Get Updates
Get notified of breaking news, exclusive insights, and must-see stories!

ಎಲ್ಲೆಡೆ ಇರುವ ಒಳ್ಳೆಯತನವೇ ದೇವರು - ಎ.ಎನ್‌. ಮೂರ್ತಿರಾವ್‌

ಹಾಸನ : ಒಳ್ಳೆಯತನ ನಮ್ಮೆಲ್ಲರ ಹೃದಯದಲ್ಲಿದ್ದು , ಈ ಒಳ್ಳೆಯತನವೇ ದೇವರು. ಆದ್ದರಿಂದ ದೇವರು ಎಲ್ಲಡೆಯೂ ಇದ್ದಾನೆ ಎಂದು ಪಂಪ ಪ್ರಶಸ್ತಿ ವಿಜೇತ ಸಾಹಿತಿ ಹಾಗೂ ಜನಪ್ರಿಯ ಲಲಿತ ಪ್ರಬಂಧಕಾರ ಎ.ಎನ್‌. ಮೂರ್ತಿರಾವ್‌ ಹೇಳಿದ್ದಾರೆ.

ಹಾಸನ ಕಲಾಭವನದಲ್ಲಿ ನಡೆದ ಹಾಸನ ಆಕಾಶವಾಣಿಯ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಎಲ್ಲರ ಹೃದಯದಲ್ಲಿರುವ ಒಳ್ಳೆಯತನವನ್ನೇ ದೇವರು ಎನ್ನಬಹುದೇ ಹೊರತು ದೇವರ ಕುರಿತು ಪ್ರತ್ಯೇಕವಾದ ಕಲ್ಪನೆ ಇಲ್ಲ , ವಿಶ್ವದ ಎಲ್ಲರ ಕ್ಷೇಮವನ್ನು ಚಿಂತಿಸುವುದೇ ಒಳ್ಳೆಯತನ ಎಂದು ಅಭಿಪ್ರಾಯಪಟ್ಟರು. ಕಾಲ ಕೆಟ್ಟು ಹೋಯಿತು ಎನ್ನುವುದು ಸುಳ್ಳು. ಹಿಂದಿನ ಕಾಲಕ್ಕಿಂತ ಈಗಿನ ಕಾಲವೇ ಶ್ರೇಷ್ಠ ಎಂದು ಮೂರ್ತಿರಾವ್‌ ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಕನಿರಾಂ ಅವರು, ದೂರದರ್ಶನದಿಂದ ಆಕಾಶವಾಣಿ ಮೂಲೆಗುಂಪಾಗುತ್ತದೆ ಎನ್ನುವ ಊಹಾಪೋಹ ಸುಳ್ಳಾಗಿದೆ ಎಂದರು. ಅವರು ಶಿಲಾಕುಸುಮ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಬೆಂಗಳೂರು ಆಕಾಶವಾಣಿ ಕೇಂದ್ರದ ನಿರ್ದೇಶಕ ಹೆಚ್‌.ಆರ್‌. ಕೃಷ್ಣಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+