ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನಿಮ್ಮ ಸಂತಾಪ, ಸಹಾನುಭೂತಿಗಳನ್ನು ಗಿಟ್ಟಿಸಿಕೊಳ್ಳಲು ಸ್ನೇಹಿತರು ಆಡುವ ನಾಟಕಕ್ಕೆ ಮೋಸ ಹೋಗಬೇಡಿ. ಮನೆ ಕೆಲಸಗಳೆಲ್ಲಾ ಇವತ್ತು ಚೆನ್ನಾಗಿ ನಡೆಯುತ್ತವೆ.ವೃಷಭ : ಕೆಲಸಕ್ಕೆ ಹೋಗುವಾಗಲೇ ಬೇಜಾರನ್ನು ಹೊತ್ತು ಕೊಂಡು ಹೋಗುತ್ತೀರಿ. ಆದರೆ ಆಫೀಸಿನ ವಾತಾವರಣ ನಿಮ್ಮನ್ನು ಚೆನ್ನಾಗಿಡುತ್ತದೆ.
ಮಿಥುನ : ಸ್ವಯಂಕೃತಾಪರಾಧಗಳೂ ಪರಿಣಾಮ ಬೀರುತ್ತವೆ ಎಂಬುದು ನಿಮಗೆ ತಿಳಿದಿರುವುದರಿಂದ ಅಂಥ ತೊಂದರೆಗಳೇನೂ ಇರುವುದಿಲ್ಲ.
ಕಟಕ : ವಿನಾ ಕಾರಣ ಸಿಟ್ಟು ಮಾಡಿಕೊಂಡರೆ ಕೆಲಸಗಳ ಜೊತೆಗೆ ಸಂಬಂಧಗಳೂ ಹಾಳಾಗುತ್ತವೆ. ಅಪರೂಪದ ಗೆಳೆಯರನ್ನು ಭೇಟಿಯಾಗುತ್ತೀರಿ.
ಸಿಂಹ : ಮೇಲಧಿಕಾರಿಯಿಂದ ಹೊಗಳಿಸಿಕೊಳ್ಳುತ್ತೀರಿ. ಶ್ರಮ ಪಟ್ಟಿದ್ದು ಸಾರ್ಥಕವಾಯಿತಪ್ಪಾ ಅಂತ ನಿಟ್ಟುಸಿರಿಡುತ್ತೀರಿ. ಸಂಗಾತಿಯಾಂದಿಗೆ ಗಲಾಟೆ ಬೇಡ.
ಕನ್ಯಾ : ವ್ಯಾಪಾರಿಗಳಿಗೆ ಲಕ್ಷ್ಮೀ ಆರಾಧನೆಯಿಂದ ಇವತ್ತು ಶುಭ. ಧನಲಾಭವಿದೆ. ಆದ್ದರಿಂದ ಪಿಕ್ ಪಾಕೆಟ್ ಬಗ್ಗೆ ಜೋಪಾನ.
ತುಲಾ : ಹೊಸ ಯೋಜನೆಗಳ ಆಫರ್ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಆದರೆ ಮೋಸ ಮಾಡುವ ಫ್ರೆಂಡ್ಸ್ ಇರುವುದರಿಂದ ಕಾಳಜಿ ಇದ್ದರೆ ಆಯ್ತು. ಒಟ್ಟಿನಲ್ಲಿ ನೀವೇ ವಿಜಯಿಯಾಗಲಿದ್ದೀರಿ.
ವೃಶ್ಚಿಕ : ಮನೆಯಲ್ಲಿ ಮಂಗಳ ಕಾರ್ಯ ನಡೆಸುವ ಹುಮ್ಮಸ್ಸಿನಲ್ಲಿ ಎಲ್ಲರೂ ಇರುವಾಗ ಮನಸ್ಸಿನಲ್ಲಿ ನೀವು ಕೊರಗುವುದು ನ್ಯಾಯವಾ ?
ಧನಸ್ಸು : ಬ್ಯಾಂಕಿಂಗ್ ಕೆಲಸಗಳತ್ತ ಇವತ್ತು ತಲೆ ಇಟ್ಟು ಮಲಗಬೇಡಿ. ಈ ಕ್ಷೇತ್ರದಲ್ಲಿ ಲಕ್ ಇಲ್ಲ. ಶಾಪಿಂಗ್ ಹೋಗುತ್ತೀರಾದರೆ ಇವತ್ತು ಲಾಭ ಇದೆ.
ಮಕರ : ವೃತ್ತಿಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಂತೆ ಕಾಣಿಸುತ್ತದೆ. ಅಸೈನ್‌ಮಂಟ್‌ಗಳು ಆಫೀಸಿನದಾದರೂ, ಸ್ನೇಹಿತರದಾದರೂ ಒಂದೇ ತೂಕದ್ದಲ್ಲವೇ ?
ಕುಂಭ : ಮನೆಗೆ ಹೊಸ ಉಪಕರಣಗಳನ್ನು ಖರೀದಿಸಬೇಕೆಂದುಕೊಂಡಿದ್ದೀರಿ. ಜಾಗರೂಕತೆಯಿಂದ ಇವತ್ತು ಪೇಟೆ ಕಡೆಗೆ ಕಾಲಿಡಿ.
ಮೀನ : ಆಫೀಸಿನಲ್ಲಿನ ಅನನುಕೂಲ ವಾತಾವರಣ ಎದುರಿಸಿ ಮನಸ್ಸು ಸೋತು ಹೋದಂತೆ ಭಾಸವಾದರೂ, ಮನೆಯಲ್ಲಿ ನೆಮ್ಮದಿ ಇರುತ್ತದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications