ಅಶೋಕಾ ಹೊಟೇಲಿನಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ಕೊಲೆ
ಬೆಂಗಳೂರು : ಕರೆನ್ಸಿ ವಿನಿಮಯಕ್ಕೆ ಸಂಬಂಧಿಸಿದಂತೆ ಅನಾಮಧೇಯ ದುಷ್ಕರ್ಮಿಗಳು, ಸಿಂಡಿಕೇಟ್ ಬ್ಯಾಂಕ್‌ನ ಇಬ್ಬರು ನಿವೃತ್ತ ಅಧಿಕಾರಿಗಳನ್ನು ಅಶೋಕಾ ಪಂಚತಾರಾ ಹೊಟೇಲಿಗೆ ಕರೆಸಿ, ಓರ್ವನನ್ನು ಕೊಲೆ ಮಾಡಿರುವ ಭೀಕರ ಕೃತ್ಯ ನಗರದಲ್ಲಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಆಚಾರ್ಯ (50) ಎಂದು ಗುರ್ತಿಸಲಾಗಿದ್ದು , ನರಸಿಂಹನ್ (45) ಎನ್ನುವ ಮತ್ತೊಬ್ಬ ವ್ಯಕ್ತಿ ಗಾಯಗೊಂಡು ಮಲ್ಲಿಗೆ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ಲಕ್ಷ ರುಪಾಯಿ ಮೌಲ್ಯದ ಭಾರತೀಯ ಕರೆನ್ಸಿಯನ್ನು ಡಾಲರ್‌ಗಳಿಗೆ ವಿನಿಮಯ ಮಾಡಿಕೊಡುವುದಾಗಿ ನಂಬಿಸಿದ ದುಷ್ಕರ್ಮಿಗಳು, ಇವರಿಬ್ಬರೂ ಹೊಟೇಲ್‌ಗೆ ಬಂದಾಗ, ಮಾದಕ ವಸ್ತು ನೀಡಿ ಕೈ ಕಾಲು ಕಟ್ಟಿ ಸ್ನಾನದ ಟಬ್‌ಗೆಸೆದು ಹಣದೊಂದಿಗೆ ಪರಾರಿಯಾಗಿದ್ದಾರೆ. ಸೋಮವಾರ ರಾತ್ರಿ ಈ ಘಟನೆ ಸಂಭವಿಸಿದೆ.
ಸಿಂಡಿಕೇಟ್‌ನ ಬ್ಯಾಂಕ್‌ನ ನೌಕರರಾಗಿದ್ದ ಆಚಾರ್ಯ ಹಾಗೂ ನರಸಿಂಹನ್ ಬ್ಯಾಂಕ್‌ನಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಅಲಸೂರಿನ ಟ್ರೇಡ್‌ವಿಂಗ್ಸ್ ಟ್ರಾವೆಲ್ಸ್ ಕಂಪನಿಯಲ್ಲಿ ಆಚಾರ್ಯ ಕಾರ್ಯ ನಿರ್ವಹಿಸುತ್ತಿದ್ದರು. ಆಚಾರ್ಯ ಹಾಗೂ ನರಸಿಂಹನ್ ಹಣದೊಂದಿಗೆ ಅಶೋಕಾ ಹೊಟೇಲ್‌ಗೆ ಹೋಗುತ್ತಿದ್ದೇವೆಂದು ಟ್ರಾವೆಲ್ಸ್ ಕಂಪನಿಯ ಸಿಬ್ಬಂದಿಗೆ ತಿಳಿಸಿ ತೆರಳಿದವರು, ರಾತ್ರಿ ಬಹಳ ಹೊತ್ತಿನವರೆಗೂ ವಾಪಸ್ಸಾಗದಿದ್ದಾಗ, ಏಜೆನ್ಸಿಯ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದಾಗ ಕೊಲೆ- ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಕೊಠಡಿಯನ್ನು ಪ್ರವೇಶಿಸಿದಾಗ, ಆಚಾರ್ಯ ನಿಧನರಾಗಿದ್ದರೆ, ನರಸಿಂಹನ್ ಪ್ರಜ್ಞಾಶೂನ್ಯರಾಗಿದ್ದರು.
ಆಚಾರ್ಯ ಅವರ ಕಾರು ಹೊಟೇಲಿನ ಆವರಣದಲ್ಲಿ ಪತ್ತೆಯಾಗಿದ್ದು , ಹೈಗ್ರೌಂಡ್ಸ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications