Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ವ್ಯಾಪಾರ- ವ್ಯವಹಾರಗಳಲ್ಲಿ ನಿಮಗಿವತ್ತು ಮುನ್ನಡೆ ಇದೆ. ಧನಲಾಭವನ್ನು ಅರಗಿಸಿಕೊಳ್ಳಲು ಪ್ಲಾನ್‌ ರೆಡಿ ಮಾಡಿಕೊಳ್ಳುತ್ತೀರಿ.

ವೃಷಭ : ಅಪರೂಪದ ಜನರ ಭೇಟಿ, ಅದರಲ್ಲಿಯೂ ಸಜ್ಜನರ ಭೇಟಿಯಿಂದ ಪುಳಕಿತಗೊಳ್ಳುತ್ತೀರಿ. ಹೊಸ ಕನಸುಗಳನ್ನು ಹೆಣೆಯಲು ಇದು ಸಕಾಲ, ಪ್ರೇರಣೆಯೂ ಸಿಗುತ್ತದೆ.

ಮಿಥುನ : ಅವಸರ, ಅಪಘಾತಗಳ ಬಗ್ಗೆ ಕಾಳಜಿಯಿರಲಿ. ಈಗಿರುವ ಅನಾಸಕ್ತಿಯನ್ನು ಹೋಗಲಾಡಿಸಲು ಮೌನದ ಹೊರತಾಗಿ ಬೇರೆ ದಾರಿ ಇಲ್ಲವೆನಿಸುತ್ತದೆ.

ಕಟಕ : ಅತಿಯಾದ ಆತ್ಮವಿಶಾವಸದಿಂದ ನೀವು ಕೆಲವೊಂದು ಸಾರಿ ಜಾರಿ ಬೀಳುವುದು ಉಂಟಲ್ವಾ ? ಆಗೆಲ್ಲಾ ನಿಮ್ಮ ಹತ್ತಿರದ ಸ್ನೇಹಿತರು ನಿಮ್ಮನ್ನು ಮೇಲೆತ್ತುತ್ತಾರೆ.

ಸಿಂಹ : ಇನ್ನೊಬ್ಬರಿಗೆ ಕೆಲಸ ಹಂಚುವುದೆಂದರೆ ನಿಮಗೆ ಖುಷಿ . ಆದರೆ ಎಲ್ಲ ಕ್ಷೇತ್ರಗಳಲ್ಲಿಯೂ ಹಾಗೆ ಆಗುವುದಿಲ್ಲವಲ್ಲಾ ! ಸೋ, ಆಲ್‌ ದ ಬೆಸ್ಟ್‌.

ಕನ್ಯಾ : ವೃತ್ತಿಜೀವನದಲ್ಲಿ ಮಹತ್ವದ ಬದಲಾವಣೆಗಳಾಗಬಹುದು. ಹೊಸ ವ್ಯಾಪಾರ ಆರಂಭಿಸುವುದಿದ್ದರೆ ಹಣದ ಚೀಲದ ಕೆಡೆಗೆ ಗಮನ ಇಡಬೇಕು.

ತುಲಾ : ಕೆಲಸ ಕಾರ್ಯಗಳಲ್ಲಿ ಅಂಥ ವೇಗವಿಲ್ಲದಿದ್ದರೂ ಆರ್ಥಿಕ ಹಾನಿ ಇರುವುದಿಲ್ಲ. ಆಷಾಡದ ಉದಾಸೀನದಿಂದ ಹೊರಬನ್ನಿ.

ವೃಶ್ಚಿಕ : ನಿಮ್ಮ ಸ್ನೇಹಿತರ ಆಪತ್ತು ವಿಪತ್ತುಗಳಿಗೆಲ್ಲಾ ತಲೆ ಕೆಡಿಕೊಂಡು ಕೆಲಸ ಹಾಳು ಮಾಡಿಕೊಳ್ಳದೇ ಇದ್ದರಾಯ್ತು. ಆಗ ಸ್ನೇಹಿತರಿಗೂ ತುಸು ಧೈರ್ಯ ತಂದುಕೊಟ್ಟ ಹಾಗಾಗುತ್ತದಲ್ಲವೇ ?

ಧನಸ್ಸು : ಅತಿ ಮುಖ್ಯ ನಿರ್ಧಾರವನ್ನು ತೆಗೆದುಕೊಳ್ಳಲು ನಿಧಾನಿಸುತ್ತಿದ್ದೀರಿ. ಆದರೆ ಮುಂದೆ ಸಾಗುವ ದಿಕ್ಕು ಉತ್ತಮವಾಗಿಯೇ ಇದೆ ಎನ್ನುವುದು ಹರ್ಷದ ಸಂಗತಿ.

ಮಕರ : ಯಾರದೋ ಚಾಲೆಂಜಿಗಾದರೂ ನೀವು ಓದು ಮುಗಿಸಬೇಕು. ಕೊನೇ ಪಕ್ಷ ಅದಕ್ಕಾಗಿ ಆರೋಗ್ಯವನ್ನಾದರೂ ಜೋಪಾನವಾಗಿಟ್ಟುಕೊಳ್ಳಬೇಕು.

ಕುಂಭ : ಅನ್‌ಯೂಶ್ಯುವಲ್‌ ಕಾರಣಗಳಿಗಾಗಿ ನಿಮ್ಮ ಹೆಸರು ಹತ್ತುಕಡೆ ಕೇಳಿಸುತ್ತಿದ್ದರೆ, ಅದೇನು ನೆಗೆಟಿವ್‌ ವಿಷಯ ಅಲ್ಲ. ಇವತ್ತು ಮನರಂಜನೆಯ ಮಜ.

ಮೀನ : ಮಾತುಕತೆಯನ್ನು ಅತ್ಯಂತ ಆಸ್ಥೆಯಿಂದ ನಿರ್ವಹಿಸುತ್ತೀರಿ. ಮೇಲಧಿಕಾರಿಗಳಿಂದ ಸಿಗುವ ಪ್ರಶಂಸೆಯ ಸುರಿಮಳೆ ನಿಮ್ಮನ್ನು ಖುಷಿಯಾಗಿರಿಸಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+