ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಚ್‌ ವರದಿ ಕೇಳಿ ಕಾಂಗರೂಗಳಿಗೆ ಕರೆ ಬಂದಿತ್ತಂತೆ !

By Staff
|
Google Oneindia Kannada News

ಮೆಲ್ಬೋರ್ನ್‌ : ಇತ್ತೀಚೆಗಷ್ಟೇ ಮುಕ್ತಾಯವಾದ ಭಾರತ ವಿರುದ್ಧದ ಸರಣಿಯ ಚೆನ್ನೈ ಟೆಸ್ಟ್‌ನ ಕೊನೆಯ ದಿನ, ಅನಾಮಧೇಯ ವ್ಯಕ್ತಿಯಾಬ್ಬ ಪಿಚ್‌ನ ವರ್ತನೆ ಹಾಗೂ ತಾಂತ್ರಿಕ ಅಂಶಗಳ ಮಾಹಿತಿಗಾಗಿ ದೂರವಾಣಿ ಮೂಲಕ ಆಸ್ಟ್ರೇಲಿಯಾ ಆಟಗಾರರನ್ನು ಸಂಪರ್ಕಿಸಿದ್ದ ಎಂದು ಆಸ್ಟ್ರೇಲಿಯನ್‌ ಕ್ರಿಕೆಟ್‌ ಮಂಡಳಿಯ ಮುಖ್ಯ ವ್ಯವಸ್ಥಾಪಕ ಮಾಲ್ಕಮ್‌ ಸ್ಪೀಡ್‌ ಮಂಗಳವಾರ ಹೇಳಿದ್ದಾರೆ.

ಚೆನ್ನೈ ಟೆಸ್ಟ್‌ನ 5 ನೇ ದಿನದ ಬೆಳಿಗ್ಗೆ , ಕಾಂಗರೂ ಆಟಗಾರರಾದ ಗಿಲ್‌ಕ್ರಿಸ್ಟ್‌ , ಕೊಲಿನ್‌ ಮಿಲ್ಲರ್‌ ಹಾಗೂ ತರಬೇತುದಾರ ಜಾನ್‌ ಬುಚನನ್‌ ಅವರು ಅನಾಮಧೇಯ ದೂರವಾಣಿ ಕರೆಗಳನ್ನು ಸ್ವೀಕರಿಸಿದರು. ಸಂಪರ್ಕಿಸಿದ ವ್ಯಕ್ತಿಗಳು ಮೈದಾನದ ವರ್ತನೆ ಹಾಗೂ ಪಂದ್ಯದ ಬಗ್ಗೆ ಆಟಗಾರರ ಅಭಿಪ್ರಾಯಗಳನ್ನು ಬಯಸಿದರು ಎಂದು ಸ್ಪೀಡ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆ ಕೂಡಲೇ ದೂರವಾಣಿ ಕರೆಗಳನ್ನು ತುಂಡರಿಸಿದ ಆಟಗಾರರು, ಅನಾಮಧೇಯ ಕರೆಗಳ ವಿಷಯವನ್ನು ತಂಡದ ಮೇನೇಜರ್‌ ಗಮನಕ್ಕೆ ತಂದರು. ಆತ , ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಗೆ ವಿಷಯವನ್ನು ಮುಟ್ಟಿಸಿದ. ನಂತರ ತನಿಖೆಗಾಗಿ ಐಸಿಸಿ ಭ್ರಷ್ಟಾಚಾರ ತಡೆ ಸಮಿತಿಗೆ ಅನಾಮಧೇಯ ಕರೆಗಳ ಬಗೆಗೆ ತಿಳಿಸಲಾಯಿತು ಎಂದು ಮಾಲ್ಕಮ್‌ ಸ್ಪೀಡ್‌ ಹೇಳಿದರು.

ಇತ್ತೀಚೆಗಷ್ಟೇ ಭಾರತದಲ್ಲಿ ಭುಗಿಲೆದ್ದಿದ್ದ ಮೋಸದಾಟ ಪ್ರಕರಣ ತನ್ನ ಕಾವು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲೇ, ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಯ ಈ ಹೇಳಿಕೆ ಮೋಸದಾಟ ಪ್ರಕರಣಕ್ಕೆ ಹೊಸ ತಿರುವನ್ನು ನೀಡಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X