ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 27 : ಕೊಡಗು ಜಿಲ್ಲಾ ನಿವೃತ್ತಸೈನ್ಯಾಧಿಕಾರಿಗಳ ಸಮಾವೇಶ

By Staff
|
Google Oneindia Kannada News

ಮಡಿಕೇರಿ: ವೀರರ ನಾಡು ಎಂದೇ ಕರೆಸಿಕೊಳ್ಳುವ ಕೊಡಗು, ದೇಶಕ್ಕೆ ನೀಡಿದ ಸೈನಿಕರ ಸಂಖ್ಯೆ ದೊಡ್ಡದು. ಅಲ್ಲೀಗ ನಿವೃತ್ತ ಸೈನಿಕರ ದೊಡ್ಡ ಸಂಘವೇ ಇದೆ. ಕೂರ್ಗ್‌ ಎಕ್ಸ್‌ ಸರ್ವಿಸ್‌ಮೆನ್‌ ಪರ್ಸೋನೆಲ್‌ ಅಸೋಸಿಯೇಷನ್‌ . ಇದರ ಆತಿಥ್ಯದಲ್ಲಿ ಕೊಡಗು ಜಿಲ್ಲಾ ಮಟ್ಟದ ನಿವೃತ್ತ ಸೈನ್ಯಾಧಿಕಾರಿಗಳ ಪ್ರಥಮ ಸಮಾವೇಶವನ್ನು ಮೇ 27 ರಂದು ಆಯೋಜಿಸಲಾಗಿದೆ.

ಇತ್ತೀಚೆಗೆ ರಚನೆಯಾಗಿರುವ ಈ ಮಾಜಿ ಸೈನಿಕರ ಸಂಘದಲ್ಲಿ , ನಿವೃತ್ತರಾಗಿರುವ ಲೆಫ್ಟಿನೆಂಟ್‌ ಕರ್ನಲ್‌ ಬಿ.ಸಿ. ನಂದಾ ಮತ್ತು ಏರ್‌ ಮಾರ್ಷಲ್‌ ಕೆ. ಸಿ. ಕಾರಿಯಪ್ಪ ಅವರೂ ಸದಸ್ಯರಾಗಿದ್ದಾರೆ. ಈ ವಿಷಯವನ್ನು ಸೋಮವಾರದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಿ. ಎ. ಕಾರಿಯಪ್ಪ ತಿಳಿಸಿದ್ದಾರೆ.

ನಿವೃತ್ತ ಸೈನ್ಯಾಧಿಕಾರಿಗಳ ಮತ್ತು ಹುತಾತ್ಮರ ಕುಟುಂಬಗಳ ಸಮಸ್ಯೆಯತ್ತ ಗಮನ ಹರಿಸುವ ನಿಟ್ಟಿನಲ್ಲಿ ಈ ಸಂಘ ಅಸ್ತಿತ್ವಕ್ಕೆ ಬಂದಿದೆ. ಕೊಡಗಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಮಾಜಿ ಸೈನಿಕರಿದ್ದಾರೆ. ಪ್ರಸ್ತುತ ಸಂಘದಲ್ಲಿ 500 ಮಂದಿ ಸದಸ್ಯರಿದ್ದಾರೆ.

ಜಿಲ್ಲೆಯ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ಈ ರೀತಿಯ ಸಮಾವೇಶವೊಂದು ನಡೆಯುತ್ತಿದೆ. ಕೊಡಗಿನ ಎಲ್ಲ ನಿವೃತ್ತ ಸೈನಿಕರು ಇದರಲ್ಲಿ ಭಾಗವಹಿಸಬೇಕು ಎಂದು ಬಿ. ಎ. ಕಾರಿಯಪ್ಪ ಅವರು ಕರೆ ಕೊಟ್ಟಿದ್ದಾರೆ. ಸಂಘದ ಸದಸ್ಯತ್ವ ಪಡೆಯಬೇಕಾದವರು ಕೊಡಗಿನಲ್ಲಿರುವ ಆರ್ಮಿ ಕ್ಯಾಂಟೀನನ್ನು ಸಂಪರ್ಕಿಸಬಹುದು. ಅಥಾವ ಸಮ್ಮೇಳನದಲ್ಲಿಯೇ ಸದಸ್ಯತ್ವ ಪಡೆಯಬಹುದು ಎಂದು ಅವರು ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X