ಕೆನರಾಬ್ಯಾಂಕ್ನಲ್ಲಿ ಹಿರಿಯ ನಾಗರಿಕರಿಡುವಠೇವಣಿಗೆ ಹೆಚ್ಚಿನ ಬಡ್ಡಿ
ಬೆಂಗಳೂರು : ಸರಕಾರ ಹಿರಿಯ ನಾಗರಿಕರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಈಗ ರಾಷ್ಟ್ರೀಕೃತ ಕೆನರಾಬ್ಯಾಂಕ್ ಕೂಡ ವೃದ್ಧರಿಗಾಗಿಯೇ ತತ್ಕ್ಷಣದಿಂದಲೇ ಜಾರಿಗೆ ಬರುವ ಆಶಾದಾಯಕವಾದ ಹೊಸ ಯೋಜನೆಯಾಂದನ್ನು ಆರಂಭಿಸಿದೆ.
ತನ್ನ ಬ್ಯಾಂಕ್ನ ಯಾವುದೇ ಶಾಖೆಯಲ್ಲಿ ಇನ್ನು ಮುಂದೆ ವೃದ್ಧರು ಇಡುವ ಠೇವಣಿಗೆ ನಿಗದಿತ ಬಡ್ಡಿದರಕ್ಕಿಂತಲೂ ಅರ್ಧ % ಹೆಚ್ಚುವರಿ ಬಡ್ಡಿ ನೀಡುತ್ತದೆ. ಈ ಸೌಲಭ್ಯ 60 ವರ್ಷ ಮೇಲ್ಪಟ್ಟ ವೃದ್ಧರಿಡುವ ಠೇವಣಿಗೆ ಮಾತ್ರ ಅನ್ವಯಿಸುತ್ತದೆ.
15 ದಿನಗಳ ಅವಧಿಯ ಠೇವಣಿಗೆ ಶೇ. 5.25ರಷ್ಟು ಹಾಗೂ ಮೂರು ವರ್ಷದ ಅವಧಿಯ ಠೇವಣಿಗೆ ಶೇ. 9.50ರಷ್ಟು ಬಡ್ಡಿ ನೀಡಲಾಗುವುದು ಎಂದು ಬ್ಯಾಂಕ್ನ ಪ್ರಕಟಣೆ ತಿಳಿಸಿದೆ. ವೃದ್ಧರು ಇಡುವ ಠೇವಣಿಯನ್ನು ಸಹ ಇತರ ಠೇವಣಿಗಳಂತೆಯೇ ಪರಿಗಣಿಸಲಾಗುವುದು. ಒಂದು ವೇಳೆ ವೃದ್ಧರು ಇತರರ ಜತೆಗೂಡಿ ಇಡುವ ಠೇವಣಿಗೂ ಕೂಡ ಈ ಹೆಚ್ಚುವರಿ ಬಡ್ಡಿ ದರ ಅನ್ವಯಿಸಲಿದೆ.
ಆದರೆ, ವೃದ್ಧರು ಪ್ರಮುಖ ಠೇವಣಿದಾರರರಾಗಿರಬೇಕು. ಹೆಚ್ಚಿನ ಬಡ್ಡಿ ಪಡೆಯಲಿಚ್ಛಿಸುವ ಠೇವಣಿದಾರರು ತಮ್ಮ ವಯಸ್ಸಿನ ದಾಖಲೆ ಪತ್ರದ ಸಹಿತ ಬ್ಯಾಂಕಿಯ ಯಾವುದೇ ಶಾಖೆಯನ್ನಾದರೂ ಸಂಪರ್ಕಿಸಬಹುದು. ಪಿಂಚಣಿ ಆದೇಶ, ಪಾಸ್ಪೋರ್ಟ್, ಎಲ್.ಐ.ಸಿ ಪಾಲಿಸಿ, ರೇಷನ್ಕಾರ್ಡ್ಗಳನ್ನು ವಯಸ್ಸಿನ ದಾಖಲೆಗೆ ಪರಿಗಣಿಸಲಾಗುವುದು ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications