ಸ್ಥಳೀಯ ಪೌರ ಸಂಸ್ಥೆಗಳ ಚುನಾವಣೆ : ಕಾಂಗ್ರೆಸ್ ಭಾರಿ ದಿಗ್ವಿಜಯ
ಬೆಂಗಳೂರು : ನಾಲ್ಕು ಪಾಲಿಕೆ ಸೇರಿದಂತೆ 148 ಸ್ಥಳೀಯ ನಗರ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಭಾರಿ ಜಯಭೇರಿ ಹೊಡೆದಿದೆ. ಪ್ರತಿಪಕ್ಷಗಳು ಬಹುತೇಕ ಕಡೆಗಳಲ್ಲಿ ನೆಲಕಚ್ಚಿವೆ. ಕಾಂಗ್ರೆಸ್ ನಂತರದ ಸ್ಥಾನ ಪಡೆದಿರುವ ಪಕ್ಷೇತರ ಅಭ್ಯರ್ಥಿಗಳು ಹಲವು ಪುರಸಭೆಗಳ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ಖಚಿತವಾಗಿದೆ.
ಸಂಜೆಯ ಹೊತ್ತಿಗೆ ಬಹುತೇಕ ಪೌರಸಂಸ್ಥೆಗಳ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಬಹುಪಾಲು ಪೌರಸಂಸ್ಥೆಗಳಲ್ಲಿ ಸ್ಪಷ್ಟ ಬಹುಮತ ಪಡೆದಿದೆ. ಮರು ಮತದಾನ ನಡೆದ ಕಡೆಗಳಲ್ಲಿ ಮತಎಣಿಕೆ ಆರಂಭವಾಗಲಿದ್ದು, ಶನಿವಾರ ಪೂರ್ಣ ಫಲಿತಾಂಶ ಹೊರಬೀಳಲಿದೆ. ಭಾರತೀಯ ಜನತಾಪಕ್ಷ ಬಹುತೇಕ ಎಲ್ಲೆಡೆ ನೆಲಕಚ್ಚಿದೆ. ಸಂಯುಕ್ತ ಜನತಾದಳ ಹಾಗೂ ಜಾತ್ಯತೀತ ಜನತಾದಳ ಕೆಲವು ಕಡೆ ಮಾತ್ರ ಮೇಲುಗೈ ಸಾಧಿಸಿವೆ.
ಬೆಂಗಳೂರಿನ ಯಲಹಂಕದ 31 ಸ್ಥಾನಗಳ ಪೈಕಿ 16 ಸ್ಥಾನಗಳನ್ನು ಕಾಂಗ್ರೆಸ್, 6 ಸ್ಥಾನಗಳನ್ನು ಬಿ.ಜೆ.ಪಿ ಹಾಗೂ 8 ಕ್ಷೇತ್ರಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಆನೇಕಲ್‌ನ 23 ಸ್ಥಾನಗಳಲ್ಲಿ ಬಿ.ಜೆ.ಪಿ 11 ಹಾಗೂ ಕಾಂಗ್ರೆಸ್ 6 ಸ್ಥಾನಗಳಲ್ಲಿ ಗೆದ್ದಿದೆ.
ದೇವನಹಳ್ಳಿಯ 23 ಸ್ಥಾನಗಳಲ್ಲಿ 13 ಸ್ಥಾನಗಳಲ್ಲಿ ಪಕ್ಷೇತರರು ಹಾಗೂ 7ರಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ವಿಜಯಪುರದಲ್ಲಿ 14, ಚಳ್ಳಕೆರೆಯಲ್ಲಿ 15, ಹರಪನಹಳ್ಳಿಯಲ್ಲಿ 12, ಮಾಲೂರಿನಲ್ಲಿ 12, ಕುಣಿಗಲ್‌ನಲ್ಲಿ 13, ತಿಪಟೂರಿನಲ್ಲಿ 13, ಕೆ.ಆರ್. ನಗರದಲ್ಲಿ 10, ಹುಣಸೂರಿನಲ್ಲಿ 9, ಚಾಮರಾಜನಗರದಲ್ಲಿ 13, ಚಿಕ್ಕಮಗಳೂರಿನಲ್ಲಿ 12, ಹಾಸನದಲ್ಲಿ 13, ಅರಸೀಕೆರೆಯಲ್ಲಿ 12, ಸಕಲೇಶಪುರದಲ್ಲಿ 15, ಶ್ರೀರಂಗಪಟ್ಟಣದಲ್ಲಿ 9, ಮಡಿಕೇರಿಯಲ್ಲಿ 10, ಸವದತ್ತಿಯಲ್ಲಿ 10, ಜಮಖಂಡಿಯಲ್ಲಿ 18, ಮುಧೋಳದಲ್ಲಿ 13, ಗಜೇಂದ್ರಘಡದಲ್ಲಿ 11, ಬ್ಯಾಡಗಿಯಲ್ಲಿ 20, ದಾಂಡೇಲಿಯಲ್ಲಿ 18, ಗಂಗಾವತಿಯಲ್ಲಿ 19 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಹೊಡೆದಿದೆ.
ಕಾಂಗ್ರೆಸ್ ಸಂತಸ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಬೆಂಬಲ ನೀಡಿರುವ ಮತದಾರರಿಗೆ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಜಯಭೇರಿ ಬಾರಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅಲ್ಲಂ ವೀರಭದ್ರಪ್ಪ ಅವರು, ಕಾಂಗ್ರೆಸ್ ಪಕ್ಷವು ಜನತೆಗೆ ನೀಡಿರುವ ಭರವಸೆಗಳನ್ನು ಖಂಡಿತಾ ಈಡೇರಿಸುತ್ತದೆ ಎಂದರು.
ರಾಜ್ಯದ ಎಲ್ಲೆಡೆ ಕುಡಿವ ನೀರಿನ ಸಮಸ್ಯೆಯ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು, ಚರಂಡಿ, ವಿದ್ಯುತ್ ಪೂರೈಕೆಗೆ ಹೆಚ್ಚಿನ ಹಣ ವಿನಿಯೋಗಿಸಲಾಗುವುದು. ರಾಜ್ಯದ ಜನತೆ ತಮ್ಮ ಪಕ್ಷದ ಮೇಲಿಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬರದಂತೆ ಆಡಳಿತ ನಿರ್ವಹಿಸಲಾಗುವುದು ಎಂದರು.
ಈಶ್ವರಪ್ಪ ಆರೋಪ : ಕಳೆದ ಯಾವುದೇ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯದಿರುವಷ್ಟು ಹಣ ಹಾಗೂ ಹೆಂಡದ ಹೊಳೆ ಈ ಚುನಾವಣೆಯಲ್ಲಿ ಹರಿದಿದೆ ಎಂದು ಬಿ.ಜೆ.ಪಿಯ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಆಡಳಿತಾರೂಢ ಕಾಂಗ್ರೆಸ್ ಅಪಾರ ಹಣ, ಹೆಂಡ ಹಾಗೂ ಮಾಂಸವನ್ನು ಹಂಚಿದೆ ಎಂದೂ ಅವರು ಆರೋಪಿಸಿದರು.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications