Get Updates
Get notified of breaking news, exclusive insights, and must-see stories!

‘ಕನ್ನಡ ವಿದ್ವತ್ತೆಯ ಇತಿಹಾಸವನ್ನು ಕ್ರಮಬದ್ಧವಾಗಿ ಬರೀಬೇಕು’

ಬೆಂಗಳೂರು : ಕವಿರಾಜ ಮಾರ್ಗದ ನೃಪತುಂಗನಿಂದ ಹಿಡಿದು ಕಿಟ್ಟೆಲ್‌, ರೈಸ್‌ವರೆಗಿನ ಕನ್ನಡ ವಿದ್ವತ್ತೆಯ ಇತಿಹಾಸವನ್ನು ಕ್ರಮಬದ್ಧವಾಗಿ ಮತ್ತು ಸಮಗ್ರವಾಗಿ ರಚಿಸಬೇಕಾಗಿದೆ. ಈ ಜವಾಬ್ದಾರಿಯನ್ನು ಯುವ ಸಂಶೋಧಕರು ಹೊತ್ತುಕೊಳ್ಳಬೇಕು ಎಂದು ಹಿರಿಯ ಸಂಶೋಧಕ ಡಾ. ಟಿ.ವಿ. ವೆಂಕಟಾಚಲ ಹೇಳಿದ್ದಾರೆ.

ಅವರು ಮಂಗಳವಾರ , ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ ಏರ್ಪಡಿಸಿದ್ದ ಸಮಾರಂಭದಲ್ಲಿ ಚಿದಾನಂದ ಪುರಸ್ಕಾರ ಸ್ವೀಕರಿಸಿ ಮಾತನಾಡುತ್ತಿದ್ದರು. ಕನ್ನಡದಲ್ಲಿ ಕವಿಗಳಿಗೆ ಉತ್ತಮ ಸ್ಥಾನಮಾನ, ಪ್ರಾಶಸ್ತ್ಯ ಸಿಗುವ ಹಾಗೆ ಸಂಶೋಧಕರಿಗೆ ಸಿಗಲಿಲ್ಲ, ಅಂತರರಾಷ್ಟ್ರೀಯ ವಿಶ್ವ ಕೋಶಗಳಲ್ಲಿಯೂ ಕವಿಗಳ ಹೆಸರು ಕಾಣಸಿಗುತ್ತದೆ. ಆದರೆ ವೆಂಕಟಸುಬ್ಬಯ್ಯ, ಕಿಟ್ಟೆಲ್‌ರಂತಹ ವಿದ್ವಾಂಸರ ಹೆಸರು ದಾಖಲಾಗಿಲ್ಲ ಎಂದು ಶಾಸ್ತ್ರಿಗಳು ವಿಷಾದಿಸಿದರು.

ವಿದ್ವಾಂಸರಿಗೆ ಹಳೆಗನ್ನಡ ಅಧ್ಯಯನ ಪಂಚಾಕ್ಷರಿ ಜಪದಂತೆ. ಆದ್ದರಿಂದ ಪ್ರೌಢ ಶಾಲೆಯಲ್ಲಿ ಹಳೆಗನ್ನಡ ಅಧ್ಯಯನವನ್ನು ಕಡಿಮೆ ಮಾಡಬಾರದು ಎಂದು ಕಿವಿ ಮಾತು ಹೇಳಿದ ಅವರು ಕನ್ನಡ ಪ್ರೀತಿಗಾಗಿ ಸಂಶೋಧನಾಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ, ಡಿ.ಎಲ್‌. ನರಸಿಂಹಾಚಾರ್‌, ಪುಟ್ಟಪ್ಪ ಅವರಂತಹ ಗುರುಗಳೇ ಅದಕ್ಕೆ ಪ್ರೇರಣೆ ಎಂದರು. ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಈ ಪ್ರಶಸ್ತಿಯನ್ನು ವಿದ್ವಾಂಸರು ಮತ್ತು ಸಂಶೋಧಕರಿಗೇ ಮೀಸಲಾಗಿರಿಸಬೇಕು ಎಂದು ಅವರು ಪ್ರಶಸ್ತಿ ಆಯ್ಕೆ ಸಮಿತಿಗೆ ಸಲಹೆ ಮಾಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+