ಬೆಂಗಳೂರಿನಲ್ಲಿ ಅಗ್ಗದ ಬೆಲೆಗೆ ಬುಟ್ಟಿ ತುಂಬಾ ತಾಜಾ ಮಾವು..
ಬೆಂಗಳೂರು : ರುಚಿಕರವಾದ ಮಾವು ಮಾರುಕಟ್ಟೆಗೆ ಬಂದಿದೆ. ಸಮೃದ್ಧ ಬೆಳೆಯಿಂದ ಬೆಲೆಯೂ ಕೈಗೆಟುಕುವಂತಿದೆ. ಉತ್ತಮ - ತಾಜಾ ಮಾವಿನ ಹಣ್ಣು ತಿನ್ನುವ ಆಸೆಯೇ? ತಡವೇಕೆ ಹತ್ತಿರದ ಹಾಪ್ಕಾಮ್ಸ್ ಮಳಿಗೆಯತ್ತ ಹೊರಡಿ.
ಬೆಂಗಳೂರಿನ ಆಯ್ದ ಮಳಿಗೆಗಳಲ್ಲಿ ಹಾಪ್ಕಾಮ್ಸ್ ಬುಧವಾರದಿಂದ ತಾಜಾ ಮಾವಿನ ಹಣ್ಣಿನ ಮಹಾಮೇಳವನ್ನೇ ನಡೆಸುತ್ತಿದೆ.
ನೀವು ಬ್ಯಾಗ್ ತೆಗೆದುಕೊಂಡು ಹೋಗುವ ಅಗತ್ಯವೂ ಇಲ್ಲ. ಈ ಮೇಳದಲ್ಲಿ 5 ಕೆ.ಜಿ. ತಾಜಾ ಮಾವಿನ ಹಣ್ಣು ಬುಟ್ಟಿಯಲ್ಲಿ ಲಭ್ಯ. ಉತ್ತಮವಾದ ಬಾದಾಮಿ, ರಸಪುರಿ, ಮಲಗೋವಾ, ಬೈಗಾನ್ಪಲ್ಲಿ, ಸಿಂಧೂರ, ಮಲ್ಲಿಕಾ ಮೊದಲಾದ ತಳಿಗಳ ಹಣ್ಣುಗಳ 5 ಕೆ.ಜಿ. ಬುಟ್ಟಿ ಮಾವಿನ ಮಹಾ ಮೇಳದ ಪ್ರಮುಖ ಆಕರ್ಷಣೆ.
ಮಾವಿನ ಮಹಾ ಮೇಳ ಬೆಂಗಳೂರಿನ ಈ ಕೆಳಕಂಡ ಆಯ್ದ ಹಾಪ್ಕಾಮ್ಸ್ ಮಳಿಗೆಗಳಲ್ಲಿ ನಡೆಯಲಿದೆ.
ಹಾಪ್ಕಾಮ್ಸ್ ಮುಖ್ಯ ಕಚೇರಿ, ಹಡ್ಸನ್ ವೃತ್ತದ ಶೀತಲಗೃಹ ಮಾರಾಟ ಮಳಿಗೆ, ಜನತಾ ಬಜಾರ್ ಮಾರಾಟ ಮಳಿಗೆ 48, ಜನತಾ ಬಜಾರ್ ಸದಾಶಿವನಗರ ಮಳಿಗೆ, ರಾಜಾಜಿನಗರ ರಾಮಮಂದಿರ ಮಾರಾಟ ಮಳಿಗೆ, ವಿಜಯನಗರ ಮಾರಾಟ ಮಳಿಗೆ. ಬೆಂಗಳೂರು ಹೈಸ್ಕೂಲ್ ಚಾಮರಾಜಪೇಟೆ ಮಳಿಗೆ, ರಾಮಕೃಷ್ಣಾಶ್ರಮ ಮಳಿಗೆ, ಬಿಟಿಎಂ ಲೇಔಟ್ ಮಳಿಗೆ, ಕೋರಮಂಗಲ ದೇವಸ್ಥಾನ ಮಾರಾಟ ಮಳಿಗೆ.
ಬನಶಂಕರಿ ಕಾಂಪ್ಲೆಕ್ಸ್ ಮಳಿಗೆ, ಬಿ.ಎಂ.ಶ್ರೀ ವೃತ್ತ ಮಳಿಗೆ, ಕೋಲ್ಸ್ ಪಾರ್ಕ್ ವೆಸ್ಟ್ ಮಾರಾಟ ಮಳಿಗೆ, ಕುಮಾರ ಪಾರ್ಕ್ ಮಾರಾಟ ಮಳಿಗೆ, ಎನ್.ಆರ್. ಕಾಲೋನಿ ಮಳಿಗೆ, ಸೋಮೇಶ್ವರ ನಗರ ಮಾರಾಟ ಮಳಿಗೆ, ಜೀವನಭೀಮಾ ನಗರ ಮೇನ್ ರೋಡ್ ಮಾರಾಟ ಮಳಿಗೆ.
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications