Get Updates
Get notified of breaking news, exclusive insights, and must-see stories!

ನರ್ಮದಾ ಬಚಾವೋ ಮೇಧಾಗೆ ಬಸವಶ್ರೀ ಪ್ರಶಸ್ತಿ ಪ್ರದಾನ

Medha Pathkarಚಿತ್ರದುರ್ಗ : ಚಿತ್ರದುರ್ಗದ ಮುರುಘರಾಜೇಂದ್ರ ಮಠ ಪ್ರತಿವರ್ಷ ನೀಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ಶನಿವಾರ ನಡೆದ ಸರಳ ಹಾಗೂ ಅವಿಸ್ಮರಣೀಯ ಸಮಾರಂಭದಲ್ಲಿ ನರ್ಮದಾ ಬಚಾವೋ ಆಂದೋಲನದ ಪ್ರವರ್ತಕಿ ಮೇಧಾ ಪಾಟ್ಕರ್‌ಗೆ ಪ್ರದಾನ ಮಾಡಲಾಯಿತು.

ಪಾಟ್ಕರ್‌ ಅವರಿಗೆ ಒಂದು ಲಕ್ಷ ರುಪಾಯಿ ನಗದು ಹಾಗೂ ಬಸವಶ್ರೀ ಪ್ರಶಸ್ತಿ ಫಲಕವನ್ನು ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಪ್ರದಾನ ಮಾಡಿದಾಗ ಹರ್ಷೋದ್ಗಾರ ಮುಗಿಲು ಮುಟ್ಟಿತು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಕರತಾಡನದ ಮೂಲಕ ಮೇಧಾ ಪಾಟ್ಕರ್‌ ಅವರ ಪರಿಸರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೇಧಾ ಅವರು, ಸಿರಿವಂತರ ಐಷಾರಾಮಕ್ಕೆ ಆದಿವಾಸಿಗಳನ್ನು ಹಾಗೂ ದಲಿತರನ್ನು ಒಕ್ಕಲೆಬ್ಬಿಸುತ್ತಿರುವ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇಂದು ಭಾರತೀಯ ನಾಯಕತ್ವ ವಿದೇಶೀ ಬುದ್ಧಿಮತ್ತೆಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದೆ ಎಂದು ವಿಷಾದಿಸಿದರು.

ಈ ಪ್ರಶಸ್ತಿಯು ಅಭಿವೃದ್ಧಿಯ ಹೆಸರಿನಲ್ಲಿ ಅದಿವಾಸಿಗಳು, ದಲಿತರು, ದುರ್ಬಲ ವರ್ಗದವರ ಬದುಕನ್ನೇ ಹೊಸಕುವವರ ವಿರುದ್ಧ ನಡೆದ ಹೋರಾಟಕ್ಕೆ ಸಂದ ಮನ್ನಣೆಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ. ಶ್ರೀನಿವಾಸ ಪ್ರಸಾದ್‌, ಬರಗೂರು ರಾಮಚಂದ್ರಪ್ಪ ಮೊದಲಾದವರು ಪಾಲ್ಗೊಂಡಿದ್ದರು.

ಐದನೆಯವರು : ಮಹಾ ಮಾನವತಾವಾದಿ ಬಸವಣ್ಣನವರ ಹೆಸರಿನಲ್ಲಿ ಶ್ರೀಮಠ ಸ್ಥಾಪಿಸಿರುವ ಬಸವಶ್ರೀ ಪ್ರಶಸ್ತಿಯನ್ನು ಈ ಹಿಂದೆ ಬೆಲ್ದಾಳ್‌ ಸಿದ್ದರಾಮ ಶರಣರು, ಹಿರೇಮಲ್ಲೂರು ಈಶ್ವರನ್‌, ಡಾ. ಸುದರ್ಶನ್‌ ಹಾಗೂ ಅಣ್ಣಾ ಹಜಾರೆ ಅವರಿಗೆ ನೀಡಲಾಗಿತ್ತು. ಮೇಧಾ ಅವರು ಈ ಪ್ರಶಸ್ತಿ ಪಡೆದ ಐದನೆಯವರಾಗಿದ್ದಾರೆ.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+