ಎಚ್‌ಡಿಎಫ್‌ಸಿಯಿಂದ ಒಂದೇ ಕಂತು ಪಾವತಿಸುವ ಜೀವವಿಮೆ
ಬೆಂಗಳೂರು : ಎಚ್.ಡಿ.ಎಫ್.ಸಿ. ಸ್ಟಾಂಡರ್ಡ್ ಜೀವ ವಿಮಾ ಸಂಸ್ಥೆಯು ಜೀವ ವಿಮೇತರ ವಿಮಾ ಕ್ಷೇತ್ರಕ್ಕೆ ಪ್ರವೇಶಿಸುವ ಬಗ್ಗೆ ಮುಂದಿನ ಮೂರು ಅಥವಾ ನಾಲ್ಕು ತಿಂಗಳ ಅವಧಿಯಲ್ಲಿ ನಿರ್ಧಾರ ಪ್ರಕಟಿಸಲಿದೆ.
ಈ ವಿಷಯವನ್ನು ಸಂಸ್ಥೆಯ ಅಧ್ಯಕ್ಷ ದೀಪಕ್ ಪಾರೇಖ್ ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಈ ಸಂಬಂಧ ಸಹ ಭಾಗಿತ್ವಕ್ಕಾಗಿ ತಮ್ಮ ಸಂಸ್ಥೆಯು ಅಮೆರಿಕಾ ಹಾಗೂ ಏಷ್ಯಾದ ಎರಡು ವಿದೇಶೀ ಕಂಪನಿಗಳೊಂದಿಗೆ ಮಾತುಕತೆ ನಡೆಸಿದೆ ಎಂದೂ ಅವರು ಹೇಳಿದರು. ಜೀವ ವಿಮಾ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳಲು ಎಚ್‌ಡಿಎಫ್‌ಸಿ ಪ್ರಥಮ ಆದ್ಯತೆ ನೀಡಲಿದೆ ಎಂದರು.
ಬೆಂಗಳೂರಿನಲ್ಲಿ ಬುಧವಾರ ಕಂಪನಿಯು ಕಾರ್ಯಾರಂಭ ಮಾಡಿದ ಸಂದರ್ಭದಲ್ಲಿ ಜೀವಿತಾವಧಿಗೆ ಒಂದೇ ಕಂತಿನ ಪ್ರೀಮಿಯಂ ಪಾವತಿಸುವ ಕಂಪನಿಯ 15ನೇ ಹೊಸ ಯೋಜನೆಗಳನ್ನು ಪಾರೇಖ್ ಪ್ರಕಟಿಸಿದರು. ಕಂಪನಿ ಗ್ರಾಹಕರಿಗೆ ನೀಡುತ್ತಿರುವ ಫ್ಲೆಕ್ಸಿಬಲ್ ಯೋಜನೆಗಳಲ್ಲಿ ಇದೂ ಒಂದಾಗಿದ್ದು, ದೀರ್ಘಾವಧಿವರೆಗೆ 25 ಸಾವಿರ ರುಪಾಯಿಗಳಿಂದ 5 ಲಕ್ಷ ರುಪಾಯಿಗಳ ಮೊತ್ತದವರೆಗೆ ಜೀವವಿಮೆ ಮಾಡಿಸಲು ಈ ಯೋಜನೆಯಲ್ಲಿ ಅವಕಾಶ ಇದೆ.
ಸಂಸ್ಥೆಯು ಒಟ್ಟಾರೆ 160 ಕೋಟಿ ರುಪಾಯಿಗಳ ಈಕ್ವಿಟಿ ಹೊಂದಿದ್ದು, ಅದರಲ್ಲಿ ಕಂಪನಿಯ ವಿದೇಶೀ ಪಾಲುದಾರ ಸಂಸ್ಥೆಯಾದ ಸಾಂಡರ್ಡ್ ಲೈಫ್‌ನ ಪಾಲು 30 ಕೋಟಿ ರುಪಾಯಿಗಳಾಗಿವೆ.
(ಯು.ಎನ್.ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications