಯಮಗಳು ಯಾವತ್ತೂ ಎತ್ತಿದ ಕೈ. ಅದೂ ದೈನಂದಿನ ಬದುಕನ್ನು ಸರಳಗೊಳಿಸುವ ಮಾತು ಬಂತೆಂದರೆ ನಮ್ಮ ಸರಕಾರ ಮತ್ತು ಅದನ್ನು ಮೀರಿಸುವಂತೆ ಕೆಲಸ ಮಾಡುವ ಮಾಧ್ಯಮಗಳು ಜನಕ್ಕೆ ಎಷ್ಟು ತೊಂದರೆ ಕೊಡುತ್ತಾರೆ ಎಂದರೆ, ಅನುಭವಿಸಿದವರಿಗೆ ಗೊತ್ತು.

ಈ ಹೊತ್ತು ಕರ್ನಾಟಕದಲ್ಲಿ ಮನೆ ಮಾತಾಗಿರುವ ವಿಷಯವೆಂದರೆ ಎಸ್‌ಎಸ್‌ಎಲ್‌ಸಿ ಫಲಿತಾಂಶ. ಹ್ತತಿರ ಹತ್ತಿರ 6 ಲಕ್ಷ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ನಿರಂತರ ಆತಂಕ, ಕುತೂಹಲ ಕೊನೆಗೆ ನಿರಾಸೆಗೊಳಿಸುವ ಉದ್ದಿಶ್ಯ ರಹಿತ ಅವಿವೇಕತನ ಈಗ ಮುಂದುವರೆದಿದೆ. ಮಂತ್ರಿಗಳು ಹೇಳಿದ್ದನ್ನು ಭಟ್ಟಿ ಇಳಿಸುವ ಕುಲಕರ್ಣಿ ಸೇವೆ ಬಿಟ್ಟರೆ , ಹಳ್ಳಿ ವಿದ್ಯಾರ್ಥಿಗಳು ಇವತ್ತೂ ನಂಬಿಕೊಂಡಿರುವ ದಿನಪತ್ರಿಕೆಗಳಲ್ಲಿ ಕರಾರುವಾಕ್ಕಾದ ಮಾಹಿತಿ ಸಿಗುವುದಿಲ್ಲ.

ಇದೆಲ್ಲ ಶುರುವಾಗಿದ್ದು ಕಳೆದ ವರ್ಷ. ಆರಾಮಾಗಿ ವಿದ್ಯಾರ್ಥಿಗಳು ಶಾಲೆಗಳಲ್ಲಿ ಫಲಿತಾಂಶ ನೋಡಿಕೊಂಡು , ಪಾಸೋ ಫೇಲೋ ಮನೆಗೆ ಹೋಗುತ್ತಿದ್ದರು. ಆದರೆ, ಇಂಟರ್‌ನೆಟ್‌ನಲ್ಲಿ ಫಲಿತಾಂಶ ಪ್ರಕಟಿಸುವ ವೇಗ ಆರಂಭವಾಯಿತು. ಅನೇಕ ವೆಬ್‌ಸೈಟುಗಳು ರಿಸಲ್ಟ್‌ ಪಬ್ಲಿಷ್‌ ಮಾಡಲು ನಾಮುಂದು ತಾ ಮುಂದು ಎನ್ನುವಂತೆ ಹುರುಪು ತೋರಿಸಿದವು. ಸಾಕಷ್ಟು ಬ್ಯಾಂಡ್‌ವಿಡ್ತ್‌ , ಸರ್ವರ್‌ ಕೆಪ್ಯಾಸಿಟಿ ಇಲ್ಲದೆ ಡುಂಕಿ ಹೊಡೆದವು.

ಈ ವರ್ಷ ? ಫಲಿತಾಂಶಗಳನ್ನು ಇಂಟರ್‌ನೆಟ್‌ ಮೂಲಕ ಡಂಗುರ ಮಾಡುವ ಹೊಣೆಯನ್ನು ರಾಜ್ಯ ಸರಕಾರವೇ ಹೊತ್ತು ಕೊಂಡಿದೆ...ಅದರ ಬಗ್ಗೆ ಬೇಕಾದಷ್ಟು ಗೊಂದಲಗಳಿವೆ....

ಶಾಲೆಗಳಿಗಿಂತ ವೆಬ್‌ಸೈಟ್‌ನಲ್ಲಿ ರಿಸಲ್ಟ್‌ ಬೇಗ ಬರತ್ತೆ ಅಂತ ನಂಬಿರುವ ವಿದ್ಯಾರ್ಥಿ ಸಮುದಾಯ ಕಂಡಕಂಡ ವೆಬ್‌ಸೈಟ್‌ಗಳಿಗೆ ಕೈಮುಗಿಯುತ್ತಿದ್ದಾರೆ . ಆದರೆ ವೆಬ್‌ಸೈಟ್‌ ಹೆಸರೇನು ? ಎಷ್ಟು ಗಂಟೆಗೆ ಫಲಿತಾಂಶ ಹೊರಬೀಳತ್ತೆ ಎಂಬ ಬಗ್ಗೆ ಖಚಿತವಾದ ಮಾಹಿತಿಯನ್ನು ಸರಕಾರದವರು ಕೊಟ್ಟಿಲ್ಲ. ಶಿಕ್ಷಣ ಸಚಿವ ವಿಶ್ವನಾಥ್‌ ಪ್ರಕಾರ :

  • 10 ನೇ ತಾರೀಖು ಗುರುವಾರ ಫಲಿತಾಂಶ ಹೊರಬೀಳತ್ತೆ
  • ಆದರೆ ಶಾಲಾ ಆಡಳಿತ ವರ್ಗಕ್ಕೆ ಬುಧವಾರ ಮಧ್ಯಾನ್ಹವೇ ಫಲಿತಾಂಶ ಪಟ್ಟಿ ಸಿಗತ್ತೆ (ಹಳ್ಳಿಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳಿಗೆ ಯಾವತ್ತು ಸಿಗತ್ತೆ ?)
  • www.karnatakainformation.org ವಾರ್ತಾ ಇಲಾಖೆ ವೆಬ್‌ಸೈಟ್‌ನಲ್ಲಿ ಬುಧವಾರ ಮಧ್ಯಾನ್ಹ 4 ಗಂಟೆಗೆ ಸಿಗತ್ತೆ.
ಈ ಮಧ್ಯೆ ಎಸ್‌ಎಸ್‌ಎಲ್‌ಸಿ ಬೋರ್ಡಿನ ನಿರ್ದೇಶಕರು ಇಂಗ್ಲೀಷ್‌ ಪೇಪರ್‌ಗೆ ಹೇಳಿಕೆ ಕೊಟ್ಟರು :

  • ಫಲಿತಾಂಶ ವಾರ್ತಾ ಇಲಾಖೆ ಸೈಟ್‌ನಲ್ಲಿ ರಾತ್ರಿ 9.30ಗೆ ಬರತ್ತೆ. ಆದರೆ, ಶಾಲೆಗಳಿಗೆ ಮಧ್ಯಾನ್ಹ 4 ಗಂಟೆಗೆಲ್ಲ ರಿಸಲ್ಟ್‌ ಸಿಕ್ಕಿರತ್ತೆ !
ಒಬ್ಬ ವಿದ್ಯಾರ್ಥಿ ಬೇಸಿಗೆ ರಜಾ ಮಜಾ ಮಾಡಲು ಮೇಲುಕೋಟೆ ಇಂದ ಕೆಳಗೋಟೆಗೆ ಹೋಗಿರುತ್ತಾನೆ. ಅವ ಫಲಿತಾಂಶ ತಿಳಿಯಬೇಕಾದರೆ ಅವನ ಊರಿಗೆ ಮತ್ತೆ ಬೆಟ್ಟ ಹತ್ತಿ ಹೋಗಬೇಕು. ಅದರ ಬದಲು , ಇವತ್ತಿ ನ ಕೈಗೆಟಕುತ್ತಿರುವ ತಂತ್ರಜ್ಞಾನದ ಲಾಭ ಅವನಿಗೆ ಸಿಗಬೇಕು, ಇಂಟರ್‌ನೆಟ್‌ ಮೂಲಕ....

ಬೆಲ್ಲದ ಬಣ್ಣದಲ್ಲಿರುವ ಮಂಡ್ಯ ಪೇಪರ್‌ನಲ್ಲಿ ರಾಜ್ಯಭಾರ ನಡೆಸುವ ಕೃಷ್ಣ ಅವರ ಸರಕಾರಕ್ಕೆ ಇವೆಲ್ಲ ಅರ್ಥವಾಗುವುದಿಲ್ಲ.

ಶಾಲೆಗಳಲ್ಲಿ ಫಲಿತಾಂಶ ಕಾಣದವರು, ಮರಳಿ ಊರಿಗೆ ಹೋಗಲಾರದವರು, ಎಲ್ಲೋ ಕುಳಿತು ಫಲಿತಾಂಶಕ್ಕಾಗಿ ಪರಿತಪಿಸುವವರಿಗೆ ಇಲ್ಲೊಂದು ಆಶಾಕಿರಣ ಇದೆ. ಇಂದು (ಬುಧವಾರ )ರಾತ್ರಿ 11. 00 ಗಂಟೆಗೆ ನಮ್ಮ ವೆಬ್‌ ಸೈಟಿಗೆ ಬನ್ನಿ. SSLC RESULTS CLICK ಮಾಡಿ. ನಿಮ್ಮನ್ನು ಸರಕಾರದ ವೆಬ್‌ಸೈಟಿಗೆ ಕರೆದೊಯ್ಯುತ್ತೇವೆ. ಆಲ್‌ ದಿ ಬೆಸ್ಟ್‌ .

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X