ಹೆಚ್ಚು ಹಣ ಸಂಪಾದಿಸುವ ಕ್ರಿಕೆಟ್ ತಂಡ ಯಾವುದು?
ಮೆಲ್ಬೋರ್ನ್ : ಟೆಸ್ಟ್ ಕ್ರಿಕೆಟ್ ಆಟಗಾರನೊಬ್ಬ ಇನ್ನು ಕೆಲವೇ ವರ್ಷಗಳಲ್ಲಿ ಮೊದಲನೇ ಮಿಲೆನಿಯರ್ ಆಗಲಿದ್ದಾರೆ. ಅದು ಯಾರಿರಬಹುದು? ಸಚಿನ್, ಗಂಗೂಲಿ, ದ್ರಾವಿಡ್... ಇವರಾರೂ ಅಲ್ಲ. ಈ ಅವಕಾಶ ದಕ್ಕಲಿರುವುದು ಆಸ್ಟ್ರೇಲಿಯಾ ತಂಡದ ಒಬ್ಬ ಆಟಗಾರನಿಗೆ. 4 ವರ್ಷ ಅವಧಿಯ ಮಹತ್ವದ ಒಪ್ಪಂದವೊಂದಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ(ಎಸಿಬಿ) ಒಪ್ಪಿರುವುದೇ ಇದಕ್ಕೆ ಕಾರಣ.
ಎಸಿಬಿಯ ಮುಖ್ಯ ವ್ಯವಸ್ಥಾಪಕ ಮಾಲ್ಕಂ ಸ್ಪೀಡ್ ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಈ ಒಪ್ಪಂದದಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಹಣ ಗಳಿಸುವ ತಂಡವಾಗಲಿದೆ ಎಂದರು.
ಪ್ರಸ್ತುತ ಮಂಡಳಿಯ ಒಪ್ಪಂದಕ್ಕೆ ಒಳಪಟ್ಟಿರುವ ಆಟಗಾರರು ಹೆಚ್ಚೆಂದರೆ, 3 ಲಕ್ಷದ 15 ಸಾವಿರ ಡಾಲರ್ ವಾರ್ಷಿಕ ಮೊತ್ತ ಗಳಿಸಬಹುದು. ಆದರೆ ಹೊಸ ಒಪ್ಪಂದದನ್ವಯ 2004ರಿಂದ ಈ ಮೊತ್ತ 5 ಲಕ್ಷದ 20 ಸಾವಿರ ಡಾಲರ್‌ನಷ್ಟಾಗಲಿದೆ ಎಂದು ಸ್ಪೀಡ್ ಹೇಳಿದರು.
ಪ್ರತಿ ವರ್ಷ ಎಸಿಬಿ 25 ಆಟಗಾರರನ್ನು ಕಾಂಟ್ರಾಕ್ಟ್‌ಗೆ ಒಳಪಡಿಸುತ್ತದೆ. ಈ ಪೈಕಿ ರ್ಯಾಂಕ್ ಯಾದಿಯಲ್ಲಿ ಮೊದಲ ಸ್ಥಾನ ಗಳಿಸುವ ಆಟಗಾರ ಹೆಚ್ಚು ಹಣ ಮಾಡುತ್ತಾನೆ. ಕಳೆದ ವರ್ಷದ ಎಲ್ಲಾ ಟೆಸ್ಟ್ ಹಾಗೂ ಒಂದು ದಿನದ ಪಂದ್ಯಗಳಿಂದ ಆಸ್ಟ್ರೇಲಿಯಾ ನಾಯಕ ಸ್ಟೀವ್ ವಾ 6 ಲಕ್ಷ ಡಾಲರ್ ಹಣ ಸಂಪಾದಿಸಿದ್ದಾರೆ. ಕ್ರಿಕೆಟ್, ಜಾಹಿರಾತು ವಗೈರೆಗಳಿಂದ ಶೇನ್ ವಾರ್ನ್ ಸ್ಟೀವ್ ವಾ ಅವರಿಗಿಂತ ದುಪ್ಪಟ್ಟು ಹಣ ಸಂಪಾದಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.
ಆಯ್ಕೆ ಮಂಡಳಿ ಯಾವ ಆಟಗಾರ ಉತ್ತಮ, ಯಾರಿಗೆ ಯಾವ ರ್ಯಾಂಕ್ ಕೊಡಬೇಕು ಎಂದು ನಿರ್ಧರಿಸುತ್ತದೆ. ಮಿಲೆನಿಯರ್ ಆಗುವ ಯೋಗ ಯಾವ ಆಟಗಾರನಿಗಿದೆಯೋ, ಕಾಲವೇ ನಿರ್ಧರಿಸಲಿದೆ ಎನ್ನುತ್ತಾರೆ ಮಾಲ್ಕಂ ಸ್ಪೀಡ್.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications