Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಇವತ್ತಿನ ದಿನದ ಮಟ್ಟಿಗೆ ಮನರಂಜನೆಗಳನ್ನೆಲ್ಲಾ ಎತ್ತಿ ಬದಿಗಿಡಿ. ಅಷ್ಟೊಂದು ಕೆಲಸಗಳು ನಿಮ್ಮ ಕಾಯುತ್ತಿರುತ್ತವೆ. ಅದಕ್ಕೆ ತಕ್ಕ ಪ್ರತಿಫಲವೂ ಸಿಗಲಿದೆ.

ವೃಷಭ : ಮನೆಯಲ್ಲಿನ ಸಣ್ಣ ಪುಟ್ಟ ಮಾತುಕತೆಗಳು ನಿಮ್ಮ ಕಂಗೆಡಿಸುತ್ತವೆ. ಹಾಗೆಂದು ಆಫೀಸು ಕೆಲಸಗಳಲ್ಲೂ ಉದಾಸೀನ ತೋರಿಸಿದರೆ, ಆಪತ್ತು ಎದುರಾಗುತ್ತದೆ.

ಮಿಥುನ : ಆರ್ಥಿಕ ಹಾನಿಯಾಗಲಿದೆ ಎಂದರೆ ನೀವು ಜಾಗರೂಕರಾಗಿರಬೇಕು ಎಂದೇ ಅರ್ಥ. ತುಂಬಾ ದಿನಗಳಿಂದ ಪೋಷಿಸಿಕೊಂಡು ಬಂದಿರುವ ಕನಸನ್ನು ಕೈ ಬಿಟ್ಟಿರುವುದಕ್ಕೆ ಬೇಜಾರು ಮಾಡಿಕೊಳ್ಳುತ್ತೀರಿ.

ಕಟಕ : ನಿಮ್ಮ ಯಾವತ್ತಿನ ಅಲವತ್ತುಕೊಳ್ಳುವಿಕೆಗೆ ಇನ್ನೊಬ್ಬರು ತಲೆಕೆಡಿಕೊಳ್ಳಬೇಕು ಎಂಬ ನಿರೀಕ್ಷೆ ಸಲ್ಲದು. ಮನೆಯವರೆಲ್ಲರೂ ನಿಮ್ಮ ಒಳ್ಳೆಯದನ್ನೇ ಹಾರೈಸುತ್ತಾರಲ್ಲವೇ?

ಸಿಂಹ : ಬರೀ ಜಂಬದಿಂದ ಕೆಲಸ ಕಾರ್ಯಗಳಿಗೆ ಹಾನಿ ತಂದಿಟ್ಟುಕೊಳ್ಳುತ್ತೀರಿ. ಕೈತುಂಬಾ ಕಾಸು ಬರಲಿದೆ ಎಂಬುದೇ ದೊಡ್ಡ ಖುಷಿಯ ಸಂಗತಿ.

ಕನ್ಯಾ : ಶಾಪಿಂಗ್‌ ಹೋಗುವುದೆಂದರೆ ಯಾರಿಗೆ ಖುಷಿಯಿಲ್ಲ ಅಂತ ಹೇಳಿ. ಆದರೆ ಟೋಪಿ ಬೀಳದಂತೆ ಎಚ್ಚರ ವಹಿಸುವುದು ಅಗತ್ಯ.

ತುಲಾ : ನಿಮ್ಮ ಸೃಜನ ಶೀಲ ಕೆಲಸ ಕಾರ್ಯಗಳನ್ನು ಪಕ್ಕಕ್ಕಿಟ್ಟು ತುಂಬಾ ದಿನವಾಗಿದೆ. ಅವುಗಳನ್ನು ಮತ್ತೆ ಆರಂಭಿಸಲು ಉತ್ತಮ ಅವಕಾಶ ನಿಮ್ಮನ್ನರಸಿಕೊಂಡು ಬರಲಿದೆ.

ವೃಶ್ಚಿಕ : ಆಪ್ತರ ಉತ್ತಮ ಮಾತುಗಳಿಗಾಗಿ ಕಾಯುತ್ತಿದ್ದರೆ ನಿರಾಶೆಯಾಗುತ್ತದೆ. ಆದರೆ ದಿನವೆಲ್ಲಾ ಇವತ್ತು ನಿಮ್ಮನ್ನು ಖುಷಿಯಾಗಿರಿಸುತ್ತದಲ್ಲಾ?

ಧನಸ್ಸು : ಆಧ್ಯಾತ್ಮದತ್ತ ನಿಮ್ಮ ಆಸಕ್ತಿ ಕಂಡು ಸ್ನೇಹಿತರು ಆಪ್ತರು ಭಯಪಡುತ್ತಾರೆ. ಆದರೆ ನಿಮ್ಮ ಯೋಚನೆಗಳು, ಚಿಂತನೆಗಳು ನಿಮ್ಮನ್ನು ಉತ್ತಮ ದಾರಿಗೆ ಕೊಂಡೊಯ್ಯಲಿವೆ.

ಮಕರ : ಭ್ರಮೆಗಳು ಕಳೆದುಹೋಗದೇ ಇದ್ದರೆ ನೀವು ತುಂಬಾ ಕಷ್ಟಪಡುತ್ತೀರಿ. ಪ್ರವಾಸ ಹೋಗುವ ಕನಸು ನಿಮ್ಮ ದಿನವನ್ನು ಖುಷಿಯಾಗಿರಿಸುತ್ತದೆ.

ಕುಂಭ : ನಿಮ್ಮ ಯಶಸ್ಸನ್ನು ಕದಿಯಲು ಬೇರೆಯವರು ಹಾಕುತ್ತಿರುವ ಹೊಂಚಿಗೆ ಬಲಿಯಾಗಬೇಡಿ. ಆಪ್ತೇಷ್ಟರ ಭೇಟಿ ಮನಸ್ಸಿಗೆ ನೆಮ್ಮದಿ ತರುತ್ತದೆ.

ಮೀನ : ಇನ್ನೊಬ್ಬರ ಬಗ್ಗೆ ನಿಮ್ಮ ಅತಿ ಕಾಳಜಿಯಿಂದಾಗಿ ನೀವು ಹಿಂದೆ ಬೀಳುತ್ತೀರಿ. ಮನೆ ಮಂದಿಯಾಂದಿಗೆ ಒಂದು ಸಂತಸದ ಸಂಜೆ ಇದೆ. ಅದನ್ನು ಕಳೆದಕೊಳ್ಳಬೇಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+