Get Updates
Get notified of breaking news, exclusive insights, and must-see stories!

‘ರಾಜ್ಯದ ಹಿತವ ಸಾಯಿಬಾಬಾಗೊಪ್ಪಿಸಿದ ನಾಮಕಾವಸ್ಥೆ ಮುಖ್ಯಮಂತ್ರಿ’

ಮಡಿಕೇರಿ : ಸಚಿವೆಯಾಬ್ಬರ ಸಮ್ಮುಖದಲ್ಲೇ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಸಾಯಿಬಾಬಾ ಭಕ್ತಿಯನ್ನು ತೀವ್ರವಾಗಿ ಖಂಡಿಸಿದ ಮೈಸೂರಿನ ಜನಪ್ರಿಯ ವಿಚಾರವಾದಿ ಪ್ರೊ. ಕೆ . ರಾಮದಾಸ್‌, ಜನ ಪ್ರತಿನಿಧಿಗಳ ಮೂಡ ನಂಬಿಕೆಗಳನ್ನು ಪ್ರಶ್ನಿಸುವ ತಮ್ಮ ವೈಚಾರಿಕ ಸಮರವನ್ನು ಮುಂದುವರಿಸಿದ್ದಾರೆ.

ಮಡಿಕೇರಿಯ ಶನಿವಾರ ಸಂತೆಯಲ್ಲಿ ನಡೆದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಮುಖ್ಯಮಂತ್ರಿಯವರ ಬೇಜವಾಬ್ದಾರಿ ನಡವಳಿಕೆಯನ್ನು ಖಂಡಿಸಿದರು. ಮುಖ್ಯಮಂತ್ರಿ ಸ್ಥಾನ ಸಿಕ್ಕ ಕೂಡಲೇ, ಕೃಷ್ಣ ಸಾಯಿಬಾಬಾ ಕಾಲು ಹಿಡಿದರು. ಈ ಮೂಲಕ ನಾನು ನಾಮಕಾವಸ್ಥೆ ಮುಖ್ಯಮಂತ್ರಿ ಎಂದು ಸೂಚಿಸಿದ ಮುಖ್ಯಮಂತ್ರಿಗಳು ಕರ್ನಾಟಕವನ್ನು ನೀನೇ ಕಾಪಾಡಬೇಕೆಂದು ರಾಜ್ಯ ಹಾಗೂ ಕನ್ನಡಿಗರನ್ನು ಸಾಯಿಬಾಬಾ ಪಾದಕ್ಕೊಪ್ಪಿಸಿದರು ಎಂದು ರಾಮದಾಸ್‌ ವ್ಯಂಗ್ಯವಾಡಿದರು.

ರಾಮದಾಸ್‌ ಅವರು ಮುಖ್ಯಮಂತ್ರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ ಮೌನ ಪ್ರೇಕ್ಷಕರಾಗಿದ್ದರು. ಈ ಮುನ್ನ ರಾಮದಾಸ್‌ ಅವರು ಶಿಕ್ಷಣ ಸಚಿವ ವಿಶ್ವನಾಥ್‌ ವಿರುದ್ಧ (ಪ್ರಾಣಿಬಲಿಗೆ ಪ್ರೋತ್ಸಾಹ ನೀಡಿದರೆಂದು) ಮೈಸೂರಿನ ಸಾರ್ವಜನಿಕ ಸಭೆಯಾಂದರಲ್ಲಿ ವಾಗ್ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಮದಾಸ್‌ ವಿರುದ್ಧ ಟೀಕೆ : ಮುಖ್ಯಮಂತ್ರಿಗಳ ವಿರುದ್ಧ ಪ್ರೊ. ರಾಮದಾಸ್‌ ನಡೆಸುತ್ತಿದ್ದ ವಾಗ್ದಾಳಿಯನ್ನು ಸಭೆ ಚಪ್ಪಾಳೆಯ ಮೂಲಕ ಸ್ವಾಗತಿಸಿದ ನಡುವೆಯೇ, ಕೊಡಗು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಚಂದ್ರಕಲಾ ಮುಖ್ಯಮಂತ್ರಿಗಳನ್ನು ಸಮರ್ಥಿಸಿಕೊಳ್ಳಲು ಮುಂದಾದರು. ಕೃಷ್ಣ ಅವರ ಸಾಧನೆಗಳನ್ನು ಪಟ್ಟಿ ಮಾಡಿದ ಅವರು, ಮುಖ್ಯಮಂತ್ರಿಗಳ ನಡವಳಿಕೆಯನ್ನು ಪ್ರಶ್ನಿಸಲು ಇದು ವೇದಿಕೆಯಲ್ಲ . ರಾಮದಾಸ್‌ ವೇದಿಕೆಯ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+