Get Updates
Get notified of breaking news, exclusive insights, and must-see stories!

ಆಸ್ಟ್ರೇಲಿಯಾದಲ್ಲಿ ಭಾರತದಿಂದ ಕದ್ದ ಹೆಣ್ಣು ಶಿಶುಗಳ ಮಾರಾಟ

* ಪಾರಿತೋಷ್‌ ಪರಾಶರ್‌

ಸಿಡ್ನಿ : ಹೆಣ್ಣು ಶಿಶುಗಳ ಕಳವು ಹಾಗೂ ಮಾರಾಟ ಹಗರಣ ಈಗ ಹೊಸ ತಿರುವು ಪಡೆದಿದೆ. ಇಲ್ಲಿನ ಪತ್ರಿಕೆಯಾಂದು ಭಾರತ ಮೂಲದ ಅನಾಥಾಲಯಗಳಿಂದ ಹಾಗೂ ಹೆರಿಗೆ ಆಸ್ಪತ್ರೆಗಳ ವಾರ್ಡ್‌ನಿಂದ ಕದ್ದ ಮಕ್ಕಳನ್ನು ಆಸ್ಟ್ರೇಲಿಯಾದಲ್ಲಿ ದತ್ತು ನೀಡಲು ಮಾರಾಟ ಮಾಡಲಾಗಿದೆ ಎಂದು ವರದಿ ಮಾಡಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ಮೂಲದ ಕೆಲವು ಮಹಿಳೆಯರು ಹೆಸರನ್ನು ಹಾಗೂ ಮಕ್ಕಳ ಹಕ್ಕು ಪ್ರಚಾರಕರ ಹೇಳಿಕೆಗಳನ್ನು ಉದ್ಧರಿಸಿರುವ ಸಂಡೇ ಹೆರಾಲ್ಡ್‌, ಭಾರತದ ಮಕ್ಕಳನ್ನು ಅದರಲ್ಲೂ ಹೆಣ್ಣು ಮಕ್ಕಳನ್ನು ಬಹು ಕೋಟಿ ರುಪಾಯಿಗಳ ಈ ಅಂತಾರಾಷ್ಟ್ರೀಯ ರ್ಯಾಕೆಟ್‌ನಲ್ಲಿ ಆಸ್ಟ್ರೇಲಿಯನ್ನರು ಕೊಂಡಿದ್ದಾರೆ ಎಂದು ಹೇಳಿದೆ.

ಭಾರತದ ಹೆಣ್ಣು ಶಿಶುವೊಂದನ್ನು ಮೆಲ್ಬೋರ್ನ್‌ನ ದಂಪತಿಗಳಿಗೆ 30,000 ಆಸ್ಟ್ರೇಲಿಯನ್‌ ಡಾಲರ್‌ಗಳಿಗೆ ಮಾರಾಟ ಮಾಡಲಾಗಿದೆ. ಆದರೆ, ಆ ಮಗುವಿನ ತಾಯಿಗೆ ದೊರೆತಿದ್ದು ಕೇವಲ 25 ಆಸ್ಟ್ರೇಲಿಯನ್‌ ಡಾಲರ್‌ ಮಾತ್ರ ಎಂದು ಭಾರತದ ಹೆಸರಾಂತ ಸಾಮಾಜಿಕ ಹಕ್ಕು ಪ್ರಚಾರಕಿ ಶೋಭಾ ಫನ್ಸೀಕರ್‌ ಪ್ರಸ್ತಾಪಿಸಿದ್ದಾರೆಂದು ಪತ್ರಿಕೆ ತಿಳಿಸಿದೆ.

ಈ ಮಕ್ಕಳ ಮಾರಾಟ ಜಾಲದಲ್ಲಿ ಹೈದರಾಬಾದ್‌ ಐದು ದತ್ತಕ ಸಂಸ್ಥೆಗಳು ಭಾಗಿಯಾಗಿವೆ ಎಂದು ಹೈದರಾಬಾದ್‌ ಬಳಿ ಗ್ರಾಮ್ಯ ಸಂಪನ್ಮೂಲ ಕೇಂದ್ರ ನಡೆಸುತ್ತಿರುವ ಶೋಭಾ ಫನ್ಸೀಕರ್‌ ಆರೋಪಿಸಿದ್ದಾರೆ. ಈ ದತ್ತಕ ಸಂಸ್ಥೆಗಳ ಪೈಕಿ ಎರಡಕ್ಕೆ ಕೇಂದ್ರ ಸರಕಾರದ ಪರವಾನಗಿ ಕೂಡ ಇದೆ ಎಂದು ಅವರು ಆರೋಪಿಸಿದ್ದಾರೆ. ಇಂತಹ ಇನ್ನೂ ಹಲವು ಸಂಸ್ಥೆಗಳಿರುವ ಬಗ್ಗೆ ಶೋಭಾ ಶಂಕಿಸಿದ್ದಾರೆಂದು ಪತ್ರಿಕೆ ತಿಳಿಸಿದೆ.

ಭಾರತೀಯ ಹೆಣ್ಣು ಮಕ್ಕಳನ್ನು ದತ್ತುವಿನ ಹೆಸರಿನಲ್ಲಿ ಆಸ್ಟ್ರೇಲಿಯಾದ ತಂದೆ - ತಾಯಿಯರಿಗೆ 2,500 ಆಸ್ಟ್ರೇಲಿಯನ್‌ ಡಾಲರ್‌ನಿಂದ 10 ಸಾವಿರ ಆಸ್ಟ್ರೇಲಿಯನ್‌ ಡಾಲರ್‌ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದೂ ಶೋಭಾ ಅವರನ್ನು ಬೆಂಬಲಿಸಿರುವ ಗ್ಲೋಬಲ್‌ ಸಿಸ್ಟರ್‌ಹುಡ್‌ ನೆಟ್‌ವರ್ಕ್‌ನ ಸಂಚಾಲಕರು ತಿಳಿಸಿದ್ದಾರೆ.

ಅನಾಥಾಲಯಗಳಷ್ಟೇ ಅಲ್ಲದೆ, ಅಮಾಯಕ ಹಳ್ಳಿಗರಿಂದ ಮಕ್ಕಳನ್ನು ಅಪಹರಿಸುವ ಏಜೆಂಟರುಗಳು ಕೂಡ ಈ ಕುಕೃತ್ಯದಲ್ಲಿ ತೊಡಗಿದ್ದಾರೆ. ಕೆಲವೊಮ್ಮೆ ಅಪಹರಿಸಲಾಗುವ ಮಕ್ಕಳ ವಯಸ್ಸು ಕೇವಲ ಒಂದು ದಿನವೂ ಆಗಿರುವುದಿಲ್ಲ. ಆಟದ ಮೈದಾನಗಳಿಂದ ಹಾಗೂ ಹೆರಿಗೆ ಆಸ್ಪತ್ರೆಗಳ ವಾರ್ಡ್‌ಗಳಿಂದ ಕೂಡ ಅಪಹರಣಗಳು ನಡೆದಿರುವ ಶಂಕೆಯಿದೆ. ಅಲ್ಲದೆ, ಮಗು ಒಲ್ಲದ ಗರ್ಭಿಣಿಯರು ಕೂಡ ಏಜೆಂಟರೊಂದಿಗೆ ಸಹಕರಿಸಿದ ಉದಾಹರಣೆಗಳೂ ಇಲ್ಲದಿಲ್ಲ.

ಮಕ್ಕಳ್ನು ಸಾಕಲು ಸಾಮರ್ಥ್ಯವಿಲ್ಲದ ಹಾಗೂ ಹಣದ ಅಗತ್ಯವಿರುವ ಪಾಲಕರಿಗೆ ಅಷ್ಟೋ ಇಷ್ಟೋ ಹಣ ನೀಡಿ ಮಕ್ಕಳನ್ನು ಕೊಂಡಿರುವ ಪ್ರಕರಣಗಳೂ ಇವೆ. ಹೆಣ್ಣು ಮಕ್ಕಳಾದರೆ, ಖರ್ಚು ಹೆಚ್ಚು ಎಂದು ತಿಳಿದಿರುವ ಪಾಲಕರಿಂದ ಹಲವಾರು ಸಕ್ರಮ ಹಾಗೂ ಅಕ್ರಮ ಅನಾಥಾಲಯಗಳು ಹೆಣ್ಣು ಶಿಶುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ.

(ಐ.ಎ.ಎನ್‌.ಎಸ್‌)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+