• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕನ್ನರಿಗೆ ವಾಸ್ತು - ತಥಾಸ್ತು !

By Staff
|

ಮನೆ ಕಟ್ಟುವುದು ಎಂದರೆ, ಬದುಕನ್ನು ಕಟ್ಟಿಕೊಳ್ಳುವುದು ಅಂತಲೇ ಅರ್ಥ. ವ್ಯಕ್ತಿ ಗಳಿಸುವ ಯಶಸ್ಸಿನಲ್ಲಿ ಅವನ ಪ್ರತಿಭೆಯಷ್ಟೇ ಮನೆಯೂ, ಅಂದರೆ ಮನೆಯ ವಾಸ್ತುವೂ ಕಾರಣವಾಗುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ .

ಆದರೆ, ಈ ವಾಸ್ತು ಎಂದರೆ ಏನು ? ಅದನ್ನು ತಿಳಿಯುವುದು ಹೇಗೆ ? ಸಮಸ್ಯೆಗಳಿಗೆ ಪರಿಹಾರ ಸೂಚಿಸುವವರು ಯಾರು ? ಪ್ರಶ್ನೆಗಳಿಗೆಲ್ಲ ಉತ್ತರ ಇಲ್ಲಿದೆ. ವಾಸ್ತು ಈಗ ಆನ್‌ಲೈನ್‌ನಲ್ಲಿದೆ- ವಾಸ್ತುತಜ್ಞರು ಅಮೆರಿಕದಲ್ಲಿದ್ದಾರೆ. ಸಲಹೆ ಉಚಿತ.

ವಾಸ್ತು ಶಾಸ್ತ್ರಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಸರ್ವಶಕ್ತನ ಜಾಗತಿಕ ಪ್ರಭಾವಲಯದ ಕುರಿತು ಹೇಳುವ ವಾಸ್ತು - ನಿರಾಶೆಗಳನ್ನು , ಕಾಯಿಲೆ ಕಸಾಲೆಗಳನ್ನು , ನಿತ್ಯ ಬದುಕಿನ ದುರಂತಗಳನ್ನು ತಪ್ಪಿಸಿಕೊಳ್ಳುವ ಬಗೆಗೆ ಮಾರ್ಗದರ್ಶನ ನೀಡುತ್ತದೆ. ಅಂಥಾ ಅಪರೂಪದ ಶಾಸ್ತ್ರದ ಒಳಗುಟ್ಟುಗಳನ್ನು ನಿಮ್ಮ ಮನೆಗೆ ಅಳವಡಿಸಿಕೊಳ್ಳುವ ಬಗೆಗೆ, ಆ ಮೂಲಕ ಬದುಕನ್ನು ಸುಖಕರವಾಗಿ ಬದಲಿಸಿಕೊಳ್ಳುವ ಬಗೆಗೆ ನಮ್ಮ ವಾಸ್ತು ತಜ್ಞ ಎ.ಆರ್‌. ಹರಿ ಸಲಹೆಗಳನ್ನು ನೀಡಲಿದ್ದಾರೆ, ಉಚಿತವಾಗಿ !

ದಶಕಗಳ ಕಾಲದ ವೈಜ್ಞಾನಿಕ ಅಧ್ಯಯನ

ವಾಸ್ತುಶಾಸ್ತ್ರದ ಕುರಿತು ಹರಿ ಅವರು ದಶಕಕ್ಕೂ ಹೆಚ್ಚು ಕಾಲ ಅಧ್ಯಯನ ನಡೆಸಿದ್ದಾರೆ. ಈ ಮೂಲಕ ವಾಸ್ತುವೆನ್ನುವುದು ಸಮಗ್ರ ವಿಜ್ಞಾನ ಅನ್ನುವುದನ್ನು ಅವರು ಕಂಡುಕೊಂಡಿದ್ದಾರೆ. ತಮ್ಮ ಸಿದ್ಧಾಂತಗಳನ್ನು ‘ದಿ ಅಮೇಜಿಂಗ್‌ ಸೈನ್ಸ್‌ ಆಫ್‌ ವಾಸ್ತು’ ಎನ್ನುವ ಪುಸ್ತಕದಲ್ಲಿ ಅವರು ಪ್ರಕಟಿಸಿದ್ದಾರೆ. ಸಾವಿರಕ್ಕೂ ಹೆಚ್ಚಿನ ವಾಸಗಗೃಹಗಳ ಬಗ್ಗೆ ಅಧ್ಯಯನ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ, ಅವುಗಳೆಲ್ಲ ಹರಿ ಅವರ ಸಿದ್ಧಾಂತದಲ್ಲಿ ಕಾಣಬಹುದು.

ವಾಸ್ತುವೆನ್ನುವುದು ತನ್ನ ಕಾಲ ಮೇಲೆಯೇ ನಿಲ್ಲುವಂತಹ ವಿಜ್ಞಾನ . ವಾಸ್ತುವಿಗೆ ಜ್ಯೋತಿಷ್ಯ ಅಥವಾ ಸಂಪ್ರದಾಯದ ಆಸರೆ ಬೇಕಿಲ್ಲ ಅನ್ನುವ ಹರಿ, ತಮ್ಮ ಬಲವಾದ ನಂಬುಗೆಯನ್ನು ಪುಸ್ತಕದಲ್ಲಿ ಬಿಂಬಿಸಿದ್ದಾರೆ. ವಾಸ್ತು ಹಾಗೂ ಅದರ ಕಾರಣಗಳನ್ನು ವಿವರಿಸುವಾಗ, ಜ್ಯೋತಿಷ್ಯ ಅಥವಾ ಸಂಪ್ರದಾಯಕ್ಕೆ ಅವರು ಜೋತು ಬೀಳುವುದಿಲ್ಲ . ಇದರಿಂದಾಗಿ, ಅವರ ಪುಸ್ತಕ ವಾಸ್ತುವಿನ ಬಗ್ಗೆ ಪ್ರಕಟವಾಗಿರುವ ಇತರ ಪುಸ್ತಕಗಳಿಗಿಂತ ವಿಭಿನ್ನವಾಗಿದೆ.

ಹರಿ ಈಗ ಅಮೇರಿಕಾದಲ್ಲೇ ಇದ್ದಾರೆ

ಪ್ರಸ್ತುತ ಅಮೆರಿಕದಲ್ಲಿ ತಂಗಿರುವ ವಾಸ್ತು ತಜ್ಞ ಹರಿ ಅವರು, ಜೂನ್‌ 2001 ರವರೆಗೂ ಸಮಾಲೋಚನೆಗೆ ಲಭ್ಯರು. ಇಂಡಿಯಾಇನ್ಫೋದ ಓದುಗರ, ವಾಸ್ತುವಿಗೆ ಸಂಬಂಧಿಸಿದ ಎಲ್ಲ ಬಗೆಯ ಸಂದೇಹಗಳಿಗೆ ವೈಯಕ್ತಿಕವಾಗಿ ಉತ್ತರಿಸಲು ಅವರು ಸಂತೋಷದಿಂದ ಒಪ್ಪಿದ್ದಾರೆ. ಅಗತ್ಯ ಬಿದ್ದರೆ ನಿಮ್ಮ ವಾಸಸ್ಥಳಕ್ಕೂ ಅವರು ಭೇಟಿ ನೀಡುತ್ತಾರೆ. ಪ್ರಶ್ನೆಗಳನ್ನು , ಸಮಸ್ಯೆಗಳನ್ನು ವಿಳಾಸಕ್ಕೆ ಇ- ಮೇಲ್‌ ಮಾಡಬಹುದು. ವಿವರಗಳನ್ನು ಗೌಪ್ಯವಾಗಿಡಲಾಗುವುದು.

Vaastu counseling online NOW FREE in the US !!!

http://usa./vaastu.html

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more