Get Updates
Get notified of breaking news, exclusive insights, and must-see stories!

ನಕಲಿ ಕ್ರೆಡಿಟ್‌ ಕಾರ್ಡ್‌ ಬಳಸಿ ವಂಚಿಸುತ್ತಿದ್ದ ಮೂವರ ಬಂಧನ

ಬೆಂಗಳೂರು : ಅಂತರರಾಷ್ಟ್ರೀಯ ನಕಲಿ ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಅಲಸೂರು ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ನಕಲಿ ಕಾರ್ಡ್‌ಗಳನ್ನು ಬಳಸಿ ಸುಮಾರು 1.2 ಲಕ್ಷ ರುಪಾಯಿ ಮೌಲ್ಯದ ವಿದ್ಯುನ್ಮಾನ ಉಪಕರಣ ಹಾಗೂ ಚಿನ್ನವನ್ನು ಬಂಧಿತ ಆರೋಪಿಗಳು ಖರೀದಿಸಿದ್ದು , ಬಂಧಿತರಿಂದ 2 ವಾಷಿಂಗ್‌ ಮಿಷನ್‌, ಕಲರ್‌ ಟಿವಿ, ಮ್ಯೂಸಿಕ್‌ ಸಿಸ್ಟಂ ಹಾಗೂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ವಂಚನೆಗೆ ಸಂಬಂಧಿಸಿದಂತೆ ತಮಿಳುನಾಡಿನ ರವಿಚಂದ್ರನ್‌ ಅಲಿಯಾಸ್‌ ರವಿ (36), ಶಿವಾಜಿನಗರದ ದಾಮೋದರನ್‌ (31) ಹಾಗೂ ಪ್ರಕಾಶ್‌ ಚಂದ್‌ (53) ಎನ್ನುವವರನ್ನು ಬಂಧಿಸಲಾಗಿದ್ದು , ಅವರಿಂದ ಬ್ರಿಟನ್‌, ಅಮೆರಿಕಾ ಸೇರಿದಂತೆ ಯುರೋಪಿನ ವಿವಿಧ ರಾಷ್ಟ್ರಗಳ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಕಾರ್ಡ್‌ಗಳಲ್ಲಿ 4 ಗೋಲ್ಡ್‌, 4 ಪ್ಲಾಟಿನಂ, 2 ಸಿಲ್ವರ್‌ ಹಾಗೂ 3 ಅಮೆರಿಕನ್‌ ಎಕ್ಸ್‌ಪ್ರೆಸ್‌ ಕಾರ್ಡ್‌ಗಳು ಸೇರಿವೆ.

(ಇನ್ಫೋ ವಾರ್ತೆ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+