ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಒಂದೆರಡು ದಿನ ಕಳೆದ ನಂತರ ನಿಮ್ಮ ಪರಿಸ್ಥಿತಿ ಸುಧಾರಿಸುತ್ತದೆ. ಸಾಮಾಜಿಕ ಬದ್ಧತೆ ಹಾಗೂ ನಿಮ್ಮೊಳಗಿನ ತೊಳಲಾಟಗಳು ಅಭದ್ರತೆ ಉಂಟು ಮಾಡುತ್ತವೆ. ನೀವು ದಾರಿತಪ್ಪುವ ಸಾಧ್ಯತೆಯೇ ಹೆಚ್ಚು. ಎಚ್ಚರ.ವೃಷಭ : ಬದುಕಿನ ಭದ್ರತೆ, ಉತ್ತಮ ನೌಕರಿಯ ಅನ್ವೇಷಣೆಯಲ್ಲಿದ್ದೀರಿ. ವಿದೇಶದಲ್ಲಿರುವವರು, ಸ್ವದೇಶಕ್ಕೆ ಮರಳುವ ಸಾಧ್ಯತೆಯೂ ಇದೆ. ಕುಲದೇವತಾರ್ಚನೆಯಿಂದ ಶುಭ.
ಮಿಥುನ : ಅನೇಕ ಸಮಸ್ಯೆಗಳನ್ನು ಎದುರಿಸುವುದು ಅನಿವಾರ್ಯ. ಆದರೆ, ತಲೆ ಕೆಡಿಸಿಕೊಳ್ಳಬೇಡಿ. ಎಲ್ಲ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಅನಗತ್ಯ ತೊಂದರೆ ತಂದುಕೊಳ್ಳಬೇಡಿ.
ಕಟಕ : ಪ್ರವಾಸದ ಸೂಚನೆಗಳು ನಿಚ್ಚಳವಾಗಿದೆ. ಮನೆ ಬದಲಿಸುವ ಸಾಧ್ಯತೆಯೂ ಇದೆ. ಮನೆಯಲ್ಲಿ ಶುಭಕಾರ್ಯದ ಮಾತುಕತೆ. ಕಾರ್ಯಕ್ಷೇತ್ರದಲ್ಲಿ ಕೊಂಚ ಎಡವಟ್ಟು.
ಸಿಂಹ : ನೌಕರಿ ಬದಲಾಗುವ ಕಾಲ. ಉತ್ತಮ ಅವಕಾಶ ಅರಸಿ ಬಂದಿದೆ. ಸಂತಸ, ಆನಂದ ಒಮ್ಮೆಲೆ ಆಲಂಗಿಸುತ್ತದೆ. ತಡೆದುಕೊಳ್ಳುವ ಶಕ್ತಿ ರೂಢಿಸಿಕೊಳ್ಳಿ. ಹಿಂದೆ ಮಾಡಿದ ತಪ್ಪು ಪುನರಾವರ್ತನೆ ಆದೀತು ಎಚ್ಚರ.
ಕನ್ಯಾ : ಇದ್ದಲ್ಲೇ ಇರುವ ಅಗತ್ಯ ಇಲ್ಲ. ಅದೃಷ್ಟ ಬಂದಾಗ ಮೆರೆಯಲೇ ಬೇಕು ಎಂದೇನೂ ಇಲ್ಲ. ಅಲ್ಪನಿಗೆ ಐಶ್ವರ್ಯ ಬಂದಾಗ ಅರ್ಧರಾತ್ರಿಯಲ್ಲಿ ಕೊಡೆ ಹಿಡಿದ ಎಂಬ ಅಪಖ್ಯಾತಿ ಹೊರಬೇಡಿ.
ತುಲಾ : ಕೇವಲ ಅವರಿವರನ್ನು ಹೀಯಾಳಿಸುತ್ತಿದ್ದರೆ, ನಿಮ್ಮ ಗೌರವಕ್ಕೇ ಕುಂದು. ಯಾವುದಕ್ಕೂ ಒಂದು ಮಿತಿ ಇದೆಯಲ್ಲ. ಬೇರೆಯವರು ತಿರುಗಿಬೀಳುವ ಮುನ್ನ ಎಚ್ಚೆತ್ತುಕೊಂಡರೆ ನಿಮಗೇ ಕ್ಷೇಮ.
ವೃಶ್ಚಿಕ : ಅದೃಷ್ಟ ನಿಮ್ಮನ್ನೇ ಹುಡುಕಿಕೊಂಡು ಬರುತ್ತಿದೆ. ಕುಹಕಿಗಳಿಗೆ ತಕ್ಕ ಪಾಠ ಹೇಳಿದ್ದೀರಿ. ಪ್ರಾಯೋಗಿಕ ತಳಹದಿಯಲ್ಲಿ ನೀವು ಮಾಡುವ ಹೊಸ ಯೋಜನೆಗಳು ಯಶಸ್ವಿಯಾಗುತ್ತವೆ.
ಧನಸ್ಸು : ಪ್ರಶ್ನೆಯಾಂದಕ್ಕೆ ಉತ್ತರ ಹುಡುಕುತ್ತಿದ್ದೀರಿ. ಗುರಿ ಸಾಧನೆಯಲ್ಲಿ ಸಾಕಷ್ಟು ಅಡ್ಡಿ ಆತಂಕಗಳಿದ್ದರೂ, ನೀವದನ್ನು ನಿಭಾಯಿಸುತ್ತೀರಿ. ಜಯ ನಿಮ್ಮದೆ.
ಮಕರ : ಭಾವನಾತ್ಮಕ ಬದುಕಿನಲ್ಲಿ ಇಂದು ನಿಮಗೆ ಶುಭದಿನ. ವಿಶ್ರಾಂತಿಯಿಂದ ಮನಸ್ಸಿಗೆ ನೆಮ್ಮದಿ. ಧನಲಾಭವಿದೆ. ಷೇರು ವ್ಯವಹಾರದಲ್ಲಿ ಸಂಪೂರ್ಣ ಯಶಸ್ಸು. ಹೆಚ್ಚಿನದಿನ್ನೇನು ಬೇಕು.
ಕುಂಭ : ನಿಮ್ಮ ಪ್ರತಿಭೆ ಸಾಧನೆಗೆ ಒಂದು ಪ್ರಶಸ್ತಿಯೇ ಬರಬೇಕು. ಆದರೂ, ನಿಮ್ಮ ಶ್ರಮವನ್ನು ಯಾರೂ ಗುರುತಿಸುತ್ತಿಲ್ಲ ಎಂಬ ಕೊರಗು ನಿಮಗಿದೆ. ಚಿಂತಿಸಬೇಡಿ. ಇಂದು ನಿಮ್ಮ ಕೆಲಸಕ್ಕೆ ಪುರಸ್ಕಾರ ಸಿಗುತ್ತದೆ.
ಮೀನ : ಬೇರೆಯವರಿಂದ ನಿಮಗೆ ತೊಂದರೆ ಉಂಟಾಗದಂತೆ ಎಚ್ಚರವಹಿಸಿ. ಹಿತಶತ್ರುಗಳು ನಿಮ್ಮ ಬೆನ್ನು ಇರಿಯಲು ಹವಣಿಸುತ್ತಿದ್ದಾರೆ. ಸಮಸ್ಯೆಯ ಪರಿಹಾರ ಹೇಗೆ ಎಂಬುದು ಮುಂದೆ ಸ್ಪಷ್ಟವಾಗಲಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications